ಪಾಪಿಯ ಪಾಡು – ೪

ಪಾಪಿಯ ಪಾಡು – ೪

ಬ್ರೆವೆಟ್, ಚೆನಿಲ್‌ ಡ್ಯೂ, ಕೋಷೆಸೆಯಿಲ್ ಎಂಬ ಮೂರು ಮಂದಿ ಸಾಕ್ಷಿಗಳ ವಿಚಾರಣೆಯಾಯಿತು. ಇವರೂ ಅಪರಾಧಿಗಳಾಗಿದ್ದ ವರೇ, ಈ ಮೂವರೂ, ‘ಈಗ ಬಂದಿಯಾಗಿರುವವನೇ ಜೀನ್ ವಾಲ್ಜೀನನ್ನು,’ ಎಂದು ಸಾಕ್ಷ್ಯ ಹೇಳಿದರು. ಇವರು ಒಬ್ಬೊ ಬ್ಬರು ಸಾಕ್ಷ್ಯ ಹೇಳುವಾಗಲೂ, ಸೇರಿದ್ದ ಗುಂಪಿನಲ್ಲಿ, ಈ ಸಾಕ್ಷ್ಯದಿಂದ ಅಪರಾಧಿಯ ಹಣೆಯ ಬರಹವು ಕಂಡಂತೆಯೇ ಆಗು ವುದೆಂದು ಗುಜುಗುಂಪುಲು ಹುಟ್ಟುತ್ತಿತ್ತು. ಕಟ್ಟಕಡೆಗೆ ನ್ಯಾಯಾ ಧಿಪತಿಯು, ‘ ಅಧಿಕಾರಿಗಳೇ, ಆಜ್ಞೆಯನ್ನು ನಡೆಸಲು ಸಿದ್ದ ರಾಗಿ, ನಾನು ಇನ್ನು ಈ ಮೊಕದ್ದಮೆಯ ವಿಷಯವೆಲ್ಲವನ್ನೂ ಸಂಗ್ರಹಿಸಿ ತೀರ್ಮಾನ ಹೇಳುವೆನು,’ ಎಂದನು.

ಈ ಸಮಯಕ್ಕೆ ನ್ಯಾಯಾಧಿಪತಿಯ ಬಳಿಯಲ್ಲಿ ಯಾರೋ ಸರಿದು ಬಂದಂತಾಯಿತು. ‘ಬೆನೆಟ್, ಚೆನಿಲೆಡ್ಯೂ, ಕೊಪೆಪೆಯಿ ಲ್‌, ಈ ಕಡೆ ನೋಡಿ,’ ಎಂದು ಕೂಗಿಕೊಂಡ ಧ್ವನಿಯು ಕೇಳಿಬಂತು.

ಈ ಸ್ವರವ ಅತ್ಯಂತ ದುಃಖಕರವಾಗಿಯೂ ಭಯಂಕರ ವಾಗಿಯೇ ಇದ್ದುದರಿಂದ, ಇದನ್ನು ಕೇಳಿದವರೆಲ್ಲರೂ ದಿಕ್ಕು ತೋರದೆ ಸ್ತಬ್ಬರಾಗಿ ವಿವರ್ಣಮುಖರಾದರು.

ಎಲ್ಲರ ದೃಷ್ಟಿಗಳೂ ಈ ಸ್ವರವು ಕೇಳಿಬಂದ ಕಡೆಗೆ ತಿರು ಗಿದ್ದುವು. ನ್ಯಾಯಾಧಿಪತಿಯ ಹಿಂದೆ ಗೌರವಸ್ಸರಾದ ಪ್ರೇಕ್ಷ ಕರ ಮಧ್ಯದಲ್ಲಿ ಕುಳಿತ್ತಿದ್ದ ಒಬ್ಬಾತನು ಎದ್ದು, ನ್ಯಾಯಾಧಿಪತಿಯ ಧರ್ಮಾಸನಕ್ಕೂ ನ್ಯಾಯವಾದಿಗಳು ಕುಳಿತಿದ್ದ ಸ್ಪಳ ನಡುವೆ ಯಿದ್ದ ಸಣ್ಣ ಬಾಗಿಲನ್ನು ನೂಕಿ ತೆರೆದುಕೊಂಡು ನ್ಯಾಯಸ್ಥಾನದ ಮಧ್ಯದಲ್ಲಿ ಬಂದು ನಿಂತನು. ನ್ಯಾಯಾಧೀಶನೂ ಸರಕಾರದ ಪಕ್ಷದ ವಕೀಲನೇ ಮೊದಲಾದ ಇಪ್ಪತ್ತು ಮಂದಿಯು ಇವನನ್ನು ಗುರ್ತಿಸಿ ಆ ಕ್ಷಣವೇ, ಮಾನ್‌ಸಿಯುರ್ ಮೆಡಲಿನ್ ! ‘ ಎಂದು ಆಶ್ಚರ್ಯದಿಂದ ಕೂಗಿದರು. ಓಹೋ ! ಅವನೇ ನಿಜ! ಅವನ ಮುಖದಮೇಲೆ ಚೆನ್ನಾಗಿ ಬೆಳಕು ಬಿದ್ದಿತ್ತು. ಅವನು ಟೋಪಿಯನ್ನು ಕೈಯಲ್ಲಿ ಹಿಡಿದಿದ್ದನು. ಅವನ ಉಡುಪಿನಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ನಿಲುವಂಗಿಗೆ ಸರಿಯಾಗಿ ಗುಂಡಿಗಳನ್ನು ಹಾಕಿಕೊಂಡಿದ್ದನು. ಆದರೆ ಅವನ ಮುಖವು ಕಳಾಹೀನವಾಗಿತ್ತು; ಅವನಿಗೆ ಸ್ವಲ್ಪ ನಡುಕವುಂಟಾ ದಂತೆ ಇತ್ತು. ಆರಾಸ್ ಪಟ್ಟಣಕ್ಕೆ ಬರುವಾಗಲೇ ಅರ್ಧ ನರೆತಿಮ್ಮ ಅವನ ಕೂದಲು ಇಷ್ಟು ಹೊತ್ತಿಗೆ ತೀರ ಬೆಳ್ಳಗಾಗಿತ್ತು. ಎಲ್ಲರ ಕಣ್ಣುಗಳೂ ಇವನ ಮೇಲೆಯೇ ನೆಟ್ಟಿದ್ದುವು. ಇವನು, ಸಾಕ್ಷಿ ಗಳಾದ ಕೋಷೆಪೆಯಿಲ್, ಬೆನೆಟ್ ಮತ್ತು ಚೆನಿಲ್‌ಡ್ಯೂ, ಇವರಿದ್ದ ಕಡೆಗೆ ಮುಂದುವರಿದು ಬಂದು, ‘ ನಿಮಗೆ ನನ್ನ ಗುರುತು ಸಿಕ್ಕ ಲಿಲ್ಲವೇ ?’ ಎಂದನು. ಈ ಮೂರು ಮಂದಿಯ ಬೆರಗಾಗಿ ದಿಕ್ಕು ತೋರದೆ ತಮಗೆ ಗುರುತು ಸಿಕ್ಕಲಿಲ್ಲವೆಂದು ತಲೆಯ ನ್ನಳ್ಳಾಡಿಸಿದರು.

ಸರಕಾರದ ಪಕ್ಷದ ವಕೀಲನು ಗ್ರಾಮಾಧಿಕಾರಿಗೆ ಹುಚ್ಚು ಹಿಡಿದಿರುವದೆಂದನು. ಆದರೆ ಮನ್‌ಸಿಯರ್ ಮೇಡಲಿನನು ನ್ಯಾಯಸ್ಥಾನದಲ್ಲಿ ನೆರೆದಿದ್ದ ಜನರ ಎದೆ ಝಲ್ಲೆನ್ನುವಂತಹ ಧ್ವನಿ ಯಿಂದ, ‘ಸ್ವಾಮಿ ವಕೀಲರೇ, ನಿನಗೆ ನಮಸ್ಕಾರ : ನನಗೇನೂ ಹುಚ್ಚು ಹಿಡಿದಿಲ್ಲ ; ನೀವೇ ನೋಡುವಿರಿ; ನೀವು ಒಂದು ದೊಡ್ಡ ತಪ್ಪನ್ನು ಮಾಡುತ್ತಲಿರವಿರಿ. ಆ ಮನುಷ್ಯನಿಗೆ ಶಿಕ್ಷೆ ವಿಧಿಸದೆ ಅವನನ್ನು ಬಿಟ್ಟು ಬಿಡಿ. ನನ್ನ ಮುಖ್ಯ ಕರ್ತವ್ಯವನ್ನು ನಾನು ನಡೆಯಿಸಬೇಕಾಗಿದೆ. ಶಿಕ್ಷಾರ್ಹನಾಗಿರುವ ಅಪರಾಧಿಯು ನಾನು. ಇಲ್ಲಿ ನಿಜಾಂಶವನ್ನು ಸ್ಪಷ್ಟವಾಗಿ ನೋಡುತ್ತಿರುವವನು ನಾ ನೊಬ್ಬನೇ. ಇದು ನಿಜವು. ನಾನು ಈಗ ಇಲ್ಲಿ ಮಾಡುತ್ತಿರುವ ಕಾರ್ಯವನ್ನು ಮೇಲಿನಿಂದ ಭಗವಂತನು ನೋಡುತ್ತಿದ್ದಾನೆ. ನನಗೆ ಅಷ್ಟೇ ಸಾಕು. ನಾನಿಲ್ಲಿಯೇ ಇರುವೆನು. ನನ್ನನ್ನು ನೀವು ಹಿಡಿದುಕೊಳ್ಳಬಹುದು. ಹೇಗಾದರೂ ನನ್ನಿಂದ ಸಾಧ್ಯವಾದಷ್ಟು ಉತ್ತಮ ಕಾವ್ಯಗಳನ್ನು ನಾನು ಮಾಡಿದ್ದೇನೆ. ನಾನು ಬೇರೆ ಹೆಸರನ್ನಿಟ್ಟುಕೊಂಡು ವೇಷಾಂತರದಿಂದಿದ್ದೇನೆ. ಐಶ್ವರ್ಯವಂತನಾ ಗಿದ್ದೇನೆ. ಗ್ರಾಮಾಧಿಕಾರಿತ್ವವನ್ನು ಪಡೆದಿದ್ದೇನೆ. ಪುನಃ ಸತ್ಯ ವಂತರ ಸಂಘದಲ್ಲಿ ಸೇರಿಕೊಳ್ಳಲು ಆಸೆಪಟ್ಟು ಪ್ರಯತ್ನಿಸಿದ್ದೇನೆ. ಇದು ಸಾಧ್ಯವಲ್ಲವೆಂದು ಕಾಣುವುದು. ಮುಖ್ಯವಾಗಿ, ನಾನು ಹೇಳಲಾಗದ ಅನೇಕ ವಿಷಯಗಳಿವೆ. ನನ್ನ ಜೀವಮಾನಚರಿತ್ರ ವನ್ನು ನಾನು ನಿಮ್ಮಲ್ಲಿ ವಿಸ್ತರಿಸಿ ಹೇಳುವುದಿಲ್ಲ. ಆದರೂ ಯಾವಾಗಲಾದರೂ ನಿಮಗೆ ತಿಳಿಯಲೇ ತಿಳಿಯುವುದು. ನಾನು ಮಾನ್ ಸೀನರ್‌ ಎಂಬ ಪಾದ್ರಿಯ ಕೆಲವು ವಸ್ತುಗಳನ್ನು ಕದ್ದೆನು ; ಇದು ನಿಜ, ಪೆಟಿಟ್ ಜರ್ವೆಲ್ ಎಂಬ ಮಗುವಿನ ಹಣವನ್ನು ಕದ್ದುದೂ ನಿಜ, ಜೀನ್ ವಾಲ್ಜೀನನು ಬಹಳ ದುರಾತ್ಮನೂ, ನೀಚನೂ ಎಂದು ಅವರು ನಿಮಗೆ ಹೇಳಿದುದು ನ್ಯಾಯವು. ಆದರೆ ಅವನೇ ಅಷ್ಟು ದೂಷಣೆಗೂ ಪಾತ್ರನಾಗಲಾರನು. ನ್ಯಾಯ ವರ್ತಿಗಳೇ, ಲಾಲಿಸಬೇಕು ; ನನ್ನಂತಹ ಕೀಳಾದ ಮನು ಷ್ಯನು ದೈವಸಂಕಲ್ಪಕ್ಕೆ ಪ್ರತಿಯಾಡುವದಕ್ಕೂ ಸಮಾಜಕ್ಕೆ ತಿಳಿ ವಳಕೆಯನ್ನು ಹೇಳುವುದಕ್ಕೂ ಶಕ್ತನಲ್ಲ. ಆದರೆ ನಾನು ಯಾವ ದುಷ್ಕೀರ್ತಿಯಿಂದ ತಪ್ಪಿ ಆತ್ಮೋದ್ಧಾರಹೊಂದಲು ಯತ್ನಿಸಿ ದೆನೋ, ಅಂತಹ ದುರ್ಯಶವು ಜನರಿಗೆ ಬಹಳ ಹಾನಿಕರವಾದು ದೆಂಬುದನ್ನು ತಾವು ಚೆನ್ನಾಗಿ ಗಮನದಲ್ಲಿಡಬೇಕು. ಗ್ಯಾಲೀ ಹಡಗೇ ಗಾಲಿಯ ಗುಲಾಮನನ್ನು ಮಾಡುವುದು, ಅಲ್ಲಿನ ಸ್ಥಿತಿ ಯಿಂದಲೇ ಅವನು ಕಠೋರನೂ, ನೀಚನೂ ಆಗುವನು, ತಮಗೆ ಸಮ್ಮತವಾದರೆ ನನ್ನ ಮಾತನ್ನು ದಯಮಯವಾದ ತಮ್ಮ ಚಿತ್ತಕ್ಕೆ ತರಬೇಕು. ಗ್ವಾಲಿ ಹಡಗುಗಳಿಗೆ ನಾನು ಹೋಗುವುದಕ್ಕೆ ಮೊದಲು ನಾನೊಬ್ಬ ದಡ್ಡನಾದ ರೈತನು, ಮುಂಕುಮಂಕಾ ಗಿದ್ದೆನು, ಗ್ಯಾಲಿ ಶಿಕ್ಷೆಯಿಂದ ನನ್ನ ಸ್ಥಿತಿಯೇ ವ್ಯತ್ಯಾಸವಾಯಿತು. ನಾನು ಮೊದಲು ಶುಂಠನಾಗಿದ್ದು ಅನಂತರ ಮಹಾ ದುಷ್ಟನಾದೆ ; ಮೊದಲು ಮರದ ಕೊರಡಿನಂತಿದ್ದವನು ಅನಂತರ ಉರಿಯುವ ಕೊಳ್ಳಿಯಾದೆ. ಮಹಾ ಕೂರತನದಿಂದ ಹಾಳಾಗಿ ಹೋಗಿದ್ದ ನಾನು, ಈಚಿಗೆ ಪರೋಪಕಾರ ಗುಣದಿಂದಲೂ ದಯಾಪರತ್ವ ದಿಂದಲೂ ಉದ್ಧಾರವಾದೆ, ಆದರೆ ಕ್ಷಮಿಸಬೇಕು. ನಾನು ಹೇಳು ವುದು ನಿಮಗೆ ಅರ್ಥವಾಗಲಾರದು. ಇನ್ನೇನೂ ಹೇಳಲಾರೆ. ನನ್ನನ್ನು ಕರೆದುಕೊಂಡು ಹೋಗಿ,’ ಎಂದು ಹೇಳಿ, ಮತ್ತೆ, ‘ ಅಯ್ಯೋ ದೇವರೇ, ಈ ನ್ಯಾಯವಾದಿಯು ತಲೆಯಲ್ಲಾಡಿಸು ತ್ತಿರುವನಲ್ಲಾ,’ ಎಂದು ನ್ಯಾಯವಾದಿಯನ್ನು ನೋಡಿ, ‘ ಸ್ವಾಮಿ, ಮಾನ್‌ಸಿಯರ್ ಮೇಡಲಿನನಿಗೆ ಹುಚ್ಚು ಹಿಡಿದಿರುವುದನ್ನುವಿರಿ, ನೀವು ನನ್ನ ಮಾತನ್ನು ನಂಬುವುದಿಲ್ಲ. ಏನು ಮಾಡಲಿ ! ಅಂತೂ ಆ ಮನುಷ್ಯನನ್ನು ಮಾತ್ರ ದಂಡನೆಗೆ ಗುರಿಮಾಡ ಬೇಡಿ, ಅಯ್ಯೋ ! ಈ ಜನರಿಗೆ ನನ್ನ ಪರಿಚಯವೇ ಇಲ್ಲವೆ ! ಆ ಜೇವರ್ಟನು ಇಲ್ಲಿದ್ದರೆ ಕೂಡಲೇ ನನ್ನನ್ನು ಗುರುತಿಸು ತಿದ್ದನು,’ ಎಂದನು,

ಈ ಮಾತುಗಳನ್ನು ಹೇಳಿದ ಅವನ ಸ್ವರದಲ್ಲಿ ಕಂಡ ದಯಾ ಮಯವಾದ ಮತ್ತು ಹೃದಯಛೇದಕವಾದ ವ್ಯಸನವನ್ನು ಅಪ್ಪಿ ಷ್ಟೆಂದು ಹೇಳಲು ಸಾಧ್ಯವಿರಲಿಲ್ಲ.

ಅವನು ಆ ಮೂರು ಮಂದಿ ಅಪರಾಧಿಗಳಾಗಿದ್ದವರ ಕಡೆಗೆ ತಿರುಗಿ, ‘ಒಳ್ಳೆಯದು. ಬೋವೆಟ್, ನನಗೇನೋ ನಿನ್ನ ಗುರುತಿದೆ. ನಿನಗೆ ಜ್ಞಾನಕವಿದೆಯೋ ……?

ಎಂದು ಒಂದು ಕ್ಷಣ ನಿದಾನಿಸಿ ಅನಂತರ, ‘ ಗ್ಯಾಲಿ ಹಡಗಿನಲ್ಲಿ ನಿನ್ನನ್ನು ತೂಗಹಾಕುತ್ತಿದ್ದ ಆ ಹೆಣಿಗೆಯ ಹಗ್ಗದ ಜ್ಞಾಪಕವು ನಿನಗಿದೆಯೇ ?’ ಎಂದನು.

ಬೆವೆಟನ್ನು, ಆಶ್ಚರ್ಯದಿಂದ ಬೆಚ್ಚಿ, ಅವನನ್ನು ಕಾಲಿನಿಂದ ತಲೆಯವರೆಗೂ ನೋಡಿದನು.

ತರುವಾಯ ಮತ್ತೊಬ್ಬನನ್ನು ನೋಡಿ, “ ಚೇನಿಲ್‌ಡ್ಯೂ ಎಂಬ ಗೌರವ ನಾಮವನ್ನು ನಿನಗೆ ನೀನೇ ಕೊಟ್ಟುಕೊಂಡಿರುವೆ ಯಲ್ಲವೇ ! ಚೇನಿಲ್‌ಡ್ಯೂ ! ಕೇಳು, ನಿನ್ನ ಎಡಭುಜದಮೇಲೆ ಇದ್ದ ಟಿ. ಎಫ್. ಪಿ. ಎಂಬ ಮೂರು ಅಕ್ಷರಗಳನ್ನು ಅಳಿಸುವುದಕ್ಕಾಗಿ ಒಂದು ದಿನ, ಬೆಂಕಿಯಿಂದ ತುಂಬಿದ ಕಾದ ತಟ್ಟೆಯಮೇಲೆ ಆ ಭುಜವನ್ನು ಇಟ್ಟುದುದರಿಂದ ಆ ಭುಜವೆಲ್ಲವೂ ಬಹಳವಾಗಿ ಸುಟ್ಟು ಹೋಗಿದೆ. ಆದರೂ ಅಕ್ಷರಗಳು ಇನ್ನೂ ನಿನ್ನ ಭುಜದ ಮೇಲೆ ಕಾಣುತ್ತಲೇ ಇವೆ, ಅಲ್ಲವೇ ?’ ಎಂದನು.

ಚೆನಿಲ್‌ಡ್ಯೂ, ‘ ಅಹುದು, ನಿಜ,’ ಎಂದನು.

ಕೋಷೆಪಿಯಿಲಿನ ಕಡೆಗೆ ತಿರುಗಿ, ‘ ಕೋಷೆಪೆಯಿಲ್‌, ನಿನ್ನ ಎಡದೋಳಿನಮೇಲೆ ಗಾಯಮಾಡಿ ಸುಡುತ್ತಿದ್ದ ಪುಡಿಯಿಂದ ನೀಲಿ ಬಣ್ಣದ ಅಕ್ಷರಗಳಲ್ಲಿ ತಾರೀಖನ್ನು ಗುರ್ತಿಸಿರುವರಲ್ಲವೆ ? ಅದು, ಚಕ್ರವರ್ತಿಯು ಕಾನೆಸ್’ ಪಟ್ಟಣಕ್ಕೆ ಬಂದು ಇಳಿದ ೧೮೧೫ ನೆಯ ಮಾರ್ಚಿ ೧ ನೇ ತಾರೀಖು, ಎಲ್ಲಿ ನಿನ್ನ ಅಂಗಿಯ ತೋಳನ್ನು ತೆರೆ,’ ಎಂದನು.

ಕೋಷೆಪೆಯಿಲನು ಅಂಗಿಯ ತೋಳನ್ನು ತೆರೆದು ತೋರಿಸಿ ದನು. ಸುತ್ತಲೂ ಇದ್ದವರ ದೃಷ್ಟಿಗಳೆಲ್ಲವೂ ಇವನ ತೋಳಿನ ಮೇಲೆ ಬಿದ್ದುವು. ಒಬ್ಬ ಸಿಪಾಯಿಯ ದೀಪವನ್ನು ತಂದನು. ಅದೇ ತಾರೀಖು ಅಲ್ಲಿ ಸ್ಪುಟವಾಗಿ ಕಂಡಿತು.

ಅನಂತರ ದುಃಖಭಾಗಿಯಾದ ಮೇಡಲಿನನು ತನ್ನ ಪ್ರಯತ್ನವು ಸಫಲವಾಯಿತೆಂಬ ಭಾವದಿಂದಲೂ, ನಿರಾಶನಾದು ದರಿಂದಲೂ ಒಂದು ವಿಧವಾದ ಕಿರುನಗೆಯಿಂದ, ನ್ಯಾಯಾಧೀಶ ನನ್ನೂ ಅಲ್ಲಿ ನೆರೆದಿದ್ದ ಜನಜಾಲವನ್ನೂ ನೋಡಿದನು. ಪ್ರತ್ಯಕ್ಷ ವಾಗಿ ನೋಡಿದ್ದವರು, ಅದನ್ನು ಸ್ಮರಿಸಿಕೊಂಡರೆ ಈಗಲೂ ಅವರ ಎದೆಯು ಝಲ್ಲೆನ್ನುವುದು. ಅನಂತರ ಆತನು, ‘ ಈಗಲಾದರೂ ನಾನು ಜೀನ್ ವಾಲ್ಜೀನನೆಂಬುದು ನಿಮಗೆ ಸ್ಪಷ್ಟವಾಯಿತ ಲ್ಲವೇ ? ‘ ಎಂದನು. ಆಗ ಆ ನ್ಯಾಯಸ್ಥಾನದಲ್ಲಿ ನ್ಯಾಯಾಧಿಪತಿಗಳೂ ಇಲ್ಲ, ವಾದಿಗಳೂ ಇಲ್ಲ, ವಕೀಲರೂ ಇಲ್ಲ, ಸಿಪಾಯಿಗಳೂ ಇಲ್ಲ; ನೆಟ್ಟ ಕಣ್ಣುಗಳೂ ಡವಗುಟ್ಟುವ ಎದೆಗಳೂ ಮಾತ್ರವೇ ಇದ್ದುವು. ಅಲ್ಲಿದ್ದವರಲ್ಲಿ ಯಾರಿಗೂ ತಮ್ಮ ಮನಸ್ಸಿನ ಸ್ಥಿತಿಯು ಹೇಗಿತ್ತೆಂದು ಗೋಚರವೇ ಆಗಲಿಲ್ಲವೆಂದು ಹೇಳಬಹುದು. ಅಲ್ಲಿ ಅದ್ಭುತ ಪ್ರಕಾಶವೊಂದೂ ತಮ್ಮ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣದಿದ್ದರೂ, ಪ್ರತಿಯೊಬ್ಬರ ಹೃದಯದಲ್ಲಿ ಮಾತ್ರ ಯಾವುದೋ ಒಂದು ಪ್ರಬಲ ತೇಜಸ್ಸು ಮಾಡಿದಂತೆ ಆಗಿ, ಎಲ್ಲರೂ ವಿಭ್ರಾಂತ ರಾದರು,

ಯಾರು ಏನನ್ನೂ ಹೇಳದಿದ್ದರೂ ಅಲ್ಲಿದ್ದ ಜನರೆಲ್ಲರಿಗೂ, ಯಾವುದೋ ಒಂದು ವಿದ್ಯುತ್ಪ್ರಕಾಶದಿಂದ ಪ್ರತ್ಯಕ್ಷವಾಗಿ ಕಂ ಡಂತೆ, ಒಂದು ಕ್ಷಣದಲ್ಲಿ, ಈ ಮನುಷ್ಯನ ಮಹಾ ಚರಿತೆಯು ಮನಸ್ಸಿಗೆ ಗ್ರಾಹ ವಾದುದಲ್ಲದೆ, ಈತನು, ತನಗೆ ಪ್ರತಿಯಾಗಿ ಮತ್ತೊಬ್ಬ ಮನುಷ್ಯನಿಗೆ ಶಿಕ್ಷೆಯಾಗಬಾರದೆಂಬ ಉದ್ದೇಶದಿಂದ ತನ್ನ ಆತ್ಮವನ್ನು ಅರ್ಪಿಸಿರುವನೆಂಬುದು ಸ್ಪುಟವಾಗಿ ಕಂಡು ಬಂದಿತು.

‘ ಇನ್ನು ಮುಂದಿನ ಕಾದ್ಯಗಳಿಗೆ ನಾನು ವಿಘ್ನ ಮಾಡ ಲಾರೆನು, ಇನ್ನೂ ನನ್ನನ್ನು ದಸ್ತಗಿರಿ ಮಾಡಿಲ್ಲವಾದ ಕಾರಣ ನಾನು ಹೊರಡುವೆನು. ನಾನು ಮಾಡಬೇಕಾದ ಕಾವ್ಯಗಳನೇಕವಿವೆ, ನಾನು ಎಲ್ಲಿಗೆ ಹೋಗುತ್ತಿರುವೆನೆಂಬುದು ಈ ವಾದಿಯ ಪಕ್ಷದ ವಕೀಲರಿಗೆ ಗೊತ್ತಿದೆ. ಅವರಿಗೆ ಇಷ್ಟ ಬಂದಾಗ ನನ್ನನ್ನು ದಸ್ತ ಗಿರಿಮಾಡಿಸಿ ತರಿಸಬಹುದು,’ ಎಂದು ಹೇಳುತ್ತ ಜೀನ್ ವಾಲ್ಜೀ ನನು ಹೊರಬಾಗಿಲ ಕಡೆಗೆ ನಡೆದನು. ಅವನ ಮಾತಿಗೆ ಪ್ರತಿಯಾಡಿ ದವರೂ ಇಲ್ಲ. ಯಾರ ಅವನನ್ನು ತಡೆಯಲೂ ಇಲ್ಲ. ಎಲ್ಲರೂ ಒಂದು ಪಕ್ಕಕ್ಕೆ ಸರಿದು ನಿಂತರು. ಆ ಸಮಯದಲ್ಲಿ, ಆ ಜನ ಗುಂಪು ಹಿಂದಕ್ಕೆ ಸರಿದು ಅವನಿಗೆ ದಾರಿಯನ್ನು ಬಿಡುವಂತೆ ಮೂಡುವಂತಹ ಒಂದು ಅನಿರ್ವಾಚ್ಯವಾದ ದೈವಿಕ ಶಕ್ತಿಯು ಅವ ನಲ್ಲಿದ್ದಂತೆ ಕಂಡಿತು. ಗುಂಪಿನಲ್ಲಿ ಅವನು ನಿದಾನವಾಗಿ ಹೆಜ್ಜೆ ಹಾಕುತ್ತ ಒಂದನು. ಬಾಗಿಲನ್ನು ಯಾರು ತೆರೆದರೋ ಗೊತ್ತಿಲ್ಲ. ಆತನು ಬರುವ ಹೊತ್ತಿಗೆ ಮಾತ್ರ ಬಾಗಿಲು ತೆಗೆದಿತ್ತು, ಅದರ ಬಳಿಗೆ ಬಂದು ಹಿಂದಿರುಗಿ, ಅವನು, ‘ಸ್ವಾಮಿ, ವಕೀಲ ಮಾನ್ಸಿಯುರವರೇ ! ನಾನು ನಿಮ್ಮ ವಶವರ್ತಿಯಾಗಿದ್ದೇನೆ’ ಎಂದು ಹೇಳಿದನು,

ಅನಂತರ, ನೆರೆದಿದ್ದ ಜನರ ಗುಂಪನ್ನು ಸಂಬೋಧಿಸಿ, ‘ಇಲ್ಲಿ ನೆರೆದಿರುವ ನೀವೆಲ್ಲರೂ ನನ್ನ ವಿಷಯದಲ್ಲಿ ಕನಿಕರಪಡುವಿರಲ್ಲವೇ ? ಪರಮಾತ್ಮಾ ! ನಾನು ಏನು ಮಾಡಲುದ್ದೇಶಿಸಿರುವೆನೆಂಬುದ ನ್ಯಾಲೋಚಿಸಿಕೊಂಡರೆ ನನ್ನ ವಿಷಯದಲ್ಲಿ ನೀವು, ಇಂತಹ ಸು ಸಂಧಿಯು ಇವನಿಗೆ ದೊರೆತಲ್ಲಾ ಎಂದು ಅಸೂಯೆ ಪಡಬೇಕಾ ಗಿದೆ. ಆದರೂ ಇಂತಹ ಸ್ಥಿತಿಯೊದಗಬಾರದಾಗಿತ್ತೆಂದಾಲೋ ಚಿಸುವಿರಿ,’

ಎಂದು ಹೇಳಿ ಹೊರಗೆ ಹೊರಟನು. ಬಾಗಿಲು ಹೇಗೆ ತೆರೆ ಯಿತೋ ಹಾಗೆಯೇ ಮುಚ್ಚಿಕೊಂಡಿತು. ಅಮೋಘ ಕಾರ್ಯ ಗಳನ್ನು ಮಾಡತಕ್ಕ ಮಹನೀಯರಿಗೆ ಸೇವೆ ಮಾಡಲು ಗುಂಪಿನಲ್ಲಿ ಯಾರಾದರೂ ಸಿದ್ದರಾಗಿಯೇ ಇರುವರಷ್ಟೆ.

ಅನಂತರ ಒಂದು ಗಂಟೆಯ ಕಾಲದಲ್ಲಿ ನ್ಯಾಯಸ್ಥಾನದ ಪಂಚಾಯತರ ನಿರ್ಣಯದಂತೆ, ಷ್ಯಾಂಪ್ ಮ್ಯಾಥ್ಯೂ ಎಂಬಾತನು ನಿಸ್ಸಂದೇಹವಾಗಿಯೂ ನಿರಪರಾಧಿಯೆಂದು, ಬಿಡುಗಡೆ ಮಾಡ ಲ್ಪಟ್ಟನು. ಹೀಗೆ ಶಿಕ್ಷೆಯಿಂದ ತಪ್ಪಿ ಬಂದ ಷ್ಯಾಂಪ್ ಮ್ಯಾಥ್ಯೂನನು ಮಂಕು ಬಡಿದವನಾಗಿ, ಅಲ್ಲಿ ನಡೆದ ಕಥೆಯು ಸ್ವಲ್ಪವೂ ತನಗರ್ಥವಾಗದ ಕಾರಣ, ‘ಇಲ್ಲಿ ಸೇರಿರುವರು ಎಲ್ಲರೂ ಹುಚ್ಚರು: ಹುಚ್ಚರು ! ‘ ಎಂದು ಹೇಳುತ್ತ ಹೊರಟುಹೋದನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೋಧನೆ
Next post ಕೋಲಣ್ಣಾ ಸಂಪಿಗೀಯಾ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…