ಅವಮರ್ಯಾದೆಯ ದೆಸೆಯಿಂದ ಸಂತಾಸಗ್ರಸ್ಮಳಾಗಿಗುವಾಗ ವಾಗ್ದೇ ವಿಗೆ ತಿಪ್ಪಾಶಾಸ್ತ್ರಿಯ ನೆನಪು ಬಂತು. ಅಹಾ! ಸಂತೋಷಪ್ರಾಪ್ತಿಸಿದಾಗ ಮರೆಯದೆ ಕರೆಸಿಕೊಂಡರೆ ಮುಂದಿನ ವೃದ್ಧಿಯ ಉಪಾಯವನ್ನೆಲ್ಲ ಹೇಳುವೆ ನೆಂದು ಅನುರಾಗ ಪೂರ್ವಕವಾಗಿ ವಾಗ್ದತ್ತಮಾಡಿದ ಆಪ್ತನನ್ನು ಮರೆತು ಬಿಟ್ಟ ಸಂಬಂಧ ಈ ಅಪಮಾನಕ್ಕೆ ಒಳಗಾದೆನೆಂಬ ಅನುಮಾನವು ವಾಗ್ದೇ ವಿಯ ಮನಸ್ಸಿಗೆ ಸೇರಿತು. ಆವಾಗಲೇ ಪತಿಯನ್ನು ಕರೆದು, ತಿಪ್ಪಾ ಶಾಸ್ತ್ರಿಯನ್ನು ಹುಡುಕಿ ತರಬೇಕಾಗಿ ತನಗಿರುವ ಅಪೇಕ್ಷೆಯನ್ನು ಗೃಹಿಣಿಯು ತಿಳಿಸಿದೊಡನೆ ಆಬಾಚಾರ್ಯನು ಊಳಿಗದವನಹಾಗೆ ಹೊರಟು, ತಿಪ್ಪಾಶಾಸ್ತ್ರಿ ಯನ್ನು ಕಂಡು ವಾಗ್ದೇವಿಯ ಅಪೇಕ್ಷೆಯನ್ನು ತಿಳಿಸಿದನು. ಸಂತೋಷಪಟ್ಟು ಶಾಸ್ತ್ರಿಯು ಆಬಾಚಾರ್ಯನ ಸಂಗಡಲೇ ಹೊರಟುಬಂದು, ವಾಗ್ದೇವಿಯನ್ನು ಕಂಡನು.
ತನಗೆ ಉಂಟಾದ ಮಾನಭಂಗವನ್ನು ಅಶ್ರುಜಲವಿಳಿಸುತ್ತಾ ವಾಗ್ದೇ ವಿಯು ಮುದ್ದುಗೆಳೆಯ ತಿಪ್ಪಾಶಾಸ್ತ್ರಿಗೆ ತಿಳಿಸಿ, ಅವನ ಕಾಲಿನ ಮೇಲೆ ಬಿದ್ದು ದುಃಖಪಡುತ್ತಾ ಹೊರಳಾಡಿದಳು. ಈ ಪ್ರಲಾಪವನ್ನು ನೋಡಿ ತಿಪ್ಪಾ ಶಾಸ್ತ್ರಿಯ ಎದೆಯು ಬಿರಿಯಿತು. ಆ ಮೋಹನಾಂಗಿಯನ್ನು ಎಬ್ಬಿಸಿ ಸಮ್ಮುಖ ದಲ್ಲಿ ಕೂರಿಸಿ–“ವಾಗೀ! ಚಿಂತೆ ಬಿಡು; ಅವಸರ ಮಾಡಬೇಡ. ನಿನ್ನ ಪ್ರೀತಿಯ ಒಡೆಯರು ಮುಯ್ಯಿಗೆಮುಯ್ಯಿ ತೀರಿಸದೆ ಸುಮ್ಮಗಿರುವರೆಂದು ಭಾವಿಸಿದಿಯಾ? ಛೀ. ಹಾಗೆ ನೆನಸ ಬೇಡ. ನಿನ್ನ ಶತ್ರುಗಳಿಗೆ ಬುದ್ಧಿ ಕಲಿ ಸದೆ, ಇಂದು ಭಿಕ್ಷೆಯನ್ನು ಅವರು ಮುಟ್ಟಿಲಾರರು. ಈಗ ಅವರು ಪಾರುಪತ್ಯ ಗಾರನ ಸಂಗಡ ಇದೇ ವಿಷಯದಲ್ಲಿ ಸಂಭಾಷಣೆ ಮಾಡುವ ಗೋಪ್ಯವು ಪ್ರಶ್ನೆಭಾವದಿಂದ ತಿಳಯುತ್ತದೆ. ಅದು ಹಾಗಿರಲಿ. ನಿನ್ನ ಮಾನಹಾನಿಯ ಮಾತುಗಳನ್ನಾಡಿದ ದುಷ್ಟರ್ಯಾರಿಂಬುದು ಗೊತ್ತಿದೆ. ಅವರಿಗೆ ಈ ದಿನವೇ ಛಿದ್ರಮಾಡಿ ಬಿಡುತ್ತೇನೆ. ಅವರ ಹಾಡು ಏನಾಗುತ್ತದೆಂದು ನೋಡು” ಎಂದು ಅವಳಗೆ ಚೆನ್ನಾಗಿ ಧೈರ್ಯ ಹೇಳಿ, ನಾಳೆ ಬರುವೆನೆಂದು ಮರಳಿ ಹೊರಡುವಾಗ ವಾಗ್ದೇವಿಯು ತಿಪ್ಪಾಶಾಸ್ತ್ರಿಯ ಕುತ್ತಿಗೆಯನ್ನು ಮೃದುವಾದ ಉಭಯ ತೋಳುಗಳಂದಲೂ ಬಿಗಿದಪ್ಬಿ– “ಏ! ನನ್ನ ಬಾಲ್ಯಾಸ್ತದ ಸ್ನೇಹಿ ತನೇ! ರಕ್ಕು ಹೇಳಿ, ನಡೆದು ಬಿಡುತ್ತೀಯಾ? ವಾಗ್ದೇವಿಯ ಮೇಲೆ ನಿನಗೆ ಅಷ್ಟು ಉಪೇಕ್ಷೆಯಾಯಿತೇ? ಶ್ರೀಹರೀ! ನನ್ನ ಪ್ರಾಣವು ಈ ನನ್ನ ಕಲ್ಮಶ ದೇಹವನ್ನು ಬಿಟ್ಟುಹೋಗುವುದಿಲ್ಲವಲ್ಲ! ನಾನು ಈ ನರ ಜನ್ಮದಲ್ಲಿ ಯಾಕೆ ಹುಟ್ಟಿದೆ?” ಎಂದು ಹಲುಬಿದಳು. ತಿಪ್ಪಾಶಾಸ್ತ್ರಿಯ ಮನಸ್ಸು ಕರಗಿತು. ಆ ಶೋಕ ನೋಡಿದರೆ ಬಂದೆ ಕಲ್ಲಾದರೂ ದ್ರವಿಸುವದು. ನರನಾದ ಶಾಸ್ತ್ರಿಯ ಹೃದಯ ದ್ರವಿಸುವುದು ಏನು ಆಶ್ಚರ್ಯ? ತಿಪ್ಪಾಶಾಸ್ತ್ರಿಯು ಕಂಬನಿ ತುಂಬಿದ ಕಣ್ಣುಗಳಂದಲೂ ಗದ್ಗದ ಸ್ವರದಿಂದಲೂ ವಾಗ್ದೇವಿಯನ್ನು ತಾನು ಸರ್ವಥಾ ಠಕ್ಕು ಮಾಡುವವನಲ್ಲವೆಂದು ಹಲವು ದೃಷ್ಟಾಂತಗಳಿಂದ ಸಮಾ ಧಾನಗೊಳಿಸಿ, ಅವಳನ್ನು ನಿಂದಿಸಿದ ದಿಂಡರನ್ನು ನಿಪಾತಮಾಡಿಬಿಡುವೆ ನೆಂದು ಭಾಷೆಯನ್ನು ಕೊಟ್ಟು ಮರುದಿವಸ ಅಗತ್ಯವಾಗಿ ಬಂದು ಮುಂದಿನ ಆಲೋಚನೆ ಹೇಳುವುದಾಗಿ ನಂಬಿಸಿ, ಮನೆಗೆ ಮರಳಿದನು.
ಇತ್ತ ವೆಂಕಟಪತಿ ಆಚಾರ್ಯನು ಶ್ರೀಪಾದಂಗಳ ಸಂಗಡ ಹೆಚ್ಚು ಸಮ ಯದವರೆಗೆ ಅವರ ಅವಕೃಪೆಗೆ ಪಾತ್ರರಾದ ದುರಾತ್ಮರ ಶಿಕ್ಷೆಯ ಕುರಿತು ಚರ್ಚೆಮಾಡಿ, ಅವರನ್ನು ಹೊಡಿಸಿ, ಅಂಗಹೀನಮಾಡುವುದಕ್ಕೆ ಯತಿಗಳು ಮಾಡಿದ ನಿರ್ಣಯವು ಬಲವಾದ ಕಾರಣಗಳಿಂದ ಅನುಚಿತವೆಂದು ಅವರನ್ನು ಒಡಂಬಡಿಸಿದನು. “ಬೇರೆ ಉಪಾಯವೇನದೆ?” ಎಂದು ಚಂಚಲನೇತ್ರರು ಅತ್ಯವಸರದಿಂದ ಕೇಳಲು, ಅವರೆಬರೂ ಮಠದ ಶಿಷ್ಯರೇ, ಅವರನ್ನು ಬಹಿ ಷ್ಕಾರದ ಮೂಲವಾಗಿ ದಂಡಿಸುವಷ್ಟು ಪ್ರಶಸ್ತವಾದ ಇನ್ನೊಂದು ವೈನವಿರ ಲಾರದೆಂದು ವೆಂಕಟಪತಿಯು ಅರುಹಿದನು. ಅವನ ಅಭಿಪ್ರಾಯದಲ್ಲಿ ಚಂಚಲನೇತ್ರರು ಏಕೀಭವಿಸಿ, ಈ ಸಂಕಲ್ಪವು ಸಿದ್ಧಿಯಾಗುವ ಉಪಕ್ರಮ ವನ್ನು ಬೇಗನೇ ವರ್ತಿನೆಂದು ಅಪ್ಪಣೆಕೊಟ್ಟರು. ಇಂದೇ ಅದನ್ನು ಕಡೆಗಾಣಿ ರುವನೆಂದು ಪ್ರಣಾಮಮಾಡಿ, ವೆಂಕಟಪತಿಯು ಹೊರಟನು. ವಾಗ್ದೇವಿಯನ್ನು ನಿಂದಿಸಲಕ್ಕೆ ಪವಿತ್ರಕರ್ತರಾವದರು ಐದುಮಂದಿ ಯೌವನಸ್ತರು ಅವರ್ಯಾರೆಂದರೆ -ತಿರಚಲ ಉಪೇಂದ್ರಾಚಾರ್ಯನ ಕುಮಾರ ವಿಘ್ನೇಶ್ವರ, ಚಿಂತೂರು ಕೇಶವಾಚಾರ್ಯನ ಮಗ ಶ್ರೀಧರ, ವರಹಾರ ರಾಮಚಂದ್ರ ಉಪಾ ಧ್ಯನ ದತ್ತ ಪುತ್ರ ನರಸಿಂಹ, ಕಾಚೂರು ತಿರ್ಮಲರಾಯನ ಪೌತ್ರ ಆದಿನಾರಾಯಣ, ಶ್ರೀಪುರ ಬಾಲಕೃಷ್ಣ ಐತಾಳನ ದೌಹಿತ್ರ ಡೊಣ್ಯ. ಈ ವ್ಯಕ್ತಿಗಳು ಒಬ್ಬರಿಗೊಬ್ಬರು ಮಿಗುವ ದುರಾಚಾರಿಗಳು; ದಿನೇ ದಿನೇ ಸಾಧು ಸಜ್ಜನರಿಗೂ ಅಬಲೆಯರಿಗೂ ನಿರ್ಭೀತಿಯಿಂದ ಉಪದ್ರಕೊಟ್ಟು ಆನಂದ ಪಡುವ ಕುಹಕರು. ಇವರ ಯಜಮಾನರು ಆಢ್ಯರಾಗಿರುವ ದೆಸೆಯಿಂದ ಅವರ ಮೇಲೆ ಬೀಳಲಿಕ್ಕೆ ಪುರವಾಸಿಗಳು ಹೆಚ್ಚು ಅಂಜುವರು. ಕ್ರಮೇಣ ಸಿಕ್ಕಿ ಬಿದ್ದರೆ ಹಿಂದೆ ಮಾಡಿದ ಉಪಟಳೆಯ ಫಲವನ್ನು ಅನುಭವಿಸುವರೆಂಬ ಕೋರಿಕೆಯಿಂದ ಅನೇಕರು ಕಾದುಕೊಂಡಿರುವರು.
ವೆಂಕಟಪತಿ ಆಚಾರ್ಯನು ಅವರಿಗೆ ಬುದ್ಧಿ ಕಲಿಸುವುದಕ್ಕೆ ನಡೆಸುವ ಯತ್ನವು ತ್ವರ್ಯವಾಗಿ ಕೈ ಗೂಡುವುದು ಸುಲಭವಾಗಿ ತೋರಲಿಲ್ಲ. ಆದರೂ ಅನುಭವಸ್ಥ ಮತ್ತು ಚಾತುರ್ಯವಂತನಾದ ಆಚಾರ್ಯನು ಧೈರ್ಯಗುಂದದೆ ತಿಪ್ಪಾಶಾಸ್ತ್ರಿಯ ಸಹಾಯವನ್ನು ಪಡಕೊಂಡು, ಕೆಲವು ಪ್ರಮುಖ ಪಟ್ಟಣವಾಸಿಗಳಿಂದ ಶ್ರೀಪಾದಂಗಳವರಿಗೆ ಆ ಪೋಕರಿ ಹುಡುಗರ ಪುಂಡಾಟಕೆಯ ಮತ್ತು ಕ್ರಿಯಾಭ್ರಷ್ಟತನದ ಕುರಿತು ದೊಡ್ಡದೊಂದು ಬಿನ್ನ ವತ್ತಳೆಯನ್ನು ಬರೆಸಿ, ಅದನ್ನು ಚಂಚಲನೇತ್ರರ ಕೈಗೆ ಸಿಕ್ಕುವಹಾಗೆ ಮಾಡಿ ದನು. ಅವರು ತಮ್ಮ ವೀರನಾದ ಪಾರುಪತ್ಯಗಾರಗೆ ಮೆಚ್ಚಿ ಚಂದಾಗಿ ಶ್ಲಾಘನೆಮಾಡಿದರು. ಆ ಮೇಲೆ ತತ್ಕಾಲ ಹೆಚ್ಚಿಗೆ ಪರ್ಯೇಷಣೆ ನಡೆಸದೆ ಆ ದುರಾತ್ಮರೈವರನ್ನು ಬಹಿಷ್ಕಾರಮಾಡಿ, ರಾಯಸ ಪತ್ರವನ್ನು ಕೊಟ್ಟರು.
ಈ ಸಂಬಂಧ ಆ ಯೌವನಸ್ಥರ ಹಿರಿಯರೂ ಬಂಧು ಬಾಂಧವರೂ ಯತಿಗಳ ಮೇಲೆ ಬಹು ವೈರಭಾವ ತಾಳಿ ಅವರ ಬಹಿಷ್ಠಾರವನ್ನು ಮನ್ನಿ ಸದೆ ದುಶ್ಶೀಲರಾದ ತಮ್ಮ ಕುಮಾರರನ್ನು ಕೂಡಿ ನಡೆದರೆ ಈ ಸನ್ಯಾಸಿ ಯಿಂದ ಆಗೋದೆಲ್ಲಾ ನೋಡಿಬಿಡಬಹುದೆಂದು ಹಟವನ್ನು ಸಾಧಿಸಲೆಸಗಿ ದರು. ಚಂಚಲನೇತ್ರರು ಅವರ ಪ್ರಾಬಲ್ಯ ಕಿಂಚಿತ್ತಾದರೂ ಗಣ್ಯಮಾಡದೆ, ಬಹಿಷ್ಠಾರ ಪತ್ರವನ್ನು ಅವಜ್ಞೆ ಮಾಡಿದ ಪ್ರತಿ ಒಬ್ಬಗೂ ಕಟ್ಟುಮಾಡಿ ಇಟ್ಟರು. ಹೀಗಾಗಿ ಮರಾಧಿಪತಿಗಳಿಗೂ ಅವರ ಶಿಷ್ಯರಲ್ಲಿ ಪ್ರಮುಖರಾದ ಅನೇಕರಿಗೂ ಮನಃಕ್ಷೇಶ ಉಂಟಾಯಿತು. ನಾನಾ ಅನರ್ಧವಾಗುವ ಸಂಭ ವವು ಒದಗಿತು… ಹಾಗಾದರೂ ಚಂಚಲನೇತ್ರರು ಕುಗ್ಗದೆ ಪಾರುಪತ್ಯ ಗಾರನ ಕೂಡೆ ಸಮಯಾನುಸಾರ ಗುಪ್ತಾಲೋಚನೆಮಾಡಿ, ಶತ್ರುಗಳ ಅಸ್ತ್ರ ಗಳಿಗೆ ಪ್ರತ್ಯಸ್ತ್ರವನ್ನು ಹೂಡುತ್ತಾ, ಫಲವನ್ನು ಸಂಪೂರ್ಣವಾಗಿ ಸಾಧಿಸುವು ದಕ್ಕೆ ಪ್ರತಿಜ್ಞೆ ಮಾಡಿಕೊಂಡರು.
ಈ ಸಾಧನೆಗೆ ವಿಘ್ನಬಾರದಹಾಗೆ ತಿಪ್ಪಾಶಾಸ್ತ್ರಿಯ ಸ್ನೇಹವನ್ನು ಬೆಳೆ ಸುವುದು ವೆಂಕಟಪತಿಗೆ ಅವಶ್ಯವಾಯಿತು. ವಾಗ್ದೇವಿಯಂತೂ ತಿಪ್ಪಾಶಾಸ್ತ್ರಿ, ಯ ನೆರಳಿಗೂ ವಂದಿಸಿ, ಮೋಹಪಡುವವಳಾಗಿರುವ ದೆಸೆಯಿಂದ ಅವನ ಅಭೀಪ್ಸಿತ ನಿರಾತಂಕವಾಗಿ ಪೂರ್ಣವಾಗುವ ಸಮಯವು ಬಂತು. ಅವನು ದೊಡ್ಡ ಜೋಯಿಸನಾಗಿ ಬಹುಜನ ಹಂಗಿಕರ ಸಹಾಯ ಉಳ್ಳವರಾದುದ ರಿಂದ ಮರದ ಶಿಷ್ಯಮಂಡಳಿಯಲ್ಲಿ ಇತ್ತಂಡಗಳಾಗುವ ಗಂಡಾಂತರ ಸಂಭ ನಿಸಿದ ವೇಳೆಯಲ್ಲಿ ಅವನ ಸ್ನೇಹವು ಮಠಕ್ಕೆ ಪ್ರಯೋಜನಕರವಾಗಿ ತೋರಿತು. ಚಂಚಲನೇತ್ರರಿಗೆ ಅವನ ಮೇಲೆ ಹೆಚ್ಚು ಪ್ರೀತಿ ಉಂಟಾಯಿತು. ಅವನಿಗೆ ಯಾವರೀತಿಯಲ್ಲಿ ಮಠದಲ್ಲಿ ತನ್ನ ಹಂಗಿನಲ್ಲೇ ಇಡಲಿಕ್ಕೆ ಅನು ಕೂಲಮಾಡುವುದೆದೆಂಬ ಯೋಚನೆ ಹುಟ್ಟಿತು. ವೇದವ್ಯಾಸ ಉಪಾಧ್ಯನ ಪುರಾಣಿಕೆಯನ್ನು ಅವನಿಗೆ ಕೂಡಿಸಿದರೆ ಅವನು ತನ್ನನಗಲಿರಲಿಕ್ಕಿಲ್ಲವೆಂಬ ನಿರೀಕ್ಷಣೆಯು ವಾಗ್ದೇವಿಯಲ್ಲಿದ್ದರೂ ಯೌವನಸ್ಥನಾದ ಅವನ ವಿಷಯ ಯತಿ ಯಕೂಡೆ ಪ್ರಸ್ತಾಪಿಸಿದರೆ ಯತಿಯ ಮನಸ್ಸಿನಲ್ಲಿ ತನ್ನ ಮೇಲೆ ಸಂಶಯವೂ ಅವನ ಮೇಲೆ ಮತ್ಸರವೂ ಜನಿಸಿ ಇಬ್ಬರಿಗೂ ಕಾರ್ಯಹಾನಿಯಾಗಿ ನಷ್ಟ ಕಷ್ಟಭ್ರಷ್ಟವಾಗುವುದು. ತತ್ರಾಪಿ ವೆಂಕಪತಿ ಆಚಾರ್ಯನ ಪರಿಮುಖ ಶ್ರೀಪಾದಂಗಳವರ ಕೂಡೆ ಪ್ರಸ್ತಾಸಿವ ಯತ್ನ ನಡಿಸಿದರೂ ಆಚಾರ್ಯಗೂ ಅಂಥಾ ಅನುಮಾನವೇ ಹುಟ್ಟಿ, ಮುಂದೆ ತಮ್ಮಿಬ್ಬರಿಗೂ ಕಷ್ಟಬರಲಿಕ್ಕೆ ಸಾಕೆಂಬ ಹೆದರಿಕೆಯಿಂದ ವಾಗ್ದೇವಿಯು ಮೌನವಾಗಿರಬೇಕಾಯಿತು.
ಪುರಾಣ ಓದುವ ಉದ್ಯೋಗದ ಆಸೆಯು ತಿಪ್ಪಾಶಾಸ್ತ್ರಿಯಲ್ಲಿ ತುಂಬಾ ಇತ್ತು. ಬಾಯಿಬಿಟ್ಟು ಒಮ್ಮೆ ವಾಗ್ದೇವಿಗೆ ಅವನ್ನು ಅಂತರಂಗದಲ್ಲಿ ತಿಳಿಸಿದಾಗ ಅವಳು ತನ್ನ ಮನಸ್ಸಿನ ಗುಟ್ಟು ಅವನಿಗೆ ಕೂಡದೆ, ಸ್ಫಾಮಿಗಳ ಕೂಡೆ ಸಮಯ ನೋಡಿ ಅರಿಕೆ ಮಾಡಿಕೊಳ್ಳುವೆನೆಂದು ಸುಳ್ಳು ವಾಗ್ದಾನವನ್ನು ಕೊಟ್ಟು, ಮರ್ಯಾದೆಯನ್ನುಳಿಸಿಕೊಂಡರೂ ಮನಸ್ಸಿನಲ್ಲಿ ಬಹಳ ವ್ಯಸನ ತಾಳಿಕೊಂಡಿರುವಂತಾಯಿತು ಈ ಮರ್ಮುವು ವೆಂಕಟಪತಿ ಅಚಾರ್ಯನಿಗೆ ಕೊಂಚವಾದರೂ ತಿಳದಿರಲಲ್ಲ. ತಿಪ್ಪಾಶಾಸ್ತ್ರಿಯ ಸ್ನೇಹವು ಮಠದ ಪ್ರಕೃತದ ಇಕ್ಕಟ್ಟು ಪರಿಹರಿಸುವುದಕ್ಕೆ ಉಪಯುಕ್ತವಾದದ್ದೆಂಬ ಒಂದೇ ಕಾರಣದಿಂದ ವೆಂಕಟಪತಿ ಆಚಾರ್ಯನು ಧನಿಯ ಹತ್ತಿರ ಕ್ರಮೇಣ ಈ ವಿಷಯದಲ್ಲಿ ಮಾತಾಡಿದಾಗ ತಿಪ್ಪನನ್ನು ಪ್ರರಾಣಿಕನಾಗಿ ನೇನಿಸಲಿಕ್ಕೆ ಯತಿಗಳು ತುಂಬಾ ಸಂತೋಷಪಟ್ಟರು ಅವನು ಈ ಉದ್ಯೋಗದ ಮೇಲೆ ಮನಸ್ಸಿರುವು ವಾಗಿ ತೋರಿಸಿಕೊಳ್ಳದಿದ್ದರೂ ವೆಂಕಟಪತಿ ಆಚಾರ್ಯನು ತಾನಾಗಿ ಒಂದು ದಿವಸ ಪ್ರಸ್ತಾಪವತ್ವೇನ ಶ್ರೀಪಾದಂಗಳವರಿಗೆ ಅವನ ಮೇಲಿರುವ ಅನುಗ್ರಹದ ಸಮವಿಶೇಷವನ್ನು ತಿಳಿಸಿದಾಗ ತಿಪ್ಬಾಶಾಸ್ತ್ರಿಗೆ ಅತ್ಯಾನಂದವಾಯಿತು. ಪುರಾಣಿಕನಾಗಿ ಯತಿಯ ಸೇವೆಯನ್ನು ಮಾಡುವುದಕ್ಕೆ ತನಗೆ ಹೆಚ್ಚು ಅತುರಮಿರವುದಾಗಿ ಅವನು ಒಪ್ಪಿಕೊಂಡನು. ವೆಂಕಟಪತಿ ಆಚಾರ್ಯನು ಸಾವಕಾಶಮಾಡದೆ ಮುದ್ದಣ್ಣಾಚಾರ್ಯನನ್ನು ಮಠದಲ್ಲಿ ಬೇರೊಂದು ಕೆಲಸಕ್ಕೆ ನೇಮಿಸಿ, ಪುರಾಣಿಕೆಯನ್ನು ತಿಪ್ಪಾಶಾಸ್ತಿಗೆ ಕೊಡಿಸಿ, ಸ್ವಾಮಿಗಳ ದೊಡ್ಡ ಮಿತ್ರನಾಗಿಮಾಡಿದನು.
ಈ ಶಾಸ್ತ್ರಿಯು ಸಂಸ್ಕೃತದಲ್ಲಿ ಚೆನ್ನಾಗಿ ಪರಿಶ್ರಮವಿದ್ದು, ಹೆಚ್ಚು ಅನು ಭವಸ್ಥನಾದುದರಿಂದ ಪುರಾಣಹೇಳುವ ಕೆಲಸದಲ್ಲಿ ಹೆಸರುಗೊಂಡನು ಸರ್ವರಿಗೂ ಅವನ ಮೇಲೆ ಅನುದಿನ ಪ್ರೀತಿ ಹೆಚ್ಚುತ್ತಾ ಬಂತು. ಈ ನೇಮಕ ದಿಂದ ವಾಗ್ದೇವಿಗಾದ ಹರುಷಕ್ಕೆ ಮಿತವೇ ಇಲ್ಲ. ತಿಪ್ಬಾಶಾಸ್ತ್ರಿಗೆ ನಿರಂತರ ತನ್ನ ಸಾಪೀಪ್ಯವೇ ದೊರಕತು. ಅವನ ಆಸೆಯನ್ನು ಪೂರೈಸುವುದಕ್ಕೆ ಸ್ವಲ್ಪ ವಾದರೂ ಸಹಾಯ ಮಾಡದೆ ಇದ್ದರೂ ತನ್ನ ದಯದಿಂದಲೇ ಉದ್ಯೋಗ ಸಂಪಾದಿಸಿದೆನೆಂದು ಅವನು ತಿಳಿದುಕೊಂಡಿರುವನು. ಮಂದಿನ ಕಾರ್ಯ ದೇವರು ಇಟ್ಟ ಹಾಗೆ ಆಗಲೆಂದು ವಾಗ್ದೇವಿಯು ಉತ್ಕರ್ಷಯುಕ್ತಳಾದಳು.
ತಿಪ್ಪಾಶಾಸ್ತ್ರಿಗೆ ಪುರಾಣಹೇಳುವುದಕ್ಕೆ ನೇಮಿಸಿದ ಸುದ್ದಿಯು ಸಿಕ್ಕಿದ ಕೂಡಲೇ ವೇದವ್ಭಾಸ ಉಪಾಧ್ಯನು ಮುಖಭಂಗಿತನಾದನು. ಆಹಾ, ತನ್ನ ಉದ್ಯೋಗವು ತನಗೆ ಪುನಃ ಬೇಗನೆ ದೊರೆಯ ಬಹುದೆಂಬ ಆಸೆಯು ಭಂಗ ವಾಯಿತು. ವಿಷ್ಣುವಿನ ಆರಾಧನೆ ಬಹು ಪ್ರಯಾಸವಟ್ಟು ಮಾಡಿದರೂ ತನ್ನ ಸೇವೆಯನ್ನು ಶ್ರೀಹರಿಯು ಅಂಗೀಕರಿಸಿಕೊಳ್ಳ ಲಿಲ್ಲವಷ್ಪೇ! ಇದು ಪೂರ್ವಾ ರ್ಜಿತವೇ! ಇನ್ನು ಏನುಮಾಡಲೆಂದು ದೀರ್ಘಸ್ವರದಿಂದ ರೋದನಮಾಡುವಾಗ ಪತಿಪ್ರತಾ ಶಿರೋಮಣಿಯಾದ ಅವನ ಪತ್ನಿಯು ಗಂಡನನ್ನು ಸಮಾ ಧಾನಪಡಿಸುವುದಕ್ಕೆ ತೊಡಗಿದಳು. “ವಿಷ್ಣುನಿನ ಆರಾಧನೆ ಮಾಡಿದ್ದಕ್ಕಾಗಿ ಏನೂ ಪಶ್ಚಾತ್ತಾಪ ಪಡಬೇಡಿ. ಅದೆಂದೂ ನಿರರ್ಥಕವಾಗದು. ಹರಿಯು ತನ್ನ ಭಕ್ತರನ್ನು ಕಷ್ಟದಲ್ಲಿ ಹಾಕಿ ಅವರ ಭಕ್ತಿಭಾವವನ್ನು ಪರೀಕ್ಷಿಸಿನೋಡು ತ್ತಾನಲ್ಲದೆ, ಅವರನ್ನು ಬಿಟ್ಟೇಹಾಕುವುದು ಅವನ ಬಿರುದಿಗೆ ವಿರೋಧ, ಚಂಚಲನೇತ್ರರ ಮಠದಲ್ಲಿಯೇ ಉದ್ದೋಗವಾಗಬೇಕೆಂದು ನಮ್ಮ ಅಭಿಮತ ವಲ್ಲ. ಹಾಗಾದರೂ ನಮ್ಮ ಜೀವನೋಪಾಯ ನಡೆಯಬೇಕೆಂಬುದು ನಮ್ಮ ಪ್ರಧಾನ ಉದ್ದೇಶವಷ್ಟೇ ಇನ್ನೆಲ್ಲಿಯಾದರೂ ಅನ್ನಸ್ಥಿತಿ ನಮಗೆ ದೊರಕದೆಂಬ ಅನುಮಾನವ್ಯಾಕೆ? ದೇವರ ಮೇಲೆ ಕೊಂಚವಾದರೂ ಅವಿ ಶ್ವಾಸವಿಡದೆ ಅವನನ್ನೇ ಏಕಭಾವದಿಂದ ಧ್ಯಾನಿಸಿದರೆ ನಮ್ಮ ಅಭೀಷ್ಪವನ್ನು ಅವನು ಕ್ಷಿಪ್ರ ಸಲ್ಲಿಸುವನು” ಎಂದು ಅವಳು ತನ್ನ ಗಂಡಸಿಗೆ ಜ್ಞಾನಹೇಳ ದಳು. ಅವಳ ಅಭಿಪ್ರಾಯವನ್ನು ಅವನು ಒಪ್ಪಿ, ಬೇರೆ ಯಾವುದಾದರೂ ಊರಿಗೆ ಹೋಗುವುದು ಒಳ್ಳೆಯದೆಂದು ನಿರ್ಣಯಮಾಡಿದನು.
ಅಷ್ಟರಲ್ಲಿ ಈ ಬಡಬ್ರಾಹ್ಮಣನ ಸಿಟ್ಟುವೃದ್ಧಿ ಯಾಗುವುದಕ್ಕೆ ಇನ್ನೊಂದು ಹೇತು ಉಂಟಾಯಿತು. ವಾಗ್ದೇವಿಯನ್ನು ನಿಂದೆಮಾಡಿದ ಪಂಚಯೌವನಸ್ಥ ರಲ್ಲಿ ವಿಫ್ನೇಶ್ವರನೆಂಬವನು ವೇದವ್ಯಾಸ ಉಪಾಧ್ಯನ ಸೋದರ ಅಳಿಯನು. ಇವನು ಅಪರೂಪವಾಗಿ ಸೋದರಮಾವನ ಮನೆಗೆ ಹೋಗಿಬರುವ ಪದ್ಧತಿ ಯಿರುವುದು. ಬಹಿಷ್ಠಾರನಲ್ಲಿರುವವನಿಗೆ ಸಂಪರ್ಕನಾದನೆಂಬ ನೆವವನ್ನು ಹುಡುಕಿ, ಪ್ರಥಮತಃ ವೇದವ್ಯಾಸ ಉಪಾಧ್ಯಗೆ ಚಂಚಲನೇತ್ರರು ಬಹಿಷ್ವಾರ ಪತ್ರ ಕೊಟ್ಟರು. ಉರಿಯುವ ಬೆಂಕಿಗೆ ತುಪ್ಪ ಹೊಯಿದಂತಾಯಿತು. ಮೊದಲೇ ಉದ್ಯೋಗವು ತಪ್ಪಿದ್ದಕ್ಕಾಗಿ ಹೆಚ್ಚು ವ್ಯಥೆಯಲ್ಲಿರುವ ವೇದವ್ಯಾಸ ಉಪಾಧ್ಯನು ಬಹಿಷ್ಕಾರಪತ್ರಿಕೆಯು ತಲ್ಪಿದಾಗ ಮಹಾಕೋಪ ತಾಳಿ, ತನ್ನ ನ್ನು ವ್ಯರ್ಧವಾಗಿ ಕಷ್ಟಬಡಿಸುವ ದಿಂಡಸನ್ಯಾಸಿಗೆ ಬುದ್ಧಿ ಕಲಿಸುವಗೋಸ್ಟರ ಒಂದು ಸಣ್ಣ ವೈನಮಾಡಲಿಕ್ಕೆ ಉದ್ಯುಕ್ತನಾದನು. ಆವನ ಪತ್ನಿಯು ಶಾಂತ ಸ್ವಭಾವವುಳ್ಳವಳಾದರೂ “ಇಂಧಾ ಘೋರವಾದ ಅನ್ಯಾಯ ನಡೆದ ಮೇಲೆ ಅದನ್ನು ಸಹಿಸಿಕೊಂಡಿರಕೂಡದು. ಮುಯ್ಯಿಗೆ ಮುಯ್ಯಿ ತೀರಿಸಲೇಬೇಕೆಂಬ ಹಾಗೆ ಗಂಡನಿಗೆ ಆಲೋಚನೆಕೊಟ್ಟಳು. ಹೆಂಡತಿಯ ಅನುಮತಿ ಸಿಕ್ಕಿದ ಮೇಲೆ ಯಾರ ಲಕ್ಷ್ಯ್ಯವೂ ಮಾಡದೆ, ವೇದವ್ಯಾಸ ಉಪಾಧ್ಯನು ತನ್ನ ಆಪ್ತರಾದ ಕೆಲವರ ಹತ್ರ ಮುಂದಿ ಮಾಡಬೇಕಾದ ಉಪಾಯವನ್ನು ಕುರಿತು ಆಲೋಚನೆಮಾಡಿ, ಅವರ ಮನೋಗತವನ್ನು ತಿಳಿದು ಸ್ಥಿರಮನಸ್ಸಿನಿಂದ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳುವುದಕ್ಕೆ ಕೊಂಚ ಸಮಯ ಊರು ಬಿಟ್ಟು ಹೋಗುವ ಅಗತ್ಯವಿರುವುದರಿಂದ ಪಯಣಕ್ಕೆ ಬೇಕಾದ ಸನ್ನಾಹಗಳನ್ನು ಮಾಡುವುದಕ್ಕೆ ಉದ್ಯುಕ್ತನಾದನು.
*****
ಮುಂದುವರೆಯುವುದು