ಎಲ್ಲ ನಾಚಿಕೆ ಬಿಟ್ಟು
ನಡು ಬೀದಿಯಲಿ
ಕುಣಿವ ರೊಟ್ಟಿಗೆ
ಮಾನಾವಮಾನಗಳ
ಪರಿವೆ ಇಲ್ಲ.
ನರ್ತನದೊಳಗೇ
ನಡೆಸಿ ಅನುಸಂಧಾನ
ತಾನೂ ಜೀವಂತಗೊಂಡು
ಸೃಜಿಸುತ್ತದೆ
ಕೋಟ್ಯಾಂತರ ಮರಿ
ರೊಟ್ಟಿ ಹಿಂಡು.
*****