ತೆರೆಯ ಮೇಲೆ ತೆರೆಯು ನೆರೆಯು

ತೆರೆಯ ಮೇಲೆ ತೆರೆಯು ನೊರೆಯು
ತೊರೆಯ ಬುರುಗು ನಿಲ್ಲಲಿ
ಆಳ ಆಳ ಆಳ ಕಡಲು
ಮುತ್ತು ಹವಳ ತೆರೆಯಲಿ ||೧||

ಮೇಲೆ ಮೇಲೆ ಜೊಂಡು ಪಾಚಿ
ಒಳಗೆ ವಜ್ರ ಸಂಕುಲಾ
ತೆರೆಯ ಮೇಲೆ ಗಾಳಿ ಗೂಳಿ
ಒಳಗೆ ಶಾಂತಿ ಸಮತಲಾ ||೨||

ನನ್ನ ಒಳಗೆ ನಾನು ಇಳಿದು
ನನ್ನ ನಾನು ಹುಡುಕುವೆ
ನಾನು ಒಂದು ದೀಪವೆಂದು
ನನ್ನ ನಾನು ತಿಳಿಯುವೆ ||೩||

ಒಹೊ ಆತ್ಮ ದೀಪ ಕಂಡೆ
ಚಿಪ್ಪು ಚಟ್ಟ ದೊಡಲಲಿ
ಎಲುಬಿನೊಳಗೆ ಉಲುಹು ಕಂಡೆ
ವಿಶ್ವ ಜ್ಯೋತಿ ಕೊಳದಲಿ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಡ ಹಬ್ಬ
Next post ಭಾವಪೂರ್‍ಣ ಶ್ರದ್ಧಾಂಜಲಿ

ಸಣ್ಣ ಕತೆ