ಬದುಕ ಬೆಳವಣಿಗೆಯ

ಬದುಕ ಬೆಳವಣಿಗೆಯ
ಜೊತೆಗೆ ಜೊತೆಗೆ
ಭಾಗ್ಯ, ಬವಣೆ,
ಬದಲಾವಣೆಗಳ ಬೆಸುಗೆ||

ಇಲ್ಲದ ಭಾಗ್ಯವ ನೆನೆದು
ಇರುವುದ ಪಕ್ಕಕ್ಕಿರಿಸಿದರೆ
ಬಾಳು ಸಾಗದು ಮುಂದೆ|
ಕಾಲನ ಜೊತೆ ಸೇರಿ
ಹೊಂದಿಕೊಳ್ಳುವುದೊಂದೇ
ಬಾಳ ಸಾಗಿಸುವ ದಾರಿ ಮುಂದೆ||

ಬದುಕಲಿ ಬದಲಾವಣೆ ಇಲ್ಲದಿರೆ
ಬೇಸರದಿ ಸಾಗುವುದು ಬದುಕು ಮುಂದೆ|
ಬರೀ ಬದಲಾವಣೆಯನೇ ಅನುಸರಿಸಿದರೆ
ಬಾಳ ಅನುಭವಿಸಲಾಗದು ಇಂದೆ||

ದಿನದ ರಾತ್ರಿ ಹಗಲುಗಳಂತೆ
ಕಡಲ ಅಲೆಗಳ ಏರಿಳಿತದಂತೆ|
ಸುಖ ದುಃಖಗಳ ಸಾವು ನೋವುಗಳ
ಲಾಭ ನಷ್ಟಗಳ ಅಳಿವು ಉಳಿವುಗಳ
ಕಲಿಕೆ ಗಳಿಕೆಗಳ ಬೆಸುಗೆಯ ಜೊತೆಗೆ
ಉರುಳುತಲಿರುವುದು ಜೀವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆತ್ತಲೆ ಕಿರೀಟ
Next post ಕಾಫಿಯ ಕೆರೆ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…