Congreveನ The way of the World- ಸಾಮಾಜಿಕ ವಿಡಂಬನಾ ನಾಟಕ

Congreveನ The way of the World- ಸಾಮಾಜಿಕ ವಿಡಂಬನಾ ನಾಟಕ

ನಾಯಕ Mirabell ಇಸ್ಪೀಟು ಆಟದಲ್ಲಿ Fainall ನಿಂದ ಪರಾಭವಗೊಂಡಿದ್ದಾನೆ. ಅವರಿಬ್ಬರ ನಡುವೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲೇ Fainallನಿಗೆ ತಾನು ಮಿರಾಬೆಲ್‌ನಿಂದ ಎರಡು ಬಾರಿ ಮೋಸಕ್ಕೆ ಒಳಗಾಗಿರುವುದು ತಿಳಿಯುತ್ತದೆ. ಅದೆಂದರೆ ಆತನ ಪತ್ನಿ Mrs Fainall ಮಿರಾಬೆಲ್‌ನ ಹಳೆಯ ಪ್ರೇಯಸಿಯೆಂದು, ತನ್ನ ಪ್ರೇಯಸಿ Mrs Marwood ಗುಪ್ತವಾಗಿ ಮಿರಾಬೆಲ್‌ನನ್ನು ಪ್ರೀತಿಸುತ್ತಿರುವುದಾಗಿಯೂ ತಿಳಿದುಬರುತ್ತದೆ. ಹೀಗಾಗಿ ಅವರಿಬ್ಬರಲ್ಲಿ ಸಂಬಂಧಗಳು ಪ್ರಯಾಸದಿಂದಲೇ ಏಗುತ್ತವೆ.

Mirabell ರೆಸ್ಟೋರೆಷನ್ ಕಾಲದ ಆದರ್ಶ ಯುವಕ. ರಸಿಕ, ವಿನಯಶೀಲ. ಸದ್ಗುಣಿಯಾಗಿದ್ದರೂ ಕೆಲವು ಅಸಭ್ಯ ಗುಣಗಳು ಆತನಲ್ಲಿವೆ. ಆತ ಹೆಣ್ಣುಗಳ ಆಕರ್ಷಿಸುವ ಅವರ ಮನಗೆದ್ದು ನಟಿಸುವ ಎಲ್ಲ ಕಲೆ ಬಲ್ಲವ. ಪ್ರಾಯದ ಸಹಜ ಗುಣ ಬಯಕೆ ಆತನದು. ಆತನ ಮತ್ತು Lady Wishfort ಳ ಮಗಳಾದMrs Fainallಳ ಸಂಬಂಧ ಕೊನೆಗೊಂಡಿದೆ. ಆದರೆ ಸ್ನೇಹ ಮುಂದುವರೆದಿದೆ. ಈಗ ಮಿರಾಬೆಲ್ Millamantನನ್ನು ಪ್ರೇಮಿಸುತ್ತಿದ್ದಾನೆ. ಅವಳ ವಿವಾಹವಾಗ ಬಯಸುತ್ತಾನೆ ಆದರೆ ಅವರಿಬ್ಬರ ಈ ಸಂಬಂಧಕ್ಕೆ Millamantಳ ಚಿಕ್ಕಮ್ಮ Lady Wishfortಳ ಒಪ್ಪಿಗೆ ಬೇಕು. ಆಕೆ ೫೫ ವರ್ಷದ ವಿಧವೆ ಶ್ರೀಮಂತೆ. ಆದರೆ ತನ್ನ ವಯಸ್ಸನ್ನು ಕಾಸ್ಮೇಟಿಕ್ಸಗಳ ಮೂಲಕ ಮುಚ್ಚಿಕೊಳ್ಳುತ್ತ ಯೌವನದ ಪೋಸು ಧರಿಸಿದಾಕೆ. Millamant ಳ ಆಸ್ತಿಯ ಅರ್ಧದಷ್ಟು ಆಸ್ತಿ ಸ್ವತಃ ಅವಳ ಕೈಯಲ್ಲಿದ್ದರೆ ಉಳಿದ ಅರ್ಧದಷ್ಟು ಸುಮಾರು ೬೦೦೦ ಪೌಂಡುಗಳಷ್ಟು ಮಿಸ್ ವಿಷ್‌ಪೋರ್ಟನ ಸುಪರ್ದಿಯಲ್ಲಿದೆ. ಹಾಗಾಗಿ Lady Wishfort ನಿರ್ಧರಿಸಿದ ವರನೊಂದಿಗೆ ಮಾತ್ರ ಆಕೆಯ ವಿವಾಹ ಸಾಧ್ಯ. ಅಂದಾಗ ಮಾತ್ರ ಆ ಸ್ವತ್ತು ಮಿಲಾಮಂತಳ ಕೈಸೇರುತ್ತದೆ. ಆದರೆ ಈ ಹಿಂದೆ ಮಿರಾಬೆಲ್ ಆಕೆಯೊಂದಿಗೆ ಹೊಂದಿದ ಸಂಪರ್ಕದಲ್ಲಿ ಅವರಿಬ್ಬರ ನಡುವೆ ಮನಸ್ತಾಪವಿದೆ. ಆದಕ್ಕಾಗಿ ಆಕೆ ತನ್ನ ಸೋದರಿ ಮಗಳ ತನಗೆ ಕೊಡಲು ಒಪ್ಪುವುದಿಲ್ಲ ಎಂದು ಮಿರಾಬೆಲ್‌ನಿಗೆ ಗೊತ್ತು.

ಅಷ್ಟೇ ಅಲ್ಲ ಆಕೆಯ ಪುತ್ರಿ Mrs Fainall ಗರ್ಭವತಿ. ಆಕೆ ಮಿರಾಬೆಲ್‌ನ ಹಳೆಯ ಪ್ರಿಯತಮೆ. ಈಗಲೂ ಆತನಲ್ಲಿ ಅಪೂರ್ವವಾದ ಸ್ನೇಹವಿದ್ದವಳು. ತನ್ನಿಂದಲೇ ಆದ ತಪ್ಪಿಗೆ ಆಕೆ ಗರ್ಭಧರಿಸಿದ ಕಾರಣ ಆಕೆಯನ್ನು ಜನರ ನಿಂದೆನೆಯಿಂದ ಕಾಪಾಡಲು ಮಿರಾಬೆಲ್ ಅಂತಹ ಪ್ರಾಮಾಣಿಕನೂ ಸದಾಚಾರಿ ಅಲ್ಲದ Fainallನೊಂದಿಗೆ ಆಕೆಯ ವಿವಾಹ ನಡೆಸುತ್ತಾನೆ. Fainallಗೆ ಆಕೆಯ ಹಿಂದಿನ ಪೂರ್ವಾಪರ ತಿಳಿದು ವಿವಾಹವಾಗುವ ಉದ್ದೇಶವೆಂದರೆ ಆಕೆಯ ಆಸ್ತಿಯ ಒಡೆಯನಾಗಿ ಮುಂದೆ ತನ್ನ ಪ್ರೇಯಸಿ Mrs Marwoodಳೊಂದಿಗೆ ಚಕ್ಕಂದ ಆಡುವ ದುರುದ್ಧೇಶದಿಂದಲೇ ಹೊರತು ಆಕೆಯ ಮೇಲಿನ ಪ್ರೇಮದಿಂದಲ್ಲ. ಆತನದು ಮೋಸದ ನಟನೆಯ ವ್ಯಕ್ತಿತ್ವ.

ಇದು ಕಾಂಗ್ರೀವ್ ಬರೆದ `The way of the World’ ನಾಟಕದ ದೃಶ್ಯಗಳು. ಮಿರಾಬೆಲ್ ಲೇಡಿ ವಿಷ್‌ಫೋರ್ಟಳ ಮನ ಗೆಲ್ಲಲು ನಾಟಕವಾಡಬೇಕಾಗುತ್ತದೆ. ಮಿರಾಬೆಲ್ ವಿಸ್ತಾರವಾದ ಯೋಜನೆಯೊಂದನ್ನು ಹಾಕಿಕೊಳ್ಳುತ್ತಾನೆ. ತಾನು ಹಣ ಮತ್ತು ಪ್ರೇಮದ ವಿಚಾರದಲ್ಲಿ ವಂಚಕನಲ್ಲ ಎಂಬುದ ಸಾಬೀತು ಪಡಿಸಬೇಕಾಗುತ್ತದೆ. ಆದರೆ ಈ ಮಧ್ಯೆ ಆತನಿಗೆ ಹಲವಾರು ಅಡೆ ತಡೆಗಳು ತಲೆದೋರುತ್ತವೆ. ತನ್ನ ಚಾಣಾಕ್ಷತನದಿಂದ ತನ್ನ ಸೇವಕ Waitwellನನ್ನು ತನ್ನ ಅಂಕಲ್ ಎಂದು ಪರಿಚಯಿಸುತ್ತಾನೆ. ಆತ Sir Rowland ಆಗಿ ನಟಿಸುತ್ತಾನೆ. ಯಾವ ಕಾರಣಕ್ಕೋ ವಿಷ್ ಫೋರ್ಟಳ ಮಗಳು Mrs Fainall ಮತ್ತು ಆಕೆಯ ಸೇವಕಿ Foible ಸದಾ ಮಿರಾಬೆಲ್‌ನ ಸಹವರ್ತಿಗಳಾಗಿ ಆತನಿಗೆ ಸಹಾಯ ಮಾಡುತ್ತಿರುತ್ತಾರೆ. ಮಿರಾಬೆಲ್ ಮಿಲಾಮಂತಳ ವಿವಾಹವಾಗಲು ನಡೆಸಿದ ಹುನ್ನಾರ ಉಪಾಯಗಳ ಕುರಿತು ಅವರಿಬ್ಬರೂ ನಡೆಸುತ್ತಿದ್ದ ಸಂವಾದವನ್ನು ಅದೊಂದು ದಿನ Fainall ಪ್ರೇಯಸಿ Mrs Marwood ಕದ್ದು ಕೇಳಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ Mrs Fainall ಮಿರಾಬೆಲ್‌ನ ಹಳೆಯ ಪ್ರೇಯಸಿ ಎಂದು ತಿಳಿದೊಡನೆ ಮನದಲ್ಲೇ ಆತನ ಪ್ರೀತಿಸುತ್ತಿದ್ದ ಆಕೆಯ ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದಂಗಾಗುತ್ತದೆ, ತಡಮಾಡದ ಆಕೆ ಈ ಸಂಗತಿಯನ್ನು ಮಿರಾಬೆಲ್‌ನ ಯೋಜನೆಯನ್ನು Fainallನಲ್ಲಿ ಅರಹುತ್ತಾಳೆ. ಈ ಮದ್ಯೇ ಲೇಡಿ ವಿಷ್ ಫೋರ್ಟ ಮಿಲ್ಲಾಮಂತಳಿಗಾಗಿ ಕುಡುಕ ಆದರೆ ನಾಚಿಕೆಯ ಸ್ವಭಾವದ Sir Wilfull Witwound ವರನೆಂದು ನಿರ್ಧರಿಸುತ್ತಾಳೆ. ಮಿಲಾಮಂತಳಿಗದು ಇಷ್ಟವಿಲ್ಲ. ಆಕೆ ಮಿರಾಬೆಲ್‌ನಲ್ಲಿ ಆಸಕ್ತಳು. ಆಕೆ ತಾನು ಮಿರಾಬೆಲ್ ನನ್ನು ವರಿಸುವುದಾಗಿ ತಿಳಿಸುತ್ತಾಳೆ.

ಇದೇ ಸಮಯಕ್ಕೆ Fainall ತನ್ನ ಧೂರ್ತ ಯೋಜನೆಗಳಿಗೆ ಸಿದ್ಧನಾಗುತ್ತಾನೆ. Sir Rolandನ ಮುಖವಾಡವನ್ನು ಹೊರಗೆಡುವಿ ಆತ ಮಿರಾಬೆಲ್‌ನ ಸೇವಕನೆಂಬ ಸತ್ಯವನ್ನು ಗಮನಕ್ಕೆ ತರುತ್ತಾನೆ. ಅಲ್ಲದೇ ಆಕೆಯ ಪುತ್ರಿ ತನ್ನ ಪತ್ನಿ Mrs Fainallಳ ಅನೈತಿಕ ಗರ್ಭದ ಸಂಗತಿಯನ್ನು ಜಗತ್ತಿಗೆ ಜಾಹೀರುಗೊಳಿಸುವ ಬೆದರಿಕೆ ಒಡ್ಡಿ, ವಿಷಪೋರ್ಟ ತನ್ನ ಆಸ್ತಿಯನ್ನೆಲ್ಲಾ ತನ್ನ ಕೈವಶ ನೀಡುವಂತೆ ಒತ್ತಾಯಿಸುತ್ತಾನೆ. ಅಷ್ಟೇ ಅಲ್ಲದೇ ಮಿಲಾಮಂತಳ ಸ್ವತ್ತನ್ನು ತನ್ನ ಅದೀನಕ್ಕೆ ವಹಿಸಿಕೊಡುವಂತೆ ಆಗ್ರಹಿಸುತ್ತಾನೆ. ಲೇಡಿ ವಿಷಫೋರ್ಟ ಪುನಃ ವಿವಾಹವಾಗಬಾರದೆಂಬ ಧಮಕಿ ನೀಡುತ್ತಾನೆ ಆ ಮೂಲಕ ಲೇಡಿ ವಿಷ್‌ಪೋರ್ಟಳ ಸಮಗ್ರ ಸಂಪತ್ತಿಗೆ ತಾನೆ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಭರವಸೆಯನ್ನು ಕೇಳುತ್ತಾನೆ.

ಆದರೆ ತಕ್ಷಣ ಮಿಲಾಮಂತ ತಾನು ತನ್ನ ಆಸ್ತಿಯನ್ನು ರಕ್ಷಿಸಿಕೊಳ್ಳಲು Sir Wilfull Witನನ್ನು ಮದುವೆಯಾಗಲು ಸಿದ್ದವೆನ್ನುತ್ತಾಳೆ. ಅದೇ ಸಮಯಕ್ಕೆ ಮಿರಾಬೆಲ್ Fainall ಮತ್ತು Mrs Marwoodಳ ನಡುವಿನ ಪ್ರೇಮ ಸಂಬಂಧ ತಿಳಿದ ಇಬ್ಬರು ಸಾಕ್ಷಿಗಳನ್ನು ಸಾಧರ ಪಡಿಸಿ ಆತನ ಭ್ರಷ್ಟತೆಯನ್ನು ಇನ್ನೊಂದು ಸತ್ಯವನ್ನು ಹೊರಹಾಕುತ್ತಾನೆ. ಆತನ ನಿಜಸ್ವರೂಪ ಬೂಟಾಟಿಕೆಯ ವರ್ತನೆಯನ್ನು ತಿಳಿದೇ Mrs Fainall ತನ್ನ ಆಸ್ತಿಯ ಹಕ್ಕನ್ನು ತನ್ನ ಪ್ರೇಮಿ ಮಿರಾಬೆಲ್‌ನ ಹೆಸರಿಗೆ ಅಧಿಕಾರಕ್ಕೆ ಬರೆದು ಕೊಟ್ಟ ಸಂಗತಿ ಬಹಿರಂಗಗೊಳಿಸುತ್ತಲೂ ಮುಖಭಂಗಿತನಾಗುತ್ತಾನೆ, ಆಶಾಭಂಗಿತನಾಗುತ್ತಾನೆ. ಕೋಪದಿಂದ Fainall ಮತ್ತು Mrs Marwood ಆ ಸ್ಥಳದಿಂದ ಹೊರಟು ಹೋಗುತ್ತಾರೆ. ಮಿರಾಬೆಲ್ ಮತ್ತು ಮಿಲಾಮಂತರ ಮದುವೆಗೆ ತನ್ನ ಒಪ್ಪಿಗೆ ನೀಡುವುದರ ಮೂಲಕ ನಾಟಕ ಸುಖಾಂತವಾಗುತ್ತದೆ.

ನಾಟಕದ ಮೂಲ ಪ್ರತಿಪಾದನೆ ಎಂದರೆ ಜಂಬ ಮತ್ತು ಸ್ವಾರ್ಥದ ಸ್ತರಗಳನ್ನು ಬಿಂಬಿಸುವುದು. ಮಿಲಾಮಂತ ತನ್ನ ಮೇಧಾವಿತನಕ್ಕೆ ನಾಟಕದಲ್ಲಿ ಗೆದ್ದರೆ, ಮಿರಾಬೆಲ್ ತನ್ನ ಬುದ್ಧಿವಂತಿಕೆ ಹಾಗೂ ಪ್ರಾಪಂಚಿಕ ಬದುಕಿನ ಬಯಕೆಗಳ ಜೊತೆಗೆ ತನ್ನಲ್ಲಿಯ ಕೆಲವು ಸದ್ಗುಣಗಳಿಂದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಲೇಡಿ ವಿಷ್ ಫೋರ್ಟ ಭ್ರಮಾದೀನ ಜಗತ್ತಿನ ಅಪ್ರಬುಧ್ದತೆ ಒಂದು ಉದಾಹರಣೆಯಾಗುತ್ತಾಳೆ. The way of the World ಕೊಂಚ ಭಿನ್ನ ರೀತಿಯಲ್ಲಿ ಮೂಡಿ ಬಂದ ಕಾಮಿಡಿ. ಯಾಂತ್ರಿಕವಾಗದೇ ಸೃಜನ ಶೀಲವಾಗಿ ಮೂಡಿ ಬಂದ ನಾಟಕ. ಜಾಣ್ಮೆ, ವೈಂಗ್ಯ, ಭಾಷಾ ಶೈಲಿ ಎಲ್ಲ ರೀತಿಯಿಂದಲೂ ಸಮರ್‍ಥ ನಿರ್ವಹಣೆಯಿಂದ ಗಮನ ಸೆಳೆಯುತ್ತದೆ. ಇಂಗ್ಲೀಷ ನಾಟಕಗಳ ಮೇಲೆ ಪ್ರೆಂಚ ನಾಟಕಗಳ ಪ್ರಭಾವ ಈ ಸಮಯದಲ್ಲಿ ಹೆಚ್ಚು ಹೆಚ್ಚು ಉಂಟಾದಂತೆ ಕಾಣುತ್ತದೆ.

ಸಾಮಾಜಿಕ ಜೀವನವನ್ನು ಹಣ ಮತ್ತು ಪ್ರೇಮಗಳು ಎಲ್ಲ ಕಾಲಕ್ಕೂ ಆಳುತ್ತಿವೆ. ಮಿರಾಬೆಲ್ ಮಿಲಾಮಂತ್ ಳಲ್ಲಿ ಅತಿಯಾದ ಪ್ರೇಮ ಹೊಂದಿದ್ದರೂ ಆಕೆಯ ಆಸ್ತಿಯ ಹೊಂದುವಲ್ಲಿ ಆಸಕ್ತನೇ ಹೊರತು ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅದನ್ನು ನಿರಾಕರಿಸುವುದಿಲ್ಲ. ಇನ್ನು ಹಣ ಆಸ್ತಿಯಾಸೆಗೆ ಮದುವೆಯಾಗುತ್ತಾನೆ. ಲೇಡಿ ವಿಷ್ ಫೋರ್ಟ ಕೂಡ ಸ್ವತ್ತು ಹಣ ಸಂಪತ್ತಿನ ನೆಲೆಯಲ್ಲಿಯೇ ತನ್ನ ವ್ಯಕ್ತಿತ್ವ ಉಳಿಸಿಕೊಂಡಿದ್ದು ತನ್ನ ಮಗಳು ಹಾಗೂ ಸೋದರಿ ಪುತ್ರಿ ಮೇಲೆ ತನ್ನ ಹಿಡಿತವನ್ನಿಟ್ಟುಕೊಳ್ಳುತ್ತಾಳೆ. ಮಸಲತ್ತು ಅಥವಾ ಪಿತೂರಿ ನಾಟಕದ ಅಂತರ್ಗತ ವಿಷಯ. ಪ್ರತಿ ಘಟನೆಯ ಹಿಂದೆ ಈ ಒಳಸಂಚುಗಳೇ ಮುಖ್ಯ ಸಂಗತಿಗಳಾಗಿ The way of the World- ಆಧುನಿಕ ಸಮಾಜದ ಜನಜೀವನ ಅದರಲ್ಲೂ ಕುಲೀನ ಜಗತ್ತಿನ ಬದುಕನ್ನು ವಿಡಂಬನಾತ್ಮಕವಾಗಿ ಬಿಂಬಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವತೆಗಳ ಕೋಲಾಟ
Next post ಕಸವೂ ನಕ್ಷತ್ರವೂ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys