ಅಪ್ಪ ಸತ್ತಾಗ!

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು|
ಗೋಲಿ ಆಡುವ ವಯಸ್ಸು
ಸದಾ ಟಿ.ವಿ ನೋಡುವ ಮನಸು||

ಏನೋ ಪೋನ್ ಬಂತು
ಎಲ್ಲ ಗುಸುಗುಸು ಮಾತು
ಅಮ್ಮನಿಗೆ ಭಯ ದನಿಯ ಕಂಪನ|
ಅಂದು ತಡವಾಗಿ ಚಿಕ್ಕಪ್ಪ ಹೇಳಿದರು
ನಿನ್ನ ಅಪ್ಪ ಇನ್ನಿಲ್ಲವೆಂದು|
ನನಗೆ ಏನೂ ಅನ್ನಿಸಲಿಲ್ಲ ಅಂದು
ಎಲ್ಲರೂ ಗೊಳೋ ಎಂದು ಅಳುತ್ತಿದ್ದರು||
ನನಗೆ ಅಳುಬರುತ್ತಿರಲಿಲ್ಲ

ಅಳುವವರ ನೋಡಿದರೂ
ಅರ್ಥವಾಗುತ್ತಿರಲಿಲ್ಲ|
ಬಂದ ಸಂಬಂಧಿಕರೆಲ್ಲಾ
ನನ್ನ ನೋಡಿದೊಡನೆ ಅವರ
ಕಣ್ಣುಗಳು ತುಂಬಿಕೊಳ್ಳುತ್ತಿದ್ದವು||

ಅಪ್ಪ ನಿನ್ನೆ ಹೊರಡುವಾಗ ಎಂದಿನಂತೆ
ಟಾಟ ಮಾಡಿದ್ದು ನನ್ನ ಕಣ್ಣಲ್ಲಿಯೇ ಇತ್ತು
ಆ ಟಾಟದಲ್ಲಿ ಏನೋ ವಿಶೇಷವೆನಿಸಿತ್ತು|
ಆಗ ಅನ್ನಿಸಿರಲಿಲ್ಲ ಅದುವೆ ನನ್ನಾ
ನನ್ನ ತಂದೆಯ ಕೊನೆಯ ಮಿಲನಕ್ಷಣವೆಂದು|
ರಸ್ತೆ ಅಪಘಾತ ಇಂಥಾ ಆಪತ್ತತರುತ್ತದೆಂದು
ನಾವು ಯಾರೂ ಊಹಿಸಿರಲಿಲ್ಲವೆಂದು||

ಅಪ್ಪ ಹೊರಗೆ ಹೂವಿನ ಹಾಸಿಗೆಯಲಿ
ಮಲಗಿದಂತೆ ನನಗೆ ಕಾಣಿಸುತ್ತಿತ್ತು|
ಮುಖಮಾತ್ರ ಕಾಣುತಿತ್ತು
ಬೇರೆಲ್ಲಾ ಬ್ಯಾಂಡೇಜು ಸುತ್ತಿತ್ತು|
ಮನೆತುಂಬ ಜನ, ಸಾಂಬ್ರಾಣಿ ಹೊಗೆ
ಕಣ್ಣು ಉರಿಯುತಿತ್ತು
ನೀಲಗಿರಿ‌ಎಣ್ಣೆ ವಾಸನೆ ಜಾಸ್ತಿಯೆನಿಸುತ್ತಿತ್ತು||

ಸೂರ್‍ಯ ಇಳಿಯುತ್ತಿದ್ದ ಸಮಯ
ಯಾರೋ ಮರದ ಸಾಮಾನುಗಳ ತಂದರು|
ಏನೋ ಚೌಕಾಕಾರದಂತೆ ಕಟ್ಟಿದರು
ಅದರಮೇಲೆ ಅಪ್ಪನ ಮಲಗಿಸಿದರು|
ಎಲ್ಲರೂ ಹೂ ಪತ್ರೆಗಳ ಹಾಕಿ ಹೊತ್ತೊಯ್ದರು
ಚಿಕ್ಕಪ್ಪನೇ ಎಲ್ಲಾ ಕಾರ್‍ಯವ ಮಾಡಿ
ಮುಗಿಸಿದರು||

ಆಜ್ಜಿ ಅಜ್ಜ ನಮ್ಮನು ಕರೆದುಕೊಂಡೋದರು
ಎಷ್ಟೋ ದಿನ ನೆಲ ಹಿಡಿದ
ಆಮ್ಮ ಮೇಲೆದ್ದರು|
ಸಣ್ಣದೊಂದು ಕೆಲಸಹಿಡಿದರು
ಬದುಕು ಕುಂಟುತಾ ಸಾಗಿ
ನನ್ನ ಶಾಲೆ ಹೇಗೋ ಮುಗಿಯಿತು|
ಆಮ್ಮ ಮತ್ತು ನನ್ನನು
ಮಾವಂದಿರು, ಚಿಕ್ಕಪ್ಪಂದಿರು ಎಲ್ಲಾ
ಚೆನ್ನಾಗಿ ನೋಡಿಕೊಂಡರಿಲ್ಲಿಯವರೆಗೆ||

ಆದರೆ ಏನೋ ಕೊರತೆ
ಏನೋ ಮಹತ್ವದ ಎಂದೋ
ಕಳೆದುಕೊಡ ಭಾವ ಕಾಡುತ್ತಿದೆ|
ಈಗ ಒಬ್ಬನೇ ಅಳುತ್ತಿರುವೆ
ಒಮ್ಮೊಮ್ಮೆ ಅಪ್ಪ ಎಲ್ಲಿ ಎಂದು
ಯಾರು ಸಂತೈಸುವರಿಲ್ಲ ಬಂದು|
ಅಮ್ಮನಿಗೆ ನಾನು, ನನಗೆ ಅಮ್ಮನೇ ಬಂಧು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರತ್ನನ್ ಪರ್‍ಪಂಚ
Next post ಸ್ವಾತಂತ್ರ್ಯ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…