Home / ಲೇಖನ / ಇತರೆ / ಮಡಿಕೇರಿಯ ನೆನಪು

ಮಡಿಕೇರಿಯ ನೆನಪು

೧೯೮೩-೧೯೮೪ರಲ್ಲಿ ಮಡಿಕೇರಿಯಲ್ಲಿ ಪ್ರಥಮ ದರ್‍ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದೆ. ಮಡಿಕೇರಿ ನನ್ನ ಅನ್ನ ದೇವರು. ಎಲ್ಲಿದ್ದರು ಹೇಗಿದ್ದರು ಎಂತಿದ್ದರೂ ಮಡಿಕೇರಿ ಮೇಲಿಂದ ಮೇಲೆ ಕಣ್ಣ ಮುಂದೆ ಮೆರವಣಿಗೆ ಹೊರಡುವುದು.

ಪ್ರತಿ ಮಳೆಗಾಲದ ದಿನಮಾನಗಳಲ್ಲಿ ಮಡಿಕೇರಿ ಸವಿಸವಿ ನೆನಪು ತರುವುದು. ಇದು ಅಲ್ಲದೆ ೧೯೯೮-೧೯೯೯ರಲ್ಲಿ ಮಡಿಕೇರಿಯಲ್ಲಿ ಇರುವ ಬಂದು ಹೋಗುವ ೨೦೧೧-೨೦೧೨ರಲ್ಲಿ ಮತ್ತೆ ಮಡಿಕೇರಿಗೆ ಹೋಗಿ ಬರುವ ಸುವರ್‍ಣಾವಕಾಶ ನನಗೆ ಲಭಿಸಿದ್ದು ಸಂತಸ ನವ ಉಲ್ಲಾಸ ಹರ್‍ಷ ತಂದಿತ್ತು.

ಮಡಿಕೇರಿ ಸ್ವರ್‍ಗ ಸೀಮೆ, ಕನ್ನಡ ನಾಡಿನ ಕಾಶ್ಮೀರ, ಭೂ ಕೈಲಾಸ, ಮೇಲಿಂದ ಮೇಲೆ ನೆನಪಾಗುವುದು.

ಅಲ್ಲಿನ ಊಟ, ತಿಂಡಿ, ಅದರಲ್ಲೂ “ಕಕ್ಕಡ ಪದಿನೆಟ್ ಪಾಯಸ” ಸುರುಕುಂಬಾವನ್ನು ಮೀರಿಸುವುದು.

ಕಕ್ಕಡ=ಆಟಿ ತಿಂಗಳು-ಕರ್‍ಕಾಟಕ ತಿಂಗಳು- ಆಟಿ ಸೊಪ್ಪು ಎಂದು ಅರ್‍ಥ. ಈ ಮೂರಡಿ ಹಚ್ಚನೆ ಸೊಪ್ಪಿನ ಗಿಡ ಅಲ್ಲಿನ ಕಾಫಿ ತೋಟಗಳಲ್ಲಿ, ಕಾಡುಮೇಡುಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು ಔಷಧಿ ಪರಿಮಳಯುಕ್ತ ಸಸ್ಯ. ಇದರಲ್ಲಿ ಸರಿಯಾಗಿ ಮೂರು ವಾರ ಜುಲೈನಲ್ಲಿ ದಿನಕ್ಕೊಂದು ಔಷಧಿ ಗುಣ ಈ ಗಿಡದಲ್ಲಿ ಪ್ರಕೃತಿ ದತ್ತವಾಗಿ ಸೇರುವುದೆಂದೂ…. ಆಗಸ್ಟ್ ಮೊದಲ ವಾರದ ಮೊದಲ ದಿನ ಹಬ್ಬದ ದಿನ ಈ ಸೊಪ್ಪು ಘಮ ಘಮಾ ಪರಿವಾಳ ಬೀರುವುದು. ಇದನ್ನು ಕಿತ್ತು, ಸೋಸಿ ತೊಳೆದು, ಇದರಿಂದ ರಸ ತೆಗೆದು, ಪಾಯಸದಲ್ಲಿ ಸೇರಿಸಿ, ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ, ಸಕ್ಕರೆ ಕಲ್ಲು ಸಕ್ಕರೆ, ಸಿಹಿ ಅಕ್ಕಿ, ಏಲಕ್ಕಿ, ಗಸೆಗಸೆ, ದ್ರಾಕ್ಷಿ, ಗೋಡಂಬಿ, ಪಿಸ್ತ, ಬಾದಾಮಿ ಇತ್ಯಾದಿ ಹಾಕಿ ತಯಾರಿಸಿದ ಪಾಯಸ ಕುಡಿಯಲು ತಿನ್ನಲು ಸೊಗಸಾಗಿರುವುದು.

ಅಂದು- ಮಡಿಕೇರಿಯ ತುಂಬಾ ಹುಗ್ಗಿಯ ಹೊಳೆ ಹರಿಯುವುದು. ಮನೆಮನೆ ಓಣಿ‌ಓಣಿ, ಗಲ್ಲಿಗಲ್ಲಿ, ಬೀದಿಬೀದಿಯೆಲ್ಲ, ಘಮಾಘಮಾ ಹುಗ್ಗಿಯ ಪರಿಮಳ ಬೀರುವುದು. ಮೊದಲೇ ಮಡಿಕೇರಿಯು ಸುವಾಸನೆಯುಕ್ತವಾಗಿರುತ್ತದೆ. ಅಂದು ಇನ್ನೂ ಘಮಿಘಮಿಸುವುದು. ಬರೀ ವಾಸನೆಗೆ ಹೊಟ್ಟೆ ತುಂಬಿ ಮುಖವೆಲ್ಲ ಸಿಹಿಗೆ ಉಜ್ಜಿದಂತಾಗುವುದು!

ಬರೀ ಓದಿದರೆ ಸಾಲದು, ಅದರ ಸವಿಯ ಸವಿದು ತೃಪ್ತಿ ಪಟ್ಟುಕೊಂಡು ಧನ್ಯರಾಗಬೇಕು. ಅದುವೇ ಜೀವನ. ಮಡಿಕೇರಿಯ ವಿಶೇಷವದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...