ಅವರು: “ತಾವು ಸಿಗರೇಟು ಸೇದುತ್ತೀರಾ?”
ಇವರು: “ಇಲ್ಲಪ್ಪ.”
ಅವರು: “ಬೀಡಿ ಚುಟ್ಟ ಇತ್ಯಾದಿ?”
ಇವರು: “ಛೇ, ಛೇ ಅವಾವುದೂ ಇಲ್ಲ”
ಅವರು: “ಕುಡಿಯುವ ಅಭ್ಯಾಸ?”
ಇವರು: “ಅಯ್ಯೋ ಅದರ ಗಂಧವೇ ಗೊತ್ತಿಲ್ಲ”
ಅವರು: “ಆಯ್ತು. ಇಸ್ಪೀಟು, ಜೂಜು ವಗೈರೆ?”
ಇವರು: “ಎಲ್ಲಾದರೂ ಉಂಟೆ? ಅಂತಹ ದುರಭ್ಯಾಸಗಳು ಇಲ್ಲವೇ ಇಲ್ಲ.”
ಅವರು: “ಪರವಾಗಿಲ್ಲವೆ. ಯಾವೊಂದು ದುಶ್ಚಟವೂ ನಿಮಲ್ಲಿ ಬಳಿಸುಳಿದಿಲ್ಲ. ನಿಜಕ್ಕೂ ನಿಮ್ಮದು ಅದ್ಭುತ!”
ಇವರು: “ಆದರೆ ಒಂದೇ ಒಂದು ಅಭ್ಯಾಸ ನನಗೆ ಪರಂಪರಾನುಗತವಾಗಿ ಬಂದಿದೆ. ಅಷ್ಟೆ.”
ಅವರು: “ಅದೇನು ಅಂತ ಬೇಗ ಹೇಳಿಪ್ಪ ಕೇಳೋಣ.”
ಇವರು: “ಸುಳ್ಳು ಹೇಳೋದು!”
***