ಬೆಟ್ಟದಿಂದ
ಹೆಬ್ಬೆಟ್ಟು ಗಾತ್ರದ
ಕಲ್ಲ ತಂದು
ಕೊರಳಿಗೆ ಕಟ್ಟಿ
ಲಿಂಗ ಎನ್ನುವರು
ಗಿಡದಿಂದ
ಹಿಡಿ ಹತ್ತಿಯ ತಂದು
ಹೊಸೆದು
ಒಡಲಿಗೆ ಹಾಕಿ
ಜನಿವಾರ ಎನ್ನುವರು
ಬೆಟ್ಟ ಎಷ್ಟು ಲಿಂಗಗಳ
ಗಿಡ ಎಷ್ಟು ಜನಿವಾರಗಳ
ತಮ್ಮೊಳಗೆ ಇರಿಸಿಕೊಂಡಿವೆ
ನೋಡ
*****