ಶಬ್ದದ ವೇಗ ಒಂದು ಸೆಕೆಂಡಿಗೆ …….. ಆದರೆ (ಬೆಳಕಿನ ವೇಗ-ಒಂದು ಸೆಕೆಂಡಿಗೆ……..) ವಿಜ್ಞಾನಿಗಳು ಜೀವಸೃಷ್ಟಿಯ ಹೊರತು ಪ್ರಪಂಚದ ಅಣುರೇಣುಗಳಲ್ಲಿಯೂ ಹೊಸ ಅವಿಷ್ಕಾರಗಳಿಂದ ಏನೆಲ್ಲ ಚಮತ್ಕಾರಗಳನ್ನು ಇತ್ತೀಚೆಗೆ ಮಾಡುತ್ತಿದ್ದಾರೆ !! ಇದರ ಫಲವಾಗಿ ಇದೀಗ ಗಂಟೆಗೆ ೭೬೩ ಮೈಲಿ ಚಲಿಸುವ ಥ್ರಸ್ಟ್ S.S.C. ಎಂಬ ಕಾರು ಶಬ್ದದ ವೇಗಕ್ಕಿಂತಲೂ ವೇಗವಾಗಿ ಚಲಿಸಬಲ್ಲದು ಎಂಬ ಸತ್ಯವನ್ನು ದಾಖಲಿಸಿದೆ. ಇದನ್ನು ರಿಚರ್ಡ್ ನೋಬಲ್ ಅವರು ಶ್ರಮದ ಸಾಧನೆಯಿಂದ ಸಿದ್ಧಪಡಿಸಿದ್ದಾರೆ. ಶ್ರವಣಾತೀತ ವೇಗದಲ್ಲಿ ಚಲಿಸುವ
ಕಾರಣಕ್ಕಾಗಿ ಈ ಕಾರಿಗೆ “ನೂವರ್ ಸಾನಿಕ್‌” ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಎರಡು ಜೆಟ್ ಯಂತ್ರಗಳಿಂದ ಶಕ್ತಿಪಡೆಯುವ ಈ ಕಾರಿನ ವಿನ್ಯಾಸವನ್ನು ಗಣಕೀಯ ದ್ರವಗತಿಶಾಸ್ತ್ರ (Computationed Fluid Mechanics) ದ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. ಶಬ್ದದ ವೇಗದಲ್ಲಿ ಚಲಿಸುವ ಯಾವುದೇ ವಸ್ತುವಿನ ಸುತ್ತ‌ಉಂಟಾಗುವ ಶಾಕಿನ ಅಲೆಗಳ ಆ ವಸ್ತುವಿನ ಚಲನೆಯಲ್ಲಿ ಆಸ್ತಿರತೆಯನ್ನುಂಟು ಮಾಡುತ್ತವೆ. ಆದರೆ ಸೂಕ್ಷ್ಮಲೆಕ್ಕಚಾರಗಳ ವಿನ್ಯಾಸದಿಂದ ಈ ಅಸ್ಥಿರತೆಯನ್ನು ಇದರಲ್ಲಿ ದುರ್ಬಲಗೊಳಿಸಲಾಗಿದೆ. ೫೪ ಅಡಿಗಳಷ್ಟು
ಉದ್ಧವಿರುವ ಈ ಕಾರು ಪ್ರತಿ ಸೆಕೆಂಡುಗಳಲ್ಲಿ ಒಂದು ಮೈಲಿ ದೂರ ಚಲಿಸುತ್ತಿದೆ ಎಂದಾಗ ಊಹೆಗೂ ನಿಲುಕದಂತಾಗುತ್ತದೆ. ರಾಮಾಯಣ ಕಾಲದಲ್ಲಿ ಪುಷ್ಪಕ ವಿಮಾನಗಳು ಕ್ಷಣಗಣನೆಯಲ್ಲಿ ಮಾಯವಾಗಿ ದೂರವನ್ನು ತಲುಪುತಿದಾವೆಂದು ಓದಿದ್ದೇವೆ. ಈ ಕಾರೂ ಕೂಡ ಇದೇ ಗತಿಯಲ್ಲಿ ಚಲಿಸಿ ಹೊಸ ಲೋಕಕ್ಕೊಂದು ಸವಾಲಾಗಿ ನಿಂತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು