ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ
ಮುಂದಿನಳುಕುಗಳ ತೊಲಗಿಸುವ ಬಟ್ಟಲನು
ತುಂಬಿ ನೀಡೆನಗೀಗ; “ನಾಳೆ”ಯೆಂಬೆಯೊ?-ನಾಳೆ
ಸೇರುವೆನು ನೂರ್‍ಕೊಟಿ ನಿನ್ನೆಗಳ ಜೊತೆಗೆ.
*****