ತಿಮ್ಮನ ಮನೆ ಹಸು ತುಂಬಾ ಹುಷಾರಿಲ್ಲದೇ ಸಾಯುವ ಪರಿಸ್ಥಿತಿ ತಲುಪಿತು. ತಿಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹಸು ಬದುಕಿದರೆ ಹಸುವನ್ನು ಮಾರಿ ಬರುವ ಹಣವನ್ನು ಹುಂಡಿಗೆ ಹಾಕುವುದಾಗಿ ಹರಕೆ ಹೊತ್ತು. ಹರಕೆ ಫಲವೆಂಬಂತೆ ಹಸು ಹುಷಾರಾಯಿತು. ತಿಮ್ಮನಿಗೆ ಹಸುವನ್ನು ಮಾರಿ ಹಣ ತಿಮ್ಮಪ್ಪ ಹುಂಡಿಗೆ ಹಾಕಲು ಮನಸ್ಸು ಬಾರದೆ ಹಸುವಿನ ಜೊತೆ ಗಿಣಿಯೊಂದನ್ನು ತೆಗೆದುಕೊಂಡು ಹಸುವನ್ನು ಮಾರಾಟ ಮಾಡಲು ಸಂತೆ ಕೊಂಡೊಯ್ದರು. ಗಿಣಿ ಬೆಲೆ ಸಾವಿರ ರೂಪಾಯಿ ಗಿಣಿಯನ್ನು ಕೊಂಡರೆ ಹಸು ಉಚಿತ ಎಂದು. ಗಿಣಿಯನ್ನು ಮಾರಿ ತಿಮ್ಮ ತಿಮ್ಮಪ್ಪನಿಗೆ ಟೋಪಿ ಹಾಕಿದ.
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)