ನಾಡಿಗೇರ ಕೃಷ್ಣರಾಯರು ಹಳೆಯ ತಲೆಮಾರಿನ ಪ್ರಸಿದ್ಧ ಹಾಸ್ಯ ಸಾಹಿತಿಗಳು.

ಒಮ್ಮೆ ಕ್ಲಬ್ಬಿನಿಂದ ಮನೆಗೆ ಬರುವಾಗ ರಾತ್ರಿ ಎರಡುಗಂಟೆ ಅಗಿತ್ತು. ಬೀಟ್ ಡ್ಯೂಟಿಯಲ್ಲಿದ್ದ ಪೋಲೀಸ್‌ನವ ನಾಡಿಗೇರರ ರಟ್ಟೆ ಹಿಡಿದು ಯಾರು ನೀನು? ಎಂದು ಕೇಳಿದಾಗ ನಾನು ನಾಡಿಗೇರ ಕೃಷ್ಣರಾಯ ಎಂದು ಒಣಗುತ್ತಿದ್ದ ನಾಲಿಗೆಯಲ್ಲಿ ನುಡಿದರು. “ನೋಡು ಆ
ಮಹಾನುಭಾವನ ಹೆಸರು ಕೆಡಿಸಬೇಡ ನಡೀ ಪೋಲೀಸ್‌ಸ್ಟೇಷನ್‌ಗೆ” ಎನ್ನುತ್ತಾ ನಾಡಿಗೇರರನ್ನು
ಸ್ಟೇಷನ್‌ಗೆ ಎಳೆದುಕೊಂಡು ಹೋದ!
***