ಸ್ಮಶಾನದ ಕಡೆಯಿಂದ ಹರಿದು ಬಂದ ನದಿಯಲ್ಲಿ ಒಂದು ಹೆಣ್ಣು ದೇಹ ತೇಲುತ್ತಿತ್ತು. ಹರಿವ ನದಿಯ ರಭಸದಲ್ಲಿ ಮತ್ತೆ ಒಂದು ಗಂಡು ದೇಹತೇಲಿ ಬಂದು ಹೆಣ್ಣು ದೇಹ ದೊಡಗೂಡಿತು. ನದಿಯ ದಡದ ಗಿಡದ ಮೇಲೆ ಕುಳಿತಿದ್ದ ಹಕ್ಕಿಗಳು ಗಂಡು ಹೆಣ್ಣಿನ ಜೋಡಿಯನ್ನು ನೋಡಿ “ಅಮರ ಪ್ರೇಮಿಗಳು, ಅಮರ ಪ್ರೇಮಿಗಳು!” ಎಂದು ಹಾಡಿದವು. ಅದು ಕಾಡೆಲ್ಲಾ ಪ್ರತಿಬಿಂಬಿಸಿತು. ನಾಡಿನ ಬಾಯಿಗಳು ಮಾತ್ರ “ಕುಲಗೆಟ್ಟ ಜೋಡಿಗಳು” ಎಂದು ಘೋಷಿಸಿದರು.
*****
Latest posts by ಪರಿಮಳ ರಾವ್ ಜಿ ಆರ್ (see all)
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021
- ಪಾಠ - December 30, 2020