ಹಸಿವಿನೊಳಗೆ ರೊಟ್ಟಿ
ರೊಟ್ಟಿಯೊಳಗೆ ಹಸಿವು
ತನ್ಮಯತೆಯಲಿ ಬೆರೆತು
ಅಹಂಗಳು ನಾಶವಾಗಿ
ಪರಸ್ಪರ ಸೋಲದೇ ಗೆಲ್ಲದೇ
ಹಸಿವು ಹಸಿವೇ ಆಗಿ
ರೊಟ್ಟಿ ರೊಟ್ಟಿಯೇ ಆಗಿ
ಖಂಡಗಳು ಅಖಂಡವಾಗುವ
ಪರಿಪೂರ್ಣತೆಯ ಕೌತುಕ
ಆ ಕ್ಷಣದ ನಿಜ.
*****