ಕಾಸಿದ ಹಸುವಿನ ಹಾಲಿನ ಬಣ್ಣ
ಜಿಂಕೆಯ ಎರಡೂ ಕೊಂಬಿನ ಕಣ್ಣ

ಕಿಟಕಿಯ ಹತ್ತಿರ ಇಣುಕುತ ನಿಂತ
ತಾಳೆಯ ಮರದಿಂದ ದೊಪ್ಪಂತ ಬಿದ್ದ

ಎದ್ದೊರೆಸಿಕೊಂಡು ಎಲ್ಲೋದ್ನಣ್ಣ
ನಮ್ಮಯ ಮುದ್ದಿನ ಮೂನ್‌ಮೂನಣ್ಣ

ಹಾಲಲ್ಲಿಲ್ಲ ನೀರಲ್ಲಿಲ್ಲ
ಹುಡುಕಿ ನೋಡಿದರೆ ಎಲ್ಲೂ ಇಲ್ಲ

ಅಮಾವಾಸ್ಯೆ!
*****