ಪರಿಸರ ರಕ್ಷಿಸಿ

ಪರಿಸರ ರಕ್ಷಿಸಿ

ನಮ್ಮ ಸುತ್ತಮುತ್ತಲಿರುವ ನಿಸರ್ಗ (ಗಾಳಿ, ನೀರು ಮುಂತಾದವುಗಳು)ವನ್ನು ನಾವು ಪರಿಸರವೆಂದು ಹೇಳುತ್ತೇವೆ. ಗಾಳಿ ನಮ್ಮ ಜೀವಾಳ. ಅದಿರದಿದ್ದರೆ ನಾವು ಬದುಕಲಾರೆವು. ಮನುಷ್ಯನು ಬದುಕಿರಬೇಕಾದರೆ ಗಾಳಿಯಂತೆ ನೀರು ಕೂಡ ಅತ್ಯವಶ್ಯ. ಇಂದು ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲಮಾಲಿನ್ಯ ಮತ್ತು ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದನ್ನೇ ನಾನು ಈ ಲೇಖನದ ಮೂಲಕ ಪ್ರಸ್ತುತ ಪಡಿಸಬೇಕೆಂದಿರುವೆ. ಇವುಗಳೆಲ್ಲದರ ಬಗ್ಗೆ ಸಂಕ್ಷಿಪ್ತವಾಗಿ ಈಗ ಚರ್ಚಿಸೋಣ.

ವಾಯು ಮಾಲಿನ್ಯ
ವಾಯು ಮನುಷ್ಯನ ಜೀವಾಳ. ನೈಟ್ರೋಜನ್ – ೭೮%, ಆಕ್ಸಿಜನ್ ೨೧%, ಆರ್ಗಾನ್ ೦.೯೦%, ಕಾರ್ಬನ್ ಡೈ‌ಆಕ್ಸಿಡ್ ೦.೦೩% ಮತ್ತು ಇತರ ವಾಯು ೦.೦೭% ಗಳಿಂದ ಕೂಡಿ ವಾಯು ಅಗಿದೆ. ಇಂದು ಮನೆಗಳ ಒಲೆಗಳಿಂದ ಹೊರಬೀಳುವ ಹೊಗೆ, ವಾಹನಗಳು ಹಾಗೂ ವಿಧ ವಿಧವಾದ ಖಾರ್ಖಾನೆಗಳಿಂದ ನಮ್ಮ ವಾಯು ಮಂಡಲ ದಿನೇ ದಿನೇ ಕುಲಷಿತಗೊಳ್ಳುತ್ತಿದೆ. ಈ ಪರಿ ನಿರಂತರವಾಗಿ ಸಾಗುತ್ತಿದೆ. ಮನುಷ್ಯನ ಆಸೆಗೆ ಮಿತಿಯಿಲ್ಲ. ದಿನೇ, ದಿನೇ ವಾಹನಗಳು, ರೈಲುಗಳು, ವಿಮಾನಗಳು… ಒಂದೇ ಎರಡೇ ಇವುಗಳು ಕಲುತಗೊಳಿಸುವುದು ಸ್ವಲ್ಪೇ? ಹೇಳತೀರದು. ಬೊಂಬಾಯಿ ಪಟ್ಟಣದ ಒಂದು ಉದಾಹರಣೆ, ಅಲ್ಲಿ ಪ್ರತಿದಿನ ಕೇವಲ ವಾಹನಗಳಿಂದಲೇ ೧,೨೦೦ ಮೆಟ್ರಿಕ್ ಟನ್‌ಗಳಷ್ಟು ಹೊಗೆ ಬಿಡುಗಡೆಯಾಗುತ್ತಿದೆ. ಇನ್ನು ಜಗತ್ತಿಗೇ ಹೋಲಿಸಿ ವಿಚಾರ ಮಾಡಿ ನೋಡಿದರೆ ಅಬ್ಬಾ! ಉತ್ತರವೇ ಸಿಗದು.

ವಾಯು ಮಾಲಿನ್ಯದಿಂದ ಮನುಷ್ಯರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬಹಳ ಅಪಾಯ, ಸಸ್ಯಗಳಿಗೂ ಈ ಅಪಾಯ ತಪ್ಪಿದ್ದಲ್ಲ!

ಛಿದ್ರ ಛಿದ್ರವಾಗುತ್ತಿರುವ ಓಜೋನ್ ಕವಚ:

“ಓಜೋನ್” (Ozone) ಎಂಬುದು ವಾಯುವಿನ ಒಂದು ರೂಪ. ಇದು ವಾತಾವರಣದ ಹೊರಗಿನ ಅಂದರೆ ನೆಲದಿಂದ ೧೫ ಕಿ.ಮೀ, ಮೇಲೆ ೫೦ ಕಿ.ಮೀ. ವರೆಗಿನ ‘ಊರ್ದ್ವಮಂಡಲ’ ಎಂಬ ವಿರಳ ಹವಾಮಂಡಲದಲ್ಲಿ ತೆಳ್ಳಗೆ ಹಬ್ಬಿದೆ. ಇದು ಕೇವಲ ಕೆಲವು ಮಿ.ಮೀ.ಗಳಷ್ಟು ದಪ್ಪಗಿರುತ್ತದೆ. ಬೆಳಕು ಸೂರ್ಯನಿಂದ ಉತ್ಪತ್ತಿಯಾಗಿ ಭೂಮಿಗೆ ಬರುವಾಗ ಅದರೊಂದಿಗೆ ಅನೇಕ ಜೀವಘಾತುಕ ಅಲ್ಟ್ರಾವಯಲೆಟ್ (Ultraviolet) ಕಿರಣಗಳೂ ಉತ್ಪತ್ತಿಯಾಗುತ್ತವೆ. ಆದರೆ ಈ ಕಿರಣಗಳನ್ನು ಓಜೋನ್ ಪದರು ಭೂಮಿಗೆ ತಲುಪಲು ಬಿಡದೇ ಚದುರಿ ಹೋಗುವಂತೆ ಮಾಡುತ್ತದಲ್ಲದೇ ಬಿಸಿಲಿನ ಸುರಕ್ಷಿತ ಭಾಗ ಮಾತ್ರ ತಲುಪುವಂತೆ ಮಾಡುತ್ತದೆ. ಒಂದು ವೇಳೆ ಆ ಕಿರಣಗಳು ಭೂಮಿಗೆ ಬಂದರೆ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲಗಳೆರಡಕ್ಕೂ ವಿನಾಶಕಾರಿ. ಮಾನವರಲ್ಲಿ ಅವು ಚರ್ಮರೋಗ, ಅಸ್ತಮಾ, ಗಂಟಲು ಬೇನೆ ಮುಂತಾದವುಗಳನ್ನು ಬರಲು ಕಾರಣವಾಗುತ್ತದೆ. ಹಾಗಾಗಿ ಓಜೋನ್ ಪದರು ಭೂಮಿಯಲ್ಲಿಯ ಎಲ್ಲಾ ಜೀವಿಗಳಿಗೆ ರಕ್ಷಾಕವಚವಿದ್ದಂತೆ. ಇದನ್ನು ನಾವು ‘ನೈಸರ್ಗಿಕವಾದ ಹಸಿರುಮನೆ’ (Natural Green House) ಎಂದು ಕರೆಯ ಬಹುದು.

ಇತ್ತೀಚಿನ ದಿನಗಳಲ್ಲಿ ಓಜೋನ್ ಬಗ್ಗೆ ಕಳಕಳಿ ಹೆಚ್ಚಿದೆ. ಕಾರಣ ವಾಹನಗಳಿಂದ, ವಿಮಾನ, ಹಡಗು ಮತ್ತು ಕಾರ್ಖಾನೆಗಳು ವಿಸರ್ಜಿಸುವ ಹೊಗೆಯಲ್ಲಿ ನೈಟ್ರಸ್ ಆಕ್ಸೈಡ್ ಮತ್ತು ಇಂಗಾಲದ ಡೈ‌ಆಕ್ಸೈಡ್ ಬಿಡುಗಡೆಯಾಗುತ್ತದೆ. ಅಲ್ಲದೆ ನಾವು ಬಳಸುವ ಕಂಪ್ಯೂಟರ್, ಏರ್‌ಕಂಡೀಶನರ್, ರಿಫ್ರಿಜರೇಟರ್‌ ಮತ್ತು ಸೇಂಟ್‌ ಬಾಟಲಿಗಳಿಂದ ಸಿ ಎಫ್.ಸಿ. (Chlorofloro Carbon) ಬಿಡುಗಡೆ ಯಾಗುತ್ತದೆ. ಇವೆಲ್ಲ ಓಜೋನ್ ಪದರಕ್ಕೆ ಬಹಳೆ ಅಪಾಯಕಾರಿ. ಹೀಗಾಗಿ ಕೆಲವು ಕಡೆ ವಿಶೇಷವಾಗಿ ಧೃವ ಪ್ರದೇಶದ ಮೇಲ್ಗಡೆ ಓಜೋನ್ ವಲಯ ತೆಳ್ಳಗಾಗಿ ಛಿದ್ರ ಛಿದ್ರವಾಗುತ್ತಿದೆ.

ಇವಲ್ಲದೇ ಕೋಲ್, ಪೆಟ್ರೋಲಿಯಂಗಳನ್ನುರಿಸುವುದರಿಂದ ಕಾರ್ಬನ್ ಡೈ‌ಆಕ್ಸಿಡ್ ಮತ್ತು ಸಲ್ಫರ್ ಡೈ‌ಆಕ್ಸೈಡ್ ಬಿಡುಗಡೆಯಾಗುತ್ತಿದೆ. ಇವು ಭೂಮಿಯ ಉಷ್ಣತೆಯನ್ನು ವರ್ಷಕ್ಕೆ ೦.೦೫% ನಷ್ಟು ಹೆಚ್ಚಿಸುತ್ತಿವೆ. ಹೀಗಾದಲ್ಲಿ ಸಮುದ್ರದ ನೀರು ಬಿಸಿಯಾಗಿ ಹೆಚ್ಚಾಗುವುದಲ್ಲದೆ ಪೋಲಾರ್ ಐಸ್ ಕ್ಯಾಪ್ ಕರಗುತ್ತದೆ. ಆಗ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ (ಫ್ಲಡ್ಸ್ ಮತ್ತು ಫೆಮೈನ್).

ಅಲ್ಲದೇ ಕಾರ್ಖಾನೆಗಳು ವಿಸರ್ಜಿಸುವ ಈ ವಿಷಯುಕ್ತವಾದ ಹೊಗೆಯಿಂದ ಅಮ್ಲಮಳೆ (Acid Rain) ಆಗುತ್ತಿದೆ. ಈಗಾಗಲೇ ಆಮ್ಲ ಮಳೆ ಯುರೋಪ್, ಬ್ರಿಟನ್, ಅಮೇರಿಕಾಗಳಲ್ಲಿ ಕಾಣಿಸಿಕೊಂಡು ಅಪಾರ ಪರಿಣಾಮ ಬೀರಿದೆ. ಆಮ್ಲಮಳೆ ಸುರಿದಾಗ ಹೊಳೆ, ಕೆರೆ, ಸಮುದ್ರಗಳಲ್ಲಿಯ ಚಲಚರಗಳ ನಾಶಕ್ಕೆ ಕಾರಣವಾಗುತ್ತದೆ.

ಶಬ್ದ ಮಾಲಿನ್ಯ :
ಇತ್ತೀಚೆಗೆ ಶಬ್ದ ಮಾಲಿನ್ಯ ಮಿತಿಮೀರಿದೆ. ಯಾವುದಾದರೂ ಚಿಕ್ಕ ಸಮಾರಂಭವಿದ್ದರೂ ಸಾಕು ಸಮಾಜದಲ್ಲಿ ತಮ್ಮ ಘನತೆ ತೋರಿಸಿಕೊಳ್ಳಲು ಧ್ವನಿಪೆಟ್ಟಿಗೆಗಳನ್ನು ಇಡೀ ಊರಿಗೇ ಕೇಳಿಸುವಂತೆ ಹಚ್ಚುತ್ತಾರೆ. ಆದರೆ ಇದರಿಂದ ಇತರರ ಮೇಲೆ ಬೀರುವ ಪರಿಣಾಮದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಅಲ್ಲದೇ ವಾಹನಗಳಿಂದ, ರೈಲುವಿಮಾನಗಳಿಂದ ಕಾರ್ಖಾನೆಗಳಿಂದ ನಿರಂತರವಾಗಿ ಜೋರಾದ ಶಬ್ದ ಬರುತ್ತಿರುತ್ತದೆ.

ಪರಿಣಾಮ :
ಶಬ್ದ ಮಾಲಿನ್ಯದಿಂದ ಮನುಷ್ಯನ ಹೃದಯ ಮತ್ತು ಮಿದುಳುಗಳಲ್ಲಿ ವಿಪರೀತ ಏರಿಳಿತಗಳುಂಟಾಗುತ್ತದೆ. ಮನುಷ್ಯ ಕಿವುಡೂ ಕೂಡ ಆಗಬಹುದು. ಇದರಿಂದ ಪ್ರಾಣಿಗಳೂ ಹೊರತಲ್ಲ. ಒಂದು ಅಧ್ಯಯನದ ಪ್ರಕಾರ ವಾಹನಗಳಿಂದುಟಾದ ಶಬ್ದದಿಂದ ತಪ್ಪಿಸಿಕೊಳ್ಳಲಾರದೆ ಆಸ್ಟ್ರೇಲಿಯಾದ ಇಲಿಗಳು ಹಾವುಗಳಿಗೆ ಬಲಿಯಾಗುತ್ತಿವೆ. ಮೇಲೆ ಹಾರಾಡುವ ವಿಮಾನಗಳ ಸಪ್ಪಳದಿಂದ ಉದ್ರಿಕ್ತಗೊಳ್ಳುವ ಎತ್ತುಗಳು ತಮ್ಮ-ತಮ್ಮಲ್ಲೇ ಬಡಿದಾಡುತ್ತಿವೆ. ಈ ಬದಲಾವಣೆಗಳ ಪರಿಣಾವಾಗಿ ಪ್ರಾಣಿಗಳ ಆಹಾರ ಪದ್ಧತಿ, ಸಂಭೋಗ ಕಾಲ ಮತ್ತು ವರ್ತನೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ.

ಜಲಮಾಲಿನ್ಯ :
ಇದು ಹಳ್ಳಿಗಳಲ್ಲಂತೂ ಹೇಳತೀರದು. ಕೆರೆ, ಹೊಳೆಗಳಲ್ಲಿ ಬಟ್ಟೆ ಒಗೆಯುತ್ತಾರೆ. ಸ್ನಾನ ಮಾಡುತ್ತಾರೆ. ದನಕರುಗಳನ್ನು ಬಿಡುತ್ತಾರಲ್ಲದೇ ಹೊಲಸು ವಸ್ತುಗಳನ್ನು ತ್ಯಜಿಸುತ್ತಾರೆ. ಮತ್ತೆ ಅದೇ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ!

ಇನ್ನು ಪಟ್ಟಣಗಳಲ್ಲಿ ನೂರಕ್ಕೆ ೯೦% ರಷ್ಟು ಶಾರ್ಖಾನೆಗಳು ನದಿಯ ಅಥವಾ ಸಮುದ್ರದ ದಡದಲ್ಲಿಯೇ ಇವೆ. ಇವುಗಳಿಂದ ಕಲಷಿತಗೊಂಡ ರಾಸಾಯನಿಕಗಳು ನೀರನ್ನು ಸೇರುತ್ತವೆ. ಒಂದು ಉದಾಹರಣೆ ನೋಡಿ ಬೆಂಗಳೂರಿನಲ್ಲಿರುವ “ಸಿಪ್ಲಾ ಕೈಗಾರಿಕೆ”ಯೊಂದೇ ಪ್ರತಿದಿನ ೫೦,೦೦೦ ಲೀ. ನಷ್ಟು ಕಲ್ಮಶ ನೀರನ್ನು ಬಿಡುಗಡೆ ಮಾಡುತ್ತದೆ! ಇದೊಂದರ ಕಥೆಯೇ ಇದಾದರೆ ಜಗತ್ತಿನಲ್ಲಿ ಎಷ್ಟು ಕೈಗಾರಿಕಾ ಕಾರ್ಖಾನೆಗಳಿದ್ದಿರಬಹುದು? ಅವುಗಳಿಂದ ಕಲುಶಿತವಾದ ದ್ರವ ಎಷ್ಟು ಪ್ರಮಾಣದಲ್ಲಿ ಹೊರಬೀಳುತ್ತಿರಬಹುದು? ಊಹಿಸಿ ನೋಡುವಾ!?

ಪರಿಣಾಮ :
ಇಂತಹ ನೀರನ್ನು ಸೇವಿಸುವುದರಿಂದ ಕಾಲರಾ, ಟೈಫಾಯಿಡ್, ಟ್ರಖೋಮಾಗಳಂತಹ ರೋಗಗಳು ಬರುತ್ತವೆ. ಜಲಮಾಲಿನ್ಯದಿಂದ ಪ್ರತಿವರ್ಷ ೩೦೦ ಮಿಲಿಯನ್ ಜನ ಅಸ್ವಸ್ತರಾಗುತ್ತಾರೆ! ಅಲ್ಲದೇ ಪ್ರತೀವರ್ಷ ೧೦ ಮಿಲಿಯನ್ ಜನ ಸಾಯುತ್ತಾರೆ!!! ಇಂದು ಸುಮಾರು ೮೦% ನಮ್ಮ ರೋಗಗಳು ನೀರಿನಿಂದಲೇ ಬರುತ್ತಿವೆ. ಏಕೆಂದರೆ ಜಗತ್ತಿನ ಜನಸಂಖ್ಯೆಯಲ್ಲಿ ೫೦% ನಷ್ಟು ಜನರು ಶುದ್ಧವಾದ ನೀರು ಸೌಕರ್ಯದಿಂದ ವಂಚಿತರಾಗಿದ್ದಾರೆ.

ನಾಶವಾಗುತ್ತಿರುವ ಅರಣ್ಯ ಸಂಪತ್ತು :
ಭಾರತವು ಸಕಲ ಸಂಪತ್ತುಗಳಿಂದ ಕೂಡಿದ ದೇಶ. ಇದರಲ್ಲಿ ಅರಣ್ಯ ಸಂಪತ್ತೂ ಒಂದು. ಅರಣ್ಯಗಳು ಹೆಚ್ಚು ಮಳೆಯನ್ನು ತರಲು ಸಹಾಯ ಮಾಡುತ್ತವೆ. ನೀರು ಹೆಚ್ಚಾಗಿ ಆವಿಯಾಗಿಹೋಗದೇ ಇರುವುದರಿಂದ ಅಲ್ಲಿನ ಹವೆಯು ಆದ್ರವಾಗಿರುತ್ತದೆ. ಗಿಡಮರಗಳ ಬೇರಿನಿಂದಾಗಿ ಭೂಮಿಯ ಮಣ್ಣನ್ನು ಮಳೆ ನೀರು ಕೊಚ್ಚಿಕೊಂಡು ಹೋಗುವುದಿಲ್ಲ. ಹೀಗಾಗಿ ನೆಲದ ಸತ್ವವೂ ಉಳಿಯುತ್ತದೆ. ಗಿಡಮರಗಳು ನಮ್ಮ ಉಸಿರಾಟಕ್ಕೆ ಅತ್ಯವಶ್ಯವಿರುವ ಆಕ್ಸಿಜನ್ ಬಿಡುಗಡೆ ಮಾಡುತ್ತವೆ. ಹೀಗಾಗಿ ಇವು ನಮ್ಮ ಜೀವಾಳ, ಮತ್ತೆ ಮರಗಳೇ ನಾಶವಾದರೆ ನಮ್ಮ ಗತಿ ?

ಪ್ರತಿವರ್ಷ ಜಗತ್ತಿನಲ್ಲಿ ೮ ಮಿಲಿಯನ್ ಹೆಕ್ಟರ್‌ನಷ್ಟು ಅರಣ್ಯ ನಾಶವಾಗುತ್ತಿದೆ. ಇದರಿಂದಾಗಿ ನೂರು ಸಸ್ಯಗಳಂತೆ ಪ್ರತಿದಿನ ಅಪಾಯದ ಅಂಚಿನಲ್ಲಿ ಸಿಲುಕಿ ಸಾಯುತ್ತಿವೆ.

ಹಲವು ಕಾರಣಗಳಿಂದ ಮಾನವ ಅರಣ್ಯ ನಾಶ ಮಾಡುತ್ತಿದ್ದಾನೆ. ಆದುದರಿಂದ ಅವನೊಬ್ಬ ಅರಣ್ಯದ ವೈರಿ. ಮಳೆಯನ್ನೇ ನಮ್ಮ ಬಹುಭಾಗದ ಕೃಷಿಯ ಅಭಿವೃದ್ಧಿಯನ್ನವಲಂಬಿಸಿದೆ. ಹೀಗೆ ಅರಣ್ಯಗಳು ಮಾನವ ಜೀವನದ ಸುಖ ಸೌಂದರ್‍ಯಕ್ಕೂ, ರಾಷ್ಟ್ರ ಸಂಪತ್ತಿಗೂ ಅತ್ಯಾವಶ್ಯಕವಾಗಿದೆ. ಆದ್ದರಿಂದ ಅವುಗಳನ್ನು ಬೆಳೆಸುವುದಲ್ಲದೇ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಇಲ್ಲದಿದ್ದರೆ ವಾಯು ಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಮತೋಲನ ಕಾಪಾಡಿಕೊಳ್ಳಲಿಕ್ಕಾಗುವುದಿಲ್ಲ. ಅರಣ್ಯದ ಅಳಿವು ನಮ್ಮ ಅಳಿವೇ!

ಜನಸಂಖ್ಯಾ ಸ್ಫೋಟ :
ಕಳೆದ ಸಾವಿರಾರು ವರ್ಷಗಳ ಮಾನವ ಇತಿಹಾಸವನ್ನು ನೋಡಿದಾಗ ಪ್ರಪಂಚದ ಜನಸಂಖ್ಯೆ ಆರಂಭದಲ್ಲಿ ತುಂಬಾ ಕಡಿಮೆಯಿದ್ದು ಕಾಲಕ್ರಮದಲ್ಲಿ ಬೆಳೆದು ಅಗಾಧವಾಗಿದೆಯೆಂದು ಹೇಳಬಹುದು. ಕ್ರಿ.ಶ.ದ ಆರಂಭದಲ್ಲಿ ಪ್ರಪಂಚದ ಜನಸಂಖ್ಯೆ ೩೦ ಕೋಟಿಯಿತ್ತೆಂದು ಅಂದಾಜು. ೧೬೫೦ ರಲ್ಲಿ ೫೪ ಕೋಟಿಯಿದ್ದ ಜನಸಂಖ್ಯೆ ೧೮೫೦ ರಲ್ಲಿ ೧೧೭ ಕೋಟಿ ಮುಟ್ಟಿತು. ಅಂದರೆ ೨೦೦ ವರ್ಷಗಳಲ್ಲಿ ದ್ವಿಗುಣ! ನಿಮಿಷಕ್ಕೆ ೧೬೧ ರಂತೆ, ಪ್ರತಿದಿನ ೨೨೦,೦೦೦ ಮತ್ತು ವರ್ಷಕ್ಕೆ ೮೦ ಮಿಲಿಯನ್ ಜನಸಂಖ್ಯೆ ಹೆಚ್ಚಾಗುತ್ತಿದೆ.

ಜಗತ್ತಿನ ಭೂ ವಿಸ್ತೀರ್ಣದಲ್ಲಿ ೭ ನೆಯ ಸ್ಥಾನದಲ್ಲಿರುವ ಭಾರತ ಜನಸಂಖ್ಯೆಯಲ್ಲಿ ೨ ನೆಯ ಸ್ಥಾನದಲ್ಲಿದೆ ೧೯೫೧ ರಲ್ಲಿ ೩೬ ಕೋಟಿಯಿದ್ದ ಜನಸಂಖ್ಯೆ ೧೯೬೧ ರಲ್ಲಿ ೪೩ ಕೋಟಿ, ೧೯೭೧ ರಲ್ಲಿ ೫೪ ಕೋಟಿ ಹಾಗೂ ೧೯೮೧ ರಲ್ಲಿ ೬೮ ಕೋಟಿಯಾಯಿತು. ನಿಮಿಷಕ್ಕೆ ೪೮ ರಂತೆ ಪ್ರತಿದಿನ ಭಾರತದಲ್ಲಿ೪೫,೩೨೮ ಮಕ್ಕಳು ಜನಿಸುತ್ತಾರೆ. ಅಂದರೆ ಪ್ರತಿವರ್ಷ ಶೇ. ೨ ರಷ್ಟು ಏರುತ್ತಿದೆ. ಇದೇ ಗತಿಯಲ್ಲಿ ಸಾಗಿದರೆ ೨೦೨೫ ರ ವೇಳೆಗೆ ಭಾರತದ ಜನಸಂಖ್ಯೆ 1.446 ಬಿಲಿಯನ್ ತಲುಪಬಹುದು.

ಪರಿಣಾಮ :
ಗಣನೀಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗುವ ಕ್ಷಿಪ್ರ ಬದಲಾವಣೆಗಳಿಗೆ ಹೊಂದಿಕೊಂಡು ಅಭಿವೃದ್ಧಿ ಪಥದಲ್ಲಿ ನಡೆಯುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಬಡತನ ಹೆಚ್ಚಾಗುವುದಲ್ಲದೇ, ಆಹಾರದ ಕೊರತೆ ಹೀಗೆ ಅನೇಕ ದುಷ್ಪರಿಣಾಮಗಳು ಜನಸಂಖ್ಯಾ ಸ್ಫೋಟದಿಂದ ಉದ್ಭವಿಸುವುವು.

ಕೊನೆಯ ಮಾತು :
ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲಮಾಲಿನ್ಯ ಮತ್ತು ಜನಸಂಖ್ಯೆ ಇನ್ನಾದರೂ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇವೆಲ್ಲ ಅತಿಯಾದರೆ ನಮ್ಮ ಕಥೆ ಮುಗಿದಂತೆಯೇ. ಅರಣ್ಯವನ್ನು ಕಾಪಾಡಬೇಕು. ಗಿಡಮರಗಳನ್ನು ಕಬಳಿಸುವ ರಾಕ್ಷಸರನ್ನು ಹತ್ತಿಕ್ಕಬೇಕು. ಇಲ್ಲದಿದ್ದರೆ ನಾವು ಜೀವಿಸಲಾರೆವು.

“ಇಂದಿನ ಯುವಕರು ನಾಳಿನ ಪ್ರಜೆಗಳು” (Today’s Youngsters are tomorrow’s future) ನಾವು ಯುವಕರೆಲ್ಲರೂ ಕೂಡಿ ಇವೆಲ್ಲ ಆಗದಂತೆ ನೋಡಿಕೊಳ್ಳಬೇಕು. ಹಳ್ಳಿ-ಹಳ್ಳಿಗಳಲ್ಲಿ ಇವುಗಳ ಬಗ್ಗೆ ಜನರಿಗೆ ತಿಳಿಸಬೇಕು, ಏಕೆಂದರೆ ನಾವು ಪರಿಸರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಪರಿಸರದ ಉಳಿವು ನಮ್ಮ ಉಳಿವು. ಅದರ ಅಳಿವು ನಮ್ಮ ಅಳಿವೇ! ಇವುಗಳೆಲ್ಲದರ ವಿರುದ್ಧ ಕೂಡಲೇ ಒಂದು ಕ್ರಾಂತಿಯಾಗಬೇಕು. ಆಗಲೇ ನಮಗೆಲ್ಲಾ ಶಾಂತಿ, ನಾವೆಲ್ಲ ಒಂದಾಗಿ ಮುಂದೆ ಬಂದು ನಿಸರ್ಗವನ್ನು ರಕ್ಷಿಸಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟಡದ ಕಟ್ಟುಗಳಲ್ಲಿ ಗಣಿತವಿದ್ದೀತು. ಕವನವಿದ್ದೀತೇ ?
Next post ಏಕೆ ? ಒಳಮನಸ ಮಾತ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…