ಪಾಪಿಯ ಪಾಡು – ೧೮

ಪಾಪಿಯ ಪಾಡು – ೧೮

ಬ್ಯಾರಿಕೇಡಿನ ಬಳಿಯಲ್ಲಿ ಯುದ್ದವು ಭಯಂಕರವಾಗಿ ನಡೆಯು ತಿತ್ತು. ಮೇರಿಯಸ್ಸನು ಪ್ರಾಣರಕ್ಷಣೆಗೆ ತಕ್ಕ ಆಧಾರವೇ ಇಲ್ಲದೆ ಯುದ್ದ ಮಾಡುತ್ತ, ಗುರಿಯೆಡಲವಕಾಶವೇ ಇಲ್ಲದೆ ಸುಮ್ಮನೆ ಗುಂಡುಗಳನ್ನು ಹೊಡೆಯುತ್ತಿದ್ದನು. ಅವನು ಅರ್ಧಕ್ಕಿಂತಲೂ ಹೆಚ್ಚಾಗಿ ತನ್ನ ಶರೀರ ಭಾಗವನ್ನು ಕೊಳದ ಮೇಲೆ ತೋರಿ, ಮರಣಕ್ಕೆ ಹೆದರದೆ ಮೃತ್ಯುವಿಗಾಮಂತ್ರಣವನ್ನು ಕೊಡುವಂತೆ ಯುದ್ದ ಮಾಡುತ್ತಿದ್ದನು. ಅವನ ಶರೀರವೆಲ್ಲವೂ ಗಾಯಗಳಿಂದ ತುಂಬಿಹೋಗಿತ್ತು. ಅದರಲ್ಲಿಯ ಅವನ ತಲೆಗೆ ಆಗಿದ್ದ ಗಾಯ ಗಳಿಂದ ಅವನ ಮುಖವೆಲ್ಲವೂ ರಕ್ತಮಯವಾಗಿ ಕೆಂಪು ವಸ್ತ್ರದಿಂದ ಮುಚ್ಚಿದಂತೆ ಕಾಣುತ್ತಿತ್ತು,

ಅನಂತರ ಬ್ಯಾರಿಕೇಡ್ ಪ್ರಾಂತ್ಯವನ್ನು ವಶಪಡಿಸಿಕೊಂಡು ರಾಜಪಕ್ಷದವರು ಜಯಘೋಷಗಳಿಂದ ಅದರ ಮೇಲಕ್ಕೆ ಸಾಲು ಸಾಲಾಗಿ ಹತ್ತಿ ನಿಂತರು, ಹೊಡೆದಾಡಿ ಇನ್ನೂ ಪ್ರಾಣದಿಂದ . ಉಳಿದಿದ್ದ, ಪ್ರತಿಪಕ್ಷದ ಕೆಲವರು ಮಾತ್ರ ಆ ಮದ್ಯದ ಅಂಗಡಿ ಯೊಳಕ್ಕೆ ಹೋಗಿ ಹಿಂದುಗಡೆಯ ಬಾಗಿಲಿನಿಂದ ತಪ್ಪಿಸಿಕೊಂಡು ಓಡಿಹೋಗಬಹುದೆಂಬ ಆಸೆಯಿಂದ ಮುಂದಿನ ಬಾಗಿಲಿಗೆ ಗುಂಪು ಕಟ್ಟಿಕೊಂಡು ನುಗ್ಗಿದರು.

ಮೇರಿಯಸ್ಸನ್ನು ಹೊರಗೇ ನಿಂತನು. ಒಂದು ಗುಂಡಿನ ಪೆಟ್ಟಿನಿಂದ ಅವನ ಭುಜದ ಎಲುಬು ಮುರಿಯಿತು. ಅವನು ಜ್ಞಾನತಪ್ಪಿ ಬೀಳುವಷ್ಟರಲ್ಲಿ, ಯಾವನೋ ತನ್ನನ್ನು ಬಲವಾಗಿ ಹಿಡಿದಂತೆ ಅವನಿಗೆ ತೋರಿತು. ಆಗ : ಓಹೋ ! ನನ್ನನ್ನು ಸೆರೆಹಿಡಿದುಬಿಟ್ಟರು. ಇನ್ನು ನನ್ನನ್ನು ಗುಂಡಿನಿಂದ ಹೊಡೆದು ಬಿಡುವರು,’ ಎಂದು ಅವರು ಆಲೋಚಿಸಿಕೊಂಡನು. ಮೇರಿಯ ಸ್ಸನು ನಿಜವಾಗಿಯೂ ಬಂದಿಯೇ ಆದನು. ಯಾರ ಬಂದಿ ? ಜೀನ್ ವಾನನ ಬಂದಿಯು.

ಜೀನ್‌ ವಾಲ್ಜೀನನು, ಪ್ರಜ್ಞೆ ತಪ್ಪಿದ ಮೇರಿಯಸ್ಸನನ್ನು ತನ್ನ ತೋಳುಗಳಿಂದೆತ್ತಿಕೊಂಡು, ಆ ಬ್ಯಾರಿಕೇಡಿನ ಮೈದಾನ ವನ್ನು ದಾಟಿ, ಆ ಮನೆಯ ಮೂಲೆಯ ಕಡೆಗೆ ಹೋಗಿ ಮಾಯ ವಾದುದನ್ನು ಯಾರೂ ನೋಡಲಿಲ್ಲ. ಅವನು ಅಲ್ಲಿ ನಿಂತು ಮೇರಿ ಯಸ್ಸನನ್ನು ನೆಲಕ್ಕಿಳಿಸಿ ಅವನ ಬೆನ್ನನ್ನು ಗೋಡೆಗೆ ಒರಗಿಸಿ ಅವ ನನ್ನು ಚೆನ್ನಾಗಿ ನೋಡಿದನು.

ಅನಂತರ ಮುಂದಕ್ಕೆ ಸ್ವಲ್ಪ ದೂರದಲ್ಲಿ ಹಾಸುಗಲ್ಲುಗಳ ಕೆಳಗೆ ಕಬ್ಬಿಣದ ಸಲಾಕಿಗಳ ಒಂದು ಚೌಕಟ್ಟು ನೆಲಸಮವಾಗಿ ಹದ್ದಿರುವುದು ಅವನಿಗೆ ಕಂಡಿತು. ಜೀನ್ ವಾಲ್ಜೀನನು ಹಾಗೆಯೇ ಮುಂದಕ್ಕೆ ಫಕ್ಕನೆ ಹೋಗಿ ನೋಡಲು, ಅವನ ಹಿಂದಣ ಪಲಾಯನಶಾಸ್ತ್ರದ ಭಾವಗಳು ಮನಸ್ಸಿಗೆ ಮಿಂಚಿನಂತೆ ಹೊಳೆದುವು. ಅನಂತರ ಆ ಕಲ್ಲುಗಳನ್ನೆ ತಿದುದೂ, ಚೌಕಟ್ಟನ್ನು ಮೇಲಕ್ಕೆ ತೆಗೆದುದೂ, ಹೆಣದಂತೆ ಭಾರವಾಗಿದ್ದ ಮೇರಿಯಸ್ ನನ್ನು ಭುಜದ ಮೇಲಕ್ಕೆ ಎತ್ತಿಕೊಂಡು, ತನ್ನ ಮೊಣಕೈ ಮೊಣ ಕಾಲುಗಳ ಶಕ್ತಿಯಿಂದ ಆ ಹೆಚ್ಚು ಆಳವಿಲ್ಲದ ಭಾವಿಯೊಳಕ್ಕೆ ಇಳಿ ದುದೂ, ತನ್ನ ತಲೆಯ ಮೇಲಕ್ಕೆ ಮತ್ತೆ ಆ ಸಲಾಕಿಗಳ ಬಾಗಿಲೂ ಅದರ ಮೇಲಕ್ಕೆ ಕಲ್ಲುಗಳೂ ಮುಚ್ಚಿಕೊಳ್ಳುವಂತೆ ಎಳೆದುಕೊಂ ಡುದೂ, ಭೂಮಿಯ ಮಟ್ಟದಿಂದ ಹತ್ತು ಅಡಿಗಳ ಕೆಳಗಡೆಗೆ ಇಳಿ ಜಾರಾಗಿ ಹೋಗಿದ್ದ ನೆಲದ ಮೇಲಕ್ಕೆ ಯಾವುದೇ ಆಧಾರದ ಮೇಲೆ ಕಾಲಿಟ್ಟು ಇಳಿದುದೂ, ಈ ಕಾರಗಳೆಲ್ಲವೂ ಯಾವುದೋ ಸ್ವಪ್ನದಲ್ಲಿ ಮಾಡಿದಂತೆ, ರಾಕ್ಷಸ ಶಕ್ತಿಯಿಂದಲೂ ಹದ್ದಿನಂತಹ ವೇಗದಿಂದಲೂ ಸಹ ಕೆಲವು ಕ್ಷಣಗಳೊಳಗಾಗಿ ಅವನಿಂದ ಮಾಡಲ್ಪಟ್ಟವು.

ಇನ್ನೂ ಪ್ರಜ್ಞೆಯಿಲ್ಲದೆ ಇದ್ದ ಮೇರಿಯಸ್ಸನನ್ನು ಎತ್ತಿ ಕೊಂಡು ಬರುತ್ತ, ತಾನು ಒಂದು ವಿಧವಾದ ಸುರಂಗಮಾರ್ಗ ದಲ್ಲಿರುವೆನೆಂದು ಜೀನ್’ ವಾಲ್ಜೀನನು ತಿಳಿದುಕೊಂಡನು. ಇದು ಪ್ಯಾರಿಸ್ ನಗರದ ಗ್ರಾಮಸಾರವು ಹರಿದುಹೋಗುವ ದೊಡ್ಡ ಸುರಂಗದ ಚರಂಡಿಯು, ಈ ಚರಂಡಿಯ ಇತರ ದೊಡ್ಡ ನಗರ ಗಳ ಸುರಂಗದ ಚರಂಡಿಗಳಂತೆ ಅನೇಕ ಸುರಂಗದ ಬೀದಿಗಳಂತಿರುವ ಕಾಲುವೆ (ಮೊಸರಿ)ಗಳಿಂದ ಕೂಡಿತ್ತು. ಈ ಮಾರ್ಗಗಳು ಒಂದ ಕ್ಕೊಂದು ಸೇರಿ ಹೆಣೆದುಕೊಂಡಿದ್ದುದಲ್ಲದೆ ಕೆಲವು ಕಡೆಗಳಲ್ಲಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ದ್ವಾರಗಳೂ ಇದ್ದುವು. ಈ ಮಾರ್ಗಗಳಲ್ಲಿ, ಮನೆಗಳಿಂದ ಹೊರಟ ಎಲ್ಲಾ ಕೊಳೆಯ ನೀರೂ, ಬೀದಿಗಳ ಮಳೆಯ ನೀರೂ, ಕೆಸರಿನೊಡನೆ ಸೇರಿ ಹರಿಯುತ್ತಿದ್ದಿತು. ಇಲ್ಲಿ ಅಲ್ಲಲ್ಲಿ ಮೇಲ್ಗಡೆ ಕಬ್ಬಿಣದ ಸಲಾಕಿಗಳ ಚೌಕಟ್ಟುಗಳಿದ್ದ ಕಡೆಗಳಲ್ಲಿ ಹೊರತು ಉಳಿದ ಕಡೆಗಳಲ್ಲಿ ಸಂಪೂರ್ಣ ವಾಗಿ ಕಗ್ಗತ್ತಲೆಯಾಗಿತ್ತು. ವಾಯುವಂತೂ ಒಹಳ ದುರ್ವಾ ಸನೆಯಿಂದ ತುಂಟತ್ತು. ಅಲ್ಲಿ ವಾಸಮಾಡಬಹುದಾದ ಪ್ರಾಣಿ ಗಳೆಂದರೆ ಇಲಿಗಳು ಮಾತ್ರವೇ.

ಜೀನ್ ವಾಲ್ಜೀನನಿಗೆ ಮೊದಲು ಕಣ್ಣುಗಳು ಕಾಣದೆ ಹೋದುವು. ಮತ್ತೆ ಒಂದು ನಿಮಿಷದೊಳಗಾಗಿ ತನಗೆ ಕಿವುಡು ಹಿಡಿದಂತೆಯ ಇವನಿಗೆ ತೋರಿತು. ಇವನ ಕಾಲಿನ ಕೆಳಗೆ ಗಟ್ಟಿ ಯಾದ ಪದಾರ್ಥವಿರುವುದೆಂದು ಅವನ ಮನಸ್ಸಿಗೆ ಗೊತ್ತಾಯಿತು. ಇಷ್ಟಲ್ಲದೆ ಇನ್ನೇನೂ ತಿಳಿಯಲಿಲ್ಲ. ಆದರೆ ಅಷ್ಟು ಮಾತ್ರ ಅವನಿಗೆ ಸಾಕಾಗಿತ್ತು. ಅವನು ಮೊದಲು ಒಂದು ಕೈಯನ್ನ ಅನಂತರ ಇನ್ನೊಂದು ಕೈಯನ್ನೂ ಚಾಚಿ ಎರಡು ಕಡೆಗಳಲ್ಲಿಯೇ ಇದ್ದ ಗೋಡೆಗಳನ್ನು ಮುಟ್ಟಿ ಆ ಮಾರ್ಗವು ಇಕ್ಕಟ್ಟಾಗಿರುವುದೆಂದು ದನ್ನು ತಿಳಿದುಕೊಂಡನು. ಜಾರಿಬಿದ್ದು, ನೆಲವು ತೇವವಾಗಿ ತ್ತೆಂದು ಗೊತ್ತುಮಾಡಿಕೊಡನು. ಅವನು ತನ್ನ ಮುಂದುಗಡೆ ಯಲ್ಲಿ ಬಿಲವೋ, ಗುಣಿಯೋ ಅಥವಾ ಕಂದಕವೊ ಏನಿರುವುದೋ ಎಂದು ಸಂದೇಹಪಟ್ಟು, ಎಚ್ಚರದಿಂದ ಒಂದೊಂದು ಹೆಜ್ಜೆಯನ್ನೇ ಇಡುತ್ತ ಮುಂದೆ ಹೋದನು, ನೆಲವ್ರ ಹಾಗೆಯೇ ಮುಂದು ವರಿದು ಹೋಗುತ್ತಿರುವುದೆಂಬುದು ಅವನ ಮನಸ್ಸಿಗೆ ದೃಢವಾ ಯಿತು. ‘ಘುಪ್ ‘ ಎಂದು ಬಂದ ಕೊಳೆಯ ದುರ್ವಾಸನೆಯಿಂದ ಅವರಿಗೆ ತಾನೆಲ್ಲಿರುವನೆಂಬುದು ಮನಸ್ಸಿಗೆ ಬಂತು.

ಮೇರಿಯಸ್ಸನನ್ನು ನೆಲದ ಮೇಲೆ ಇಳಿಸಿ, ಸ್ವಲ್ಪ ದಣಿ ವಾರಿಸಿಕೊಂಡು, ಮತ್ತೆ ಅವನನ್ನು ಭುಜದ ಮೇಲಕ್ಕೆ ಎತ್ತಿ ಕೊಂಡು ಪ್ರಯಾಣವನ್ನಾರಂಭಿಸಿದನು ; ಅಲ್ಲದೆ ಮುಂದೆ ಏನಿರುವು ದೆಂಬುದನ್ನು ಅರಿಯಲಾಗದ ಆ ಅಂಧಕಾರಮಯವಾದ ಗವಿಯಲ್ಲಿ ಮನೋನಿರ್ಧರದಿಂದ ಹೊರಟೇ ಹೊರಟನು.

ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಒಂದು ಅಡ್ಡ ದಾರಿಯು ಸಂಧಿ ಸಿತು, ಅಲ್ಲಿ ಅವನು ಎಡಕ್ಕಾಗಲಿ, ಬಲಕ್ಕಾಗಲಿ, ತಿರುಗಬೇಕಾ ಗಿತ್ತು. ಈಗ ಅವನು ಯಾವ ಮಾರ್ಗವಾಗಿ ಹೋಗಬೇಕು ? ಇಳಿ ಜಾರಾಗಿ ಕೆಳಕೆಳಕ್ಕೆ ಹೋಗುತ್ತಿದ್ದ ಮಾರ್ಗದಲ್ಲಿ ಹೋದರೆ ಅವನು ಪ್ಯಾರಿಸ್’ ನಗರದ ಅತ್ಯಂತ ಜನಸಾಂದ್ರತೆಯುಳ್ಳ ಭಾಗದಲ್ಲಿ ಹೊರಗೆ ಬರಬೇಕಾಗುವುದು. ಮೇಲಕ್ಕೆ ಏರಿ ಹೋಗುತ್ತಿದ್ದ ಮಾರ್ಗವನ್ನನುಸರಿಸಿ ಹೊರಟರೆ ಮುಂದೆ ಆ ಕೊಳೆಯ ನೀರಿನ ಚರಂಡಿಯಲ್ಲಿ ಬಹು ದೂರ ಪ್ರಯಾಣಮಾಡಬೇಕಾಗುವುದು ; ಆದರೆ ಆ ಮಾರ್ಗವು ಅವನನ್ನು ಯಾರೂ ಇಲ್ಲದಿರುವ ನದೀತೀರ ಪ್ರದೇಶಕ್ಕೆ ತಂದುಬಿಡುವುದು.

ಅವನು ಬಲಗಡೆಗೆ ಹೊರಟು ಎತ್ತರವಾಗಿ ಹೋಗಿದ್ದ ಮಾರ್ಗದಲ್ಲಿ ಹತ್ತಿಕೊಂಡು ಸಾಧ್ಯವಾದ ಮಟ್ಟಿಗೂ ವೇಗ ವಾಗಿಯೇ ಹೋದನು. ಮೇರಿಯಸ್ಸನ ತೋಳುಗಳು ಇವನ ಕುತ್ತಿಗೆಯನ್ನು ಬಳಸಿ, ಕಾಲುಗಳು ಹಿಂದೆ ಜೋಲುಬಿದ್ದಿದ್ದುವು. ಜೀನ್ ವಾಲ್ಜೀನನು ಎರಡು ತೋಳುಗಳನ್ನೂ ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಗೋಡೆಯನ್ನು ತಡಕುತ್ತ ಹೋದನು. ಮೇರಿಯಸ್ಸನ ಕೆನ್ನೆಯ ಇವನ ಕೆನ್ನೆಗೆ ಸೋಕಿತ್ತು. ಅದು ರಕ್ತಮಯವಾಗಿದ್ದುದರಿಂದ ಎರಡು ಕೆನ್ನೆಗಳೂ ಒಂದ ಕ್ಕೊಂದು ಅಂಟಿಕೊಂಡವು. ಮೇರಿಯಸ್ಸನ ಕಡೆಯಿಂದ ಒಂದು ಉಷ್ಣವಾದ ರಕ್ತಪ್ರವಾಹವೇ ಇವನ ಮೇಲೆ ಹರಿದು ಇವನ ಬಟ್ಟೆಗಳನ್ನು ನೆನೆಯಿಸಿತು. ಇಷ್ಟಾದರೂ, ಇವನ ಕಿವಿಯನ್ನು ಮುಟ್ಟಿದ್ದ ಆ ಗಾಯಪಟ್ಟವನ ಬಾಯಿಂದ ತೇವದ ಉಷ್ಣತೆಯು ತೋರಿಬಂದ ಕಾರಣ, ಅವನು ಉಸಿರಾಡುತ್ತಿರುವಂತೆಯೂ, ಅದರಿಂದ ಅವನಿಗೆ ಇನ್ನೂ ಜೀವವಿರುವಂತೆಯೂ ತೋರಿಬಂತು ಈಗ ಜೀನ್ ವಾಲೀಸನು ನಡೆದು ಹೋಗುತ್ತಿದ್ದ ಮಾರ್ಗವು ಮೊದಲಿನ ಮಾರ್ಗದಷ್ಟು ಚಿಕ್ಕದಲ್ಲ. ಆದರೂ ಅವನಿಗೆ ಇದರಲ್ಲಿ ನಡೆದುಹೋಗುವುದು ಕಷ್ಟವಾಗಿತ್ತು,

ಮುಂದಕ್ಕೆ ಹೋಗಹೊಗುತ ಪ್ರಯಾಣವು ಹೆಚ್ಚು ಕಷ್ಟ ವಾಗುತ್ತ ಬಂತು. ಅದರೊಳಗೆ ಕಟ್ಟಿದ್ದ ಕಮಾನುಗಳ ಎತ್ತರವು ಅಲ್ಲಲ್ಲಿ ವ್ಯತ್ಯಾಸವಾಗಿತ್ತು. ಸಾಮಾನ್ಯವಾದ ಎತ್ತರವು ಮನು ಷ್ಯನ ಅಳತೆಯಷ್ಟಿರಬೇಕೆಂಬ ಅಂದಾಜಿನಿಂದ ೫ ಅಡಿ ೬ ಅಂಗುಲ ದಷ್ಟು ಕಟ್ಟಲ್ಪಟ್ಟಿತ್ತು. ಮೇರಿಯಸ್ಸನ ತಲೆಯು ಕಮಾನಿಗೆ ಬಡಿಯದಂತೆ ಎಚ್ಚರಿಕೆಯಿಂದ ಜೀನ್ ವಾಲ್ಜೀನನು ಬಲಾತ್ಕಾರ ವಾಗಿ ಬಾಗಲೇ ಬೇಕಾಗಿತ್ತು. ಅವನು ಗೋಡೆಯನ್ನು ತಡಕಿ ಕೊಂಡು ಪ್ರತಿ ಕ್ಷಣದಲ್ಲಿ ಯ ಬಗ್ಗೆ ಏಳುತ್ತಿರಬೇಕಾಯಿತು. ಬಂಡೆಗಳು ತೇವವಾಗಿ)ಯ ನೆಲವು ಕೆಸರಾಗಿಯ ಇದ್ದುದರಿಂದ ಕೈಗಾಗಲಿ, ಕಾಲಿಗಾಗಲಿ ಅವು ಸರಿಯಾದ ಹಿಡಿತಕ್ಕೆ ಆಧಾರ ವಾಗಿರಲಿಲ್ಲ. ಹೀಗೆ ಅವನು ಆ ಭಯಂಕರವಾದ ಗ್ರಾಮಸಾರದ ಮಧ್ಯದಲ್ಲಿ ಕಷ್ಟದಿಂದ ಹೋಗುತ್ತಿದ್ದನು. ಗಾಳಿಗಾಗಿ ಬಿಟ್ಟಿದ್ದ ಮೇಲ್ಗಡೆಯ ರಂಧಗಳಿಂದ ಬಹಳ ಹೊತ್ತಿಗೊಂದಾವೃತ್ತಿಯಂತೆ ಸ್ವಲ್ಪ ಸ್ವಲ್ಪ ಬೆಳಕು ಕಾಣುತ್ತಿತ್ತು. ಈ ಬೆಳಕು ಬಿದ್ದರೂ ಮಧ್ಯಾಹ್ನದ ಉರಿ ಬಿಸಿಲು ಬೆಟ್ಟಿಂಗಳಂತೆ ಕಾಣುತ್ತ ಒಳಗೆ ಬಹಳ ಭಯಂಕರವಾಗಿರುತ್ತಿತ್ತು. ಉಳಿದ ಸ್ಮಳದಲ್ಲೆಲ್ಲವೂ, ಮಬ್ಬು, ವಿಷದ ಗಾಳಿ, ಕತ್ತಲೆ, ಕಪ್ಪು, ತುಂಬಿತ್ತು. ಜೀನ್ ವಾಲ್ಜೀನನಿಗೆ ಹಸಿವೂ ಬಾಯಾರಿಕೆಯ ಆಯಿತು. ಅದರಲ್ಲಿ ಬಾಯಾರಿಕೆ ಯಂತೂ ಬಹಳವಾಯಿತು. ಸಮುದ್ರದ ಹಾಗೆ ನೀರಿದ್ದರೂ ದಾಹಶಾಂತಿಗಾಗಿ ಕುಡಿಯಲು ಮಾತ್ರ ನೀರು ಇರಲಿಲ್ಲ. ಶುದ್ಧವಾದ ಮತ್ತು ಮಿತವಾದ ಆಹಾರ ವಿಹಾರಗಳಿಂದ ಅದ್ಭುತವಾಗಿ ಬೆಳೆದು ವಯೋ ಧರ್ಮದಿಂದ ಸ್ವಲ್ಪವೂ ಕುಂದದೆ ಇದ್ದ ಅವನ ಶಕ್ತಿಯು ಕಡೆಗೆ ಈಗ ಸೋಲಲಾರಂಭವಾಯಿತು. ಅವನಿಗೆ ಆಯಾಸವು ಹೆಚ್ಚುತ್ತ ಬಂತು. ಶಕ್ತಿ ಕುಂದಿದ ಹಾಗೆಲ್ಲ, ಅವನು ಹೊತ್ತಿದ್ದ ಹೊರೆಯ ಭಾರವು ಅಧಿಕವಾಗಿ ಕಂಡಿತು. ಪ್ರಾಯಶಃ ಸತ್ತೇಹೋಗಿದ್ದನೆಂದು ಅವನು ತಿಳಿದಿದ್ದ ಮೇರಿಯಸ್ಸನು, ಹೆಣ ದಂತೆ ಅವನಿಗೆ ಬಹಳ ಭಾರವಾಗಿ ತೋರಿದನು, ಅವನ ಎದೆಯು ಹೆಚ್ಚಾಗಿ ಒತ್ನದಂತೆಯ, ಅವನಿಗೆ ಯಾವಾಗಲೂ ಉಸಿರಾಡಿಸು ವುದಕ್ಕೆ ತಕ್ಕಷ್ಟು ಅನುಕೂಲತೆಯಿರುವಂತೆಯ ಜೀನ್ ವಾಲ್ಜೀ ನನು ಅವನನ್ನು ಹೊತ್ತಿದ್ದನು. ಜೀನ್ ವಾಲ್ಜೀನನ ಕಾಲಿನ ಸಂದಿಗಳಲ್ಲಿ ಇಲಿಗಳು ವೇಗವಾಗಿ ಓಡಿಯಾಡುತ್ತಿದ್ದವು. ಅವು ಗಳಲ್ಲಿ ಒಂದು ಗಾಬರಿಯಾಗಿ ಇವನನ್ನು ಕಚ್ಚಿಯ ಬಿಟ್ಟಿತು. ಆಗಾಗ, ಆ ಚರಂಡಿಯ ಬಾಗಿಲುಗಳಿಂದ ಶುದ್ಧ ವಾಯುವು ಬರುತ್ತಿದ್ದಿತು. ಇದರಿಂದ ಇವನಿಗೆ ಸ್ವಲ್ಪ ಆಯಾಸ ಪರಿಹಾರ ವಾಗುತ್ತಿತ್ತು,

ಸುಮಾರು ಮಧ್ಯಾಹ್ನದ ೩ ಗಂಟೆಯ ಸಮಯಕ್ಕೆ ಅವನು ದೊಡ್ಡ ಚರಂಡಿಯ ಬಳಿಗೆ ಬಂದನು. ಹಠಾತ್ತಾಗಿ ಇಷ್ಟು ದೊಡ್ಡ ಚರಂಡಿಯನ್ನು ನೋಡಿ ಇವನಿಗೆ ಮೊದಲು ಆಶ್ಚರ್ಯವಾಯಿತು. ಅನಂತರ ಎರಡು ಕಡೆಗಳಲ್ಲಿ ದು ಕೈಚಾಚಿದರೂ ಗೋಡೆ ಗಳು ಸಿಕ್ಕದೆಯ, ತಲೆಗೆ ಕಮಾನು ತಗುಲದೆಯೂ ಇರು ವಂತಹ ಸುರಂಗ ಮಾರ್ಗಕ್ಕೆ ಆಕಸ್ಮಿಕವಾಗಿ ಬಂದುದು, ಇವನಿಗೆ ಗೋಚರವಾಯಿತು. ಆ ದೊಡ್ಡ ಚರಂಡಿಯು ಎಂಟು ಅಡಿಗಳಷ್ಟು ಅಗಲವಾಗಿಯ, ಏಳು ಅಡಿಗಳಷ್ಟು ಎತ್ತರವಾಗಿಟು ಇತ್ತು.

ಅವನು ಅಲ್ಲಿ ನಿಂತುಬಿಟ್ಟನು. ಅವನಿಗೆ ಬಹಳವಾಗಿ ಆಯಾಸ ವಾಗಿತ್ತು. ಗಾಳಿಗಾಗಿ ಬಿಟ್ಟಿದ್ದ ದೊಡ್ಡ ರಂಧದಿಂದ ಸ್ಪುಟ ವಾಗಿ ಬೆಳಕು ಬಿದ್ದಿತ್ತು. ಜೀನ್ ವಾಲ್ಜೀನನು, ಗಾಯಪಟ್ಟಿದ್ದ ಆ ಮನುಷ್ಯನನ್ನು ಸಹೋದರ ವಾತ್ಸಲ್ಯದಿಂದಲೂ, ಕನಿಕರದಿಂ ದಲೂ ಆ ಚರಂಡಿಯ ಪಕ್ಕದ ದಡದಮೇಲೆ ಮೆಲ್ಲನೆ ಇಳಿಸಿದನು, ರಕ್ತಮಯವಾಗಿದ್ದ ಮೋರಿಯಸ್ಕನ ಮುಖವು, ಗಾಳಿಯ ರಂಧದಿಂದ ಬಿದ್ದ ಬೆಳಕಿನಲ್ಲಿ ನೋಡಿದರೆ ಹೆಣದ ಮುಖ ದಂತೆಯೇ ಕಂಡಿತು ; ಕಣ್ಣುಗಳು ಮುಚ್ಚಿದ್ದವು ; ಕೂದಲು ಕೆಂಪು ಬಣ್ಣದಲ್ಲಿ ನೆನೆದು ಒಣಗಿದ್ದ ಕುಂಚಿಗೆಗಳಂತೆ (brushes) ಗಂಡಸ್ಥಳಗಳಲ್ಲಿ ಹತ್ತಿಕೊಂಡಿದ್ದವು ; ತೋಳುಗಳು ನಿರ್ಬಲವಾಗಿ ಜೋಲು ಬಿದ್ದಿದ್ದುವು. ಅವಯವಗಳೆಲ್ಲವೂ ತಣ್ಣಗಾಗಿದ್ದುವು. ಅವನ ಕಟವಾಯಿಗಳಲ್ಲಿ ರಕ್ತವು ಸುರಿದು ಹೆಪ್ಪುಗಟ್ಟಿದ್ದಿತು. ಅವನ ಕೊರಳ ಪಟ್ಟಿಯ ಗಂಟಿನಲ್ಲಿ ರಕ್ತವು ಸುರಿ ಸುರಿದು ಹೆಪ್ಪಾ ಗಿತ್ತು. ಅವನ ಒಳ ಅಂಗಿಯು ಗಾಯಗಳಲ್ಲಿ ಅಂಟಿಕೊಂಡಿತ್ತು : ಮೇಲಂಗಿಯ ಬಟ್ಟೆಯು, ಶರೀರದ ಗಾಯಗಳಿಂದ ಹೊರಬಿದ್ದ ಮಾಂಸಖಂಡಗಳಿಗೆ ತಗಲಿ ರಕ್ತ ಬರುವಂತೆ ಮಾಡುತ್ತಿದ್ದಿತು, ಜೀನ್ ವಾಲ್ಜೀನನು, ಬೆರಳುಗಳ ಕೊನೆಯಿಂದ ಉಡುಪುಗಳನ್ನು ಓರೆಮಾಡಿ ಅವನ ಎದೆಯ ಮೇಲೆ ತನ್ನ ಕೈಯನ್ನಿಟ್ಟನು. ಎದೆಯು ಇನ್ನೂ ಮೀಟುತ್ತಿದ್ದಿತು. ಜೀನ್ ವಾಲ್ಜೀನನು ತನ್ನ ಒಳ ಅಂಗಿ ಯನ್ನು ಹರಿದು ಗಾಯಗಳಿಗೆ ಸಾಧ್ಯವಾದ ಮಟ್ಟಿಗೆ ಕಟ್ಟುಗಳನ್ನು ಕಟ್ಟಿ, ಹರಿಯುತ್ತಿದ್ದ ರಕ್ತವನ್ನು ನಿಲ್ಲಿಸಿದನು. ಅನಂತರ ಆ ಮಂಕು ಬೆಳಕಿನಲ್ಲಿ, ಇನ್ನೂ ಸ್ಮತಿಯಿಲ್ಲದೆ ಮೃತನಾದವನಂತೆ ಬಿದ್ದಿದ ಅವನ ಮೇಲೆ ಚೀನ ವಾಸನು ಬಾಗಿ, ಯಾವುದೋ ಹೇಳಲಾರದಂತಹ ವೈರ ದೃಷ್ಟಿಯಿಂದ ಅವನನ್ನು ನೋಡಿದನು.

ಮೇರಿಯಸ್ಸನ ಬಟ್ಟೆಗಳನ್ನು ತೆಗೆದಾಗ ಅವನ ಜೇಬುಗಳಲ್ಲಿ ಎರಡು ಪದಾರ್ಥಗಳು ಅವನಿಗೆ ಸಿಕ್ಕಿದುವು. ಹಿಂದಿನ ದಿನ ಇಟ್ಟು ಮರೆತಿದ್ದ ರೊಟ್ಟಿಯೂ ಮತ್ತು ಮೇರಿಯಸ್ಕೃನ ಜೇಬಿನ ಪುಸ್ತಕವೂ (Pocket Book). ಅವನು ರೊಟ್ಟಿಯನ್ನು ತಿನ್ನುತ್ತ ಪುಸ್ತಕ ವನ್ನು ತೆರೆದನು. ಮೊದಲನೆಯ ಪುಟದಲ್ಲಿ ಮೆರಿಯಸ್ಸನು ಬರೆದಿದ್ದ ನಾಲ್ಕು ಪಙ್ಕ್ತಿಗಳು ಅವನ ಕಣ್ಣಿಗೆ ಬಿದ್ದವು. ಅವನ್ನು ನೆನಪಿನಲ್ಲಿಡಬೇಕು.

‘ ನನ್ನ ಹೆಸರು ಮೇರಿಯಸ್ ಸಾಂಟಮರ್ಸಿ, ನನ್ನ ಶವವನ್ನು ಮೆರೆಯಿಸ್ ಬೀದಿಯ ರೂ ಡಿ ಫೈಲ್ಸ್ ಡ್ರ ಕಲ್ವೇರ್’ನ, ೬ನೆಯ ನಂಬರು ಮನೆಯಲ್ಲಿರುವ ನಮ್ಮ ತಾತನಾದ ಎಂ. ಜಿಲ್ಲೆ ನಾರ್ಮಂಡ್ ಎಂಬಾತನ ಬಳಿಗೆ ಹೊತ್ತುಕೊಂಡು ಹೋಗಿತಲಪಿಸಿ.’

ಗಾಳಿಯ ರಂಧದಿಂದ ಬಿದ್ದಿದ್ದ ಬೆಳಕಿನಲ್ಲಿ ಜೀನ್ ವಾಲ್ಜೀ ನನು ಈ ನಾಲ್ಕು ಪದಗಳನ್ನು ಓದಿ, ಆಲೋಚನೆಯಲ್ಲಿ ಮುಳುಗಿದವನಂತೆ ಅದನ್ನೇ ‘ ರೂ ಡಿ ಫೈಲ್ಸ್ ಡ್ಯೂ ಕಲ್ವೆರ್‌, ನಂಬರು ೬, ಮಾನ್ಸಿಯರ್ ಜಿಲ್ಲೆ ನಾರ್ಮಂಡ್‌’ ಎಂದು ಮೆಲ್ಲನೆ ಮತ್ತೆ ಮತ್ತೆ ಉಚ್ಚರಿಸುತ್ತ ಒಂದು ಕ್ಷಣ ಕಾಲ ಸ್ತಬ್ಬನಾಗಿ ನಿಂತನು. ಅನಂತರ ಆ ಪುಸ್ತಕವನ್ನು ಮತ್ತೆ ಮೇರಿಯಸ್ಸನ ಜೇಬಿ ನಲ್ಲಿಟ್ಟು ರೊಟ್ಟಿಯನ್ನು ತಿಂದನು. ಅದರಿಂದ ಅವನಿಗೆ ಸ್ವಲ್ಪ ಶಕ್ತಿ ಮತ್ತೆ ಬಂತು, ವುನ : ಮೇರಿಯಸ್ಸನನ್ನು ಬೆನ್ನಿನ ಮೇಲೆ ಹೊತ್ತು ಅವನ ತಲೆಯನ್ನು ಎಚ್ಚರಿಕೆಯಿಂದ ತನ್ನ ಒಲಭುಜದ ಮೇಲೆ ಇಟ್ಟುಕೊಂಡು ಚರಂಡಿಯಲ್ಲಿ ಇಳಿಯಲಾರಂಭಿಸಿದನು. ಆ ದೊಡ್ಡ ಚರಂಡಿದು ಸುಮಾರು ಆರು ಮೈಲಿಗಳ ಉದ್ದವಿತ್ತು.

ತಾನು ಪ್ಯಾರಿಸ್ ನಗರದ ಮಧ್ಯ ಭಾಗದಲ್ಲಿಲ್ಲವೆಂತಲೂ, ಊರು ಹೊರಗಿನ ಸಾಲು ಮರಗಳ ಮಾರ್ಗದ ಸಮೀಪದಲ್ಲಿರುವೆ ನೆಂತಲೂ ಅವನು ಮಸ್ಸಿನಲ್ಲಿ ನಿರ್ಧರಿಸಿಕೊಂಡನು. ಬೀದಿಗಳು ಕಡಿಮೆಯಾಗಿರುವ ಕಡೆಗಳಲ್ಲಿ ವಾಯು ರಂಧ್ರಗಳೂ ಸಹ ಕಡಿಮೆ ಯಾಗಿಯೇ ಇದ್ದು, ಈಗ ಜೀನ್ ವಾನನ ಸುತ್ತಲೂ ಕತ್ತ ಲೆಯು ದಟ್ಟವಾಗಿ ಕವಿಯಿತು. ಇಷ್ಟಾದರೂ ಅವನೇನೋ ಆ ಅಂಧಕಾರದಲ್ಲಿ ತಡಕಿಕೊಂಡು ಮುಂದೆಮುಂದಕ್ಕೆ ಹೋಗುತ್ತಲೇ ಇದ್ದನು.

ಈ ಅಂಧಕಾರವ ಕಡೆಗೆ ಬಹಳ ಭಯಂಕರವಾಯಿತು. ಅವನು ಒಳಕ್ಕೆ ನೀರು ಬರುತ್ತಿದ್ದ ಬಾಗಿಲಿಗೆ, ಎಂದರೆ ಕೆಸರಿನ ಬಚ್ಚ ಲಿಗೇ ಬಂದನು. ಅಲ್ಲಿ, ಪದೇ ಪದೇ ಮಳೆ ಸುರಿದು ನೆಲವು ಕೊರೆದು ಕೊಚ್ಚೆಯಿಂದ ಉಸುಬಾಗಿದ್ದಿತು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನವೆ ಎಚ್ಚರ
Next post ಹೊಕ್ಕ ಕೋಲು (ಕಾಗಲ್ಲೂ ಕರಿಗಲ್ಲೂ)

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…