ಔಷಧಿಗಳು ‘ಪೀಡೆನಾಶಕಗಳು’ ಅಲಂಕಾರಕ ಸಾಮಗ್ರಿಗಳು, ಬಣ್ಣಗಳು ಇವೆಲ್ಲ ದೈನಂದಿನ ಬಳಕೆಯ ವಸ್ತುಗಳಾಗಿವೆ. ಹೊಲಗದ್ದೆಗಳಲ್ಲಿ ನೇರವಾಗಿ ಸಂಶ್ಲೇಷಿತ ಔಷಧಿಯನ್ನು, ಪ್ಲಾಸ್ಟಿಕ್‌ಗಳನ್ನು, ಪ್ಲಾಸ್ಟಿಕ್‌ನಂತಹ ಇತರೆ ಇಂಗಾಲದ ಉತ್ಪನ್ನಗಳಾದ ಪಾಲಿಹೈಡ್ರಾ ಕ್ಸೈ ಬ್ಯೂರೆಟ್ (P.H.B) ಪಾಲಿಥಿನ್‌ಗಳನ್ನು ಆಲೂಗಡ್ಡೆಯಂತಹ ಗೆಡ್ಡೆಗಳಲ್ಲಿ ಉತ್ಪಾದಿಸುವ ಪ್ರಯತ್ನಗಳು ನಡೆದಿವೆ. ಇವು ಪರಿಸರ ಮಾಲಿನ್ಯವನ್ನು ತಡೆಗಟ್ಟಿ, ವಾಯುಮಾಲಿನ್ಯದಿಂದ ಮುಕ್ತವಾದ ಕೈಗಾರಿಕೆಗಳು ಕೃಷಿಯಾಗಿ ಪರಿವರ್ತನೆಯಾಗುತ್ತವೆ. ಮನುಷ್ಯ ಪುನಃ ಹೊಲಗಳಲ್ಲಿ ಈ ಹೊಸ ಕೃಷಿಯನ್ನು ಮಾಡಲು ನಗರಗಳಿಂದ ಗ್ರಾಮಗಳಿಗೆ ವಲಸೆ ಹೋಗುವ ದಿನಗಳು ದೂರವಿಲ್ಲ. ಈ ಪ್ಲಾಸ್ಟಿಕ್ ಉತ್ಪಾದನೆಗಳು ಕೊಳೆಯದೇ ಕಸವಾಗಿ ಹಸಿರುಮನೆ ಪರಿಣಾಮದಿಂದ ಪರಿಸರವನ್ನು ಕಾಡುತ್ತಿದ್ದು ಈ ಸಾವಯವ ಕೃಷಿಯಿಂದಾಗಿ ಕೊಳೆಯುವ ರಸಗೊಬ್ಬರವಾಗಿ ಪರಿವರ್ತನೆಗಳಾಗಲಿವೆ. ಪ್ಲಾಸ್ಟಿಕ್ ಚೀಲಗಳು, ಸುಗಂಧದ ಸೀಸೆಗಳು, ಶಾಂಪು, ಸೋಪಿನ ಕವಚಗಳು ಎಲ್ಲವೂ ವಿವಿಧ ಬಣ್ಣವಿನ್ಯಾಸಗಳಲ್ಲಿ ಹೊಲದಲ್ಲಿ ಬೆಳೆಯಲು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿಯುತ್ತಿದ್ದಾರೆ.
*****
