ಶ್ವಾನ ಮೀಮಾಂಸೆ

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ
ಹಂಗಿಸಿ ಸುಖಪಡಲಿಲ್ಲವೇ ನೀವು
ಮಲಗುವ ಮೊದಲು ಬಾಲದ ಹಿ೦ದೆ
ವರ್ತುಲ ಹಾಕುವ ಪರಂಪರೆಯನ್ನು
ಅರ್ಥಹೀನವೆಂದು ತಮಾಷೆ ಮಾಡಿ
ನಗಲಿಲ್ಲವೇ ನೀವು

ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ
ಕೋಮು ಕಟ್ಟಲಿಲ್ಲವೇ ನೀವು
ನಾಯಿಗಳಿಗೆ ಎಚ್ಚರಿಕೆ ಎಂದು
ಫಲಕದ ಹಿಂದೆ ನಿಲ್ಲಲಿಲ್ಲವೇ ನೀವು

ಬದಲಾಗುತ್ತಿರುವೀ ಮೌಲ್ಯಗಳಲ್ಲೂ
ಕಪ್ಪು ನಾಯಿ ಬಿಳಿಯಾಗುವುದಿಲ್ಲ
ಡೊಂಕು ಬಾಲ ನೆಟ್ಟಗೆ ನಿಲ್ಲುವುದಿಲ್ಲ
ಎಂಬುದು ನಿಜವೆಂದು
ಒಪ್ಪುವುದಿಲ್ಲವೆ ನೀವು

ಹೋಗಲಿ ಬಿಡಿ ಒಟ್ಟಿಗೆ ಅಡಿಯಿಟ್ಟು
ಸ್ವರ್ಗದ ಬಾಗಿಲಿಗೆ ಬಂದು
ಬಾಗಿಲು ತಾನೇ ತೆರೆದಾಗ
ಒಳಗೆ ಕೊಂಡೊಯ್ದಿರಾ ನೀವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ಲಾಸ್ಟಿಕ್ ಚೀಲ ಸುಗಂಧದ ಸೀಸೆ ಶಾಂಪುಗಳನ್ನು ಹೊಲದಲಿಯೇ ಬೆಳೆಯಬಹುದು
Next post ಕಾಯಿ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…