ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು ಹೋದರು. ಅಲ್ಲಿ ಮಧ್ಯ ರಾತ್ರಿವರೆಗೂ ನಾಡಹಬ್ಬದ ಹೆಸರಿನಲ್ಲಿ ನಡೆದ ತುಂಡು ಉಡುಪು ಧರಿಸಿದ ಅಶ್ಲೀಲ ನೃತ್ಯಗಳು, ಕರ್ಣ ಕಠೋರ ಹಾಡುಗಳನ್ನು ಶಿಲ್ಲೆ ಹೊಡೆದು ವೀಕ್ಷಿದವರು ವೇದಿಕೆಯ ಸುಖಾಸನವನ್ನು ಅಲಂಕರಿಸಿದ್ದ ಅಧಿಕಾರಿಗಳು, ಅಥಿತಿಗಳು ಹಾಗೂ ಅಧ್ಯಕ್ಷರು. ನಾಡ ಜನರು ಮನೆಯಲ್ಲಿ ಹಾಯಾಗಿ ನಿದ್ರಿಸಿದ್ದರು.
*****