ನಾನೆ ದೇವರೋ ನೀನೆ ದೇವರೋ

ಅವನು ದೇವರೊ ಅವರು ದೇವರೊ
ಅದು ದೇವರೊ ಇದು ದೇವರೊ ಎಲ್ಲ ದೇವರೋ

ಅನ್ನ ದೇವರೊ ಆಕಾಶ ದೇವರೊ
ಭೂಮಿ ದೇವರೋ ಗಾಳಿ ದೇವರೋ ಕುಡಿವ ನೀರು ದೇವರೋ

ಮರವು ದೇವರೊ ಗಿರಿಯು ದೇವರೂ
ಹೂವು ದೇವರೊ ಹಣ್ಣು ದೇವರೊ ಇರುವ ಮಣ್ಣು ದೇವರೋ

ಪ್ರಾಣ ದೇವರೊ ಪದಾರ್ಥ ದೇವರೊ
ಸೂರ್ಯ ದೇವರೊ ಚಂದ್ರ ದೇವರೊ ಸುತ್ತುವರಿದ ತಾರಾಗಣ ದೇವರೋ

ಹಕ್ಕಿ ದೇವರೊ ಹುಲ್ಲು ದೇವರೊ
ಕಲ್ಲು ದೇವರೊ ಮುಳ್ಳು ದೇವರೊ ಮರಳ ಕಣಕಣವು ದೇವರೋ

ಹಾವ ದೇವರೊ ಭಾವ ದೇವರೊ
ನಟನೆ ದೇವರೊ ನಾಟ್ಯ ದೇವರೊ ನಟರಾಜ ದೇವರೋ

ತಾಳ ದೇವರೂ ಲಯ ದೇವರೊ
ನಾದ ದೇವರೊ ಗೀತ ದೇವರೊ ಸಂಗೀತ ದೇವರೋ

ಕ್ಷಣ ದೇವರೊ ದಿನ ದೇವರೊ
ನಿಮಿಷ ದೇವರೊ ಅನಿಮಿಷ ದೇವರೊ ಮಹಾಯುಗ ದೇವರೋ

ದ್ಯಾವ ದೇವರೊ ಪೃಥ್ವಿ ದೇವರೊ
ಕವಿ ದೇವರೊ ಕಾವ್ಯ ದೇವರೊ ಜನಪದ ದೇವರೋ

ಗುರು ದೇವರೊ ಜ್ಞಾನ ದೇವರೊ
ತಂದೆ ದೇವರೊ ತಾಯಿ ದೇವರೊ ಪ್ರತಿ ಸ್ತ್ರೀಯು ದೇವರೋ
*****