ಮನವೆ ಎಚ್ಚರ

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ
ಆದರೂ ನಿನ್ನ ಅವಗುಣ ಬಿಡಲಾರೆ
ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ
ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ

ನನಗಿರುವವನು ನೀನೊಬ್ಬನೆ ಅಲ್ಲವೆ!
ನೀನೇ ನನ್ನನ್ನು ಮೋಸಗೊಳಿಸಿದರೆ
ಯಾರ ಮುಂದೆ ನಾ ಹೇಳಿಕೊಳ್ಳಬಲ್ಲೇ
ಒಳಗೊಳಗೆ ಆತ್ಮದಲಿ ಕೊರಗದಿರಲಾರೆ

ಆಸೆ ಆಕಾಂಕ್ಷೆ ಸ್ವಾರ್‍ಥಗಳದು
ದೊಡ್ಡ ಅಭಿಪ್ಸೆ ಹೊರೆ ನಿನ್ನದು
ಮತ್ತೆ ಕಾಮ ಮೋಹ ಸಾಧಿಸಲು
ಇಂದ್ರಿಯಗಳ ಸೈನ್ಯವು ನಿನ್ನದು

ಒಳಗೆ ಹೃದಯದತ್ತ ಇಣಕದೆ ನೀನು
ಹೃದಯವನ್ನೆ ಕದ್ದು ಮೋಸಿಸಿರುವೆ
ತನುವಿಗೆ ಬಲಿಪಶು ಮಾಡಿ ನೀನು
ಭೋಗ ಲಾಲಸೆಗಳ ತೀರಿಸಿಕೊಳ್ಳುತ್ತಿರುವೆ

ನೀನು ಮಾಡಿದ ಕರ್‍ಮಗಳಿಗೆಲ್ಲವು
ಮತ್ತೆ ನಾನು ಹೊಣೆಗಾರನಾಗಬೇಕೆನೊ!
ಅಸತ್ಯ ಅನಿತ್ಯಗಳಲಿ ತೊಳಲಾಡುತ್ತ
ಜನುಮ ಜನುಮಗಳಲ್ಲಿ ಅನುಭವಿಸಬೇಕೆನೊ!

ಹೌದು ಮನವೆ ನಾನೀಗ ಎಚ್ಚರಾಗಿರುವೆ
ನಿನ್ನ ಬಣ್ಣದ ಕನಸುಗಳ ನಂಬಲಾರೆ
ನಾನು ಹೇಳಿದ ಹಾಗೆ ನಿ ನಡೆಯದಿದೆ
ಮಾಣಿಕ್ಯ ವಿಠಲನದಾರಿ ಬಿಡಲಾರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೫
Next post ಪಾಪಿಯ ಪಾಡು – ೧೮

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys