೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ ಸೆಂಟಿಗ್ರೆಡ್ ಇರುತ್ತದೆಂದು ಉಷ್ಣತೆಯ ಮಾಪನ ಅಂತರೀಕ್ಷ ವಿಜ್ಞಾನಿಗಳು ಊಹಿಸಿದ್ದಾರೆ. ಭೂಮಿಯ ಮೇಲಿನ ಯಾವುದೇ ಘನ, ದ್ರವಪದಾರ್ಥಗಳು ಈ ಶಾಖಕ್ಕೆ ಆವಿಯಾಗಿ ಹೋಗುತ್ತವೆಂದೂ ಹೇಳುತ್ತಾರೆ.

ಈ ಸೂರ್ಯಗೋಳವನ್ನು ಆವರಿಸಿರುವ ವಾತಾವರಣ ಎರಡು ಪೊರೆಗಳಾಗಿರುತ್ತದೆ. ಈ ಪೊರೆಗಳ ಕೆಳಗೆ ಇರುವುದನ್ನು ಪೊಟೊಸ್ಟೀಯರ್ ಅಥವಾ ಸೊಲೂರ್ ಡಿಸ್ಕ್, ಎಂದು ಕರೆಯುತ್ತಾರೆ. ಇದರ ದಟ್ಟತೆ ೩೨೦ ಕಿ.ಮೀ. ಪೊಟೋಸ್ಟಿಯರ್ ಮೇಲೆ ಸೂರ್ಯ ಕಲೆಗಳು ಉಂಟಾಗುತ್ತಲಿರುತ್ತವೆ. ಇವುಗಳಿಗೂ ಭೂ ವಾತಾವರಣಕ್ಕೂ ಇರುವ ಸಂದರ್ಭದ ಬಗ್ಗೆ ಶತಮಾನಗಳಿಂದ ಸಂಶೋಧನೆಗಳು ನಡೆಯುತ್ತಿವೆ.

ಪೊಟೊಸ್ಟೀಯರ್ ಮೇಲೆ ಇರುವ ಮೊದಲ ಪೊರೆಗೆ ಕ್ರೋಮೊಸ್ಟಿಯರ್ ಎಂದು ಕರೆಯುತ್ತಿದ್ದು ಇದರ ದಪ್ಪ ೧೨,೦೦೦ ಕಿ.ಮೀ. ಇರುತ್ತದೆ. ಇಲ್ಲಿಯ ಉಷ್ಣತೆ ೫೦೦ ಕೋಟಿ ವರ್ಷಗಳಾಯಿತೆಂದು ಅಂದಾಜು ಮಾಡಲಾಗಿದೆ. ಕೆಲವು ವಿಜ್ಞಾನಿಗಳು ಸೂರ್ಯನ ಜೀವಿತಾವಧಿ (ಕಾಲಾವಧಿ) ಒಂದು ಸಾವಿರ ಕೋಟಿ ವರ್ಷಗಳೆಂದು ಹೇಳುತ್ತಾರೆ. ಸೂರ್ಯಗ್ರಹದ ಮೇಲಿರುವ ಹೈಡ್ರೋಜನ್ ಬೇಗ ಕಡಿಮೆಯಾಗುತ್ತಿರುವುದೇ ಸೂರ್ಯನ ಆಯುಷ್ಯ ಮೊಟಕಾಗಲು ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯನ ಭವಿಷ್ಯದ ಬಗೆಗೆ ಏನೇ ವರದಿಗಳಿದ್ದರೂ ಇಂಥಹ ಸೂರ್ಯನಿಗಿಂತ ಕಾಂತಿಯುತವಾದ ನಕ್ಷತ್ರಗಳು ಬಾಹ್ಯಾಕಾಶದಲ್ಲಿವೆ ಎಂಬ ವಿಷಯದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿಲ್ಲ. ಭೂಮಿಗೆ ೨೫,೦೦೦ ಬೆಳಕಿನ ವರ್ಷ ದೂರದಲ್ಲಿರುವ ಕೋಟಿ ಸೂರ್ಯರ ಸಮನಾದ ಬೆಳಕಿನೊಂದಿಗೆ ಬೆಳಗುವ “ಪಿಸ್ಟಲ್‌ಸ್ಟಾರ್” ಒಂದಿದೆ ಎಂದು ಇತ್ತೀಚಿಗೆ ಲಾಸ್ ಎಂಜಲೀಸ್ ವಿಜ್ಞಾನಿಗಳು ಗುರುತಿಸಿದ್ದಾರೆ.
*****