ಅವಳನ್ನು ಹುಚ್ಚಿ ಎಂದು ಎಲ್ಲರು ದೂರವಿಟ್ಟಿದ್ದರು. ಇವಳೊಂದು ನಮ್ಮ ವಂಶದಲ್ಲಿ ಕಪ್ಪು ಚುಕ್ಕೆ ಎಂದು, ಯಾರ ಕಣ್ಣಿಗೆ ಬೀಳದಂತೆ ದೂರದ ಅನಾಥಾಶ್ರಮದಲ್ಲಿ ಬಿಟ್ಟಿದ್ದರು. ಮರುಮದುವೆ ಮಾಡಿಕೊಂಡ ಹೊಸ ಹೆಂಡತಿಯೊಂದಿಗೆ ಗಂಡ ಸುಖವಾಗಿದ್ದ. ಅವಳಿಗಾಗಿ ಪರಿತಪಿಸುತಿದ್ದ ಒಂದೇ ಜೀವವೆಂದರೆ ಅವಳ ಮಗಳು. “ನೀರಾದರೂ ಮಜ್ಜಿಗೆ, ಹುಚ್ಚಿಯಾದರು ತಾಯಿ” ಎಂದು ಮದರ್ಸ್ ಡೇ ಗೆ ಬಂದು ತಾಯಿಯನ್ನು ಬಿಗಿದಪ್ಪಿ ಪ್ರೀತಿ ತೋರುತ್ತಿದ್ದಳು. ಹುಚ್ಚಿಯಾಗಿ ಯಾವುದೂ ತಿಳಿಯದಿದ್ದರೂ ತಾಯ್ತನದ ಕಿಡಿಯೊಂದು ಅವಳಲ್ಲಿ ಆರದೆ ಮಗಳನ್ನು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.
*****