ಒಬ್ಬ ಕಾಲೇಜು ತರುಣಿ ಮತ್ತು ಒಬ್ಬ ಗ್ರಹಸ್ಥ ಮಹಿಳೆ ಇಬ್ಬರೂ ಬಸ್ಸಿಗಾಗಿ ಕಾದು ನಿಂತಿದ್ದರು. ಕಾಲೇಜು ತರುಣಿ ತನ್ನ ಸಿಗರೇಟ್‍ಕೇಸನ್ನು ತೆಗೆದು ತಾನು ಒಂದು ತೆಗೆದುಕೊಳ್ಳುತ್ತಾ ಪಕ್ಕದ ಹೆಂಗಸಿಗೂ ಸಿಗರೇಟ್‍ಕೇಸ್ ಹಿಡಿದು “ತೆಗೆದುಕೊಳ್ಳಿ ಬಸ್ ಬರೋದು ತಡ ಇದೆ’. ಅಂದಳು “ಏನು ಹೆಂಗಸರು ಸಿಗರೇಟ್ ಸೇದುವುದೆ? ಅದರ ಬದಲಿಗೆ ದಾರಿಯಲ್ಲಿ ಹೋಗುವ ಯಾವುದಾದರೂ ಗಂಡಸನ್ನು ಮದುವೆ ಆಗಿಬಿಡುವುದು ಎಷ್ಟೋ ಮೇಲು” ಎಂದಳು ಆ ಗೃಹಸ್ಥೆ. ತಕ್ಷಣವೇ ತರುಣಿ ಸಿಗರೇಟ್ ಕೇಸನ್ನು ಮುಚ್ಚುತ್ತಾ “ನೀವು ಹೇಳೋದೇನೋ ಸರಿಯಾಗಿಯೇ ಇದೆ. ಆದರೆ ಆಂತಹ ಗಂಡಸು ಬರುವವರೆಗೂ ಹೇಗೆ ಕಾಲ ಕಳೆಯುವುದು? ಅದಕ್ಕಾಗಿಯೇ ಈ ಸಿಗರೇಟು!”
***