ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?

ಬಳ್ಳಾರಿ ರೆಡ್ಡಿ ಬಾಂಬ್ನ ಬಿಜೆಪಿ ಮುದಕರು ಡೆಲ್ಲಿನಾಗೆ ನಿಷ್ಕ್ರಿಯಗೊಳಿಸಿ ರೆಡ್ಡಿ ಬಾಯಿಗೆ ಬೊಂಬಾಟ್ ಪ್ಲಾಸ್ಟರ್ ಜಡ್ದು ಕಳಿಸಿದ್ದರಿಂದ ಯಡ್ಡಿ ಕುಮ್ಮಿ ಆನಂದ ತುಂದಿಲರಾಗಿದ್ದರು. ಆದ್ರೆ ಈ ಆನಂದ ಐದೇ ದಿನ್ದಾಗೆ ಠುಸ್ ಆಗಿ, ರೆಡ್ಡಿ ಸಡನ್ನಾಗಿ ಸದನದಲ್ಲಿ ಮತ್ತೆ ಬಾಂಬ್ನ ಸಿಡಿಸಿದಾಗ ಪತರಗುಟ್ಟಿದ ಬಿಜೆಪಿ ಲೀಡರ್ಸ್ ದಿಗ್ಭ್ರಾಂತರಾಗಿ ರೆಡ್ಡಿನಾ ಇಮ್ಮಿಡಿಯೇಟ್ ಆಗಿ ಅಮಾನತ್ತಿನಾಗೆ ಇಟ್ಟರು. ಕುರ್ಚಿಗೆಲ್ಲಾ ಪವಿಕಾಲೂ ಹಾಕ್ಕೊಂಡ್ರಂತೆ! ಆದರೆ ಬಳ್ಳಾರಿ ರೆಡ್ಡಿ ಎಂಬ ಗಣಿಯ ಗಿಣಿಯ ಹ್ಯಾಂಗ್ರ ನಂಬಲಿಕ್ಕಾಯ್ತದೆ? ದಿನಕ್ಕೊಂದು ತರಾವರಿ ನುಡಿಯೋ ರೆಡ್ಡಿ ಗಿಣಿ ನನ್ನ ಮತ್ತು ನನ್ನ ಮಗನ ಮ್ಯಾಗೆ ಬ್ಲಾಕ್ ಮೇಲ್ ಟೆಕ್ನಿಕ್ ಬಳಸ್ತಿದೆ ಅಂತ ಎಂ.ಪಿ.ಪ್ರಕಾಸು ಸದನದಲ್ಲೇ ಸಣ್ಣ ದನಿತೆಗ್ದು ಅಳಲಿಕತ್ತಾರೆ. ‘ಯಾರು ಏನು ಮಾಡುವರೋ ನನಗೇನು ಕೇಡು ಮಾಡುವರೋ ಗೌಡಪ್ಪನೆ ನನ್ನ ಹಿಂದಿರೋವಾಗ ಅಧಿಕಾರವು ನನ್ನ ಕೈಲಿರೋವಾಗ’ ಅಂತ ಸಾಹಸಸಿಂಹ ಇಷ್ಣು ಟೈಪ್ ಪದ ಹಾಡ್ತಾ ಯಾರ ಪ್ರಾಣ ಹೋದ್ರೂ ರಾಜಿನಾಮೆ ಕೊಡಂಗಿಲ್ಲ ಅದೇನ್ ಕಿತ್ಕೊಂತಾರೋ ಕಿತ್ಕಳ್ಳಿ ಅಂತ ಕೊಮಾರ್ಸಾಮಿ ಕಾಂಗ್ರೆಸ್ನೋರ ಮ್ಯಾಗೆ ಗುರಾಯಿಸ್ತಾ ಅವ್ನೆ. ದೋಸ್ತಿಗಳೆ ಬೆನ್ನಿನಾಗೆ ಚೂರಿ ಹಾಕೋವಾಗ್ಲೂ ಶಾಂತವಾಗಿದ್ದೂ ‘ಸಮಯ
ಬಂದಾಗ ಎಲ್ಲಾ ಬಯಲು ಮಾಡ್ತೀನಿ’ ಅನ್ನೋ ಹಳೆ ಸ್ಲೋಗನ್ನೇ ರಿಪೀಟ್ ಮಾಡ್ತಾ ಒಳಗೇ ನಳ್ಳತಾ ಅತಂತ್ರನಾಗಿ ಕುಂತಾನೆ. ಮುಖ ಅಂಬೋದು ಡಾಂಬರ್ ಕಲಗೆ ತಿರುಗಿರೋದ್ನ ಸಹಿಸಲಿಕ್ಕಾಗ್ದೆ ಟಿವಿನೋರ್ನ ದಿನಾಮನೀಗೆ ಬರೋಕೇಳಿ ಮೇಕಪ್ ಮಾಡಿಸಿಕ್ಯಂಡೇ ಹೊರಗೊಲ್ಡದಂತ ಡಿಸೈಡ್ ಮಾಡವ್ನಂತೆ! ಇದೆಲ್ಲಾ ಹೆಂಗಾರ ಇಲ್ಲಿ ವರಮಾಲಕಸ್ಮಿ ವರಾತ ಬೇರೆ ಹತ್ತಿರ ಬರ್ತಾ ಅದೆ. ಘನಗರತಿ ಮೂವತ್ತೈದೆ ಸುಸ್ಮಾಸ್ವರಾಜು ತನ್ನ ರಾಜಧಾನಿಯಿಂದ ಬಳ್ಳಾರಿಗೆ ಬರಬೇಕಾಗೇತಿ. ಜನಾರ್ಧನರೆಡ್ಡಿ ಮನೆಯಾಗೆ ಕುಂತು ವರಾತ ಮಾಡಡೋದೈತೆ. ಈ ರೆಡ್ಡಿ ಅಂಬೋ ಗಣಿಗಿಣಿಯೇ ತನ್ನ ಬಾಯಿಗೆ ಹಾಕಿದ್ದ ಪ್ಲಾಸ್ಟರ್ ಕಿತ್ತೂಗೆದು, ವೆಂಕಯ್ಯನಾಯ್ಡು
ಹೇಳಿ ಕೊಟ್ಟಿದ್ನೆಲ್ಲಾ ಮರ್ತು ಹುಚ್ಚು ಪ್ಯಾಲಿಯಂಗೆ ಮತ್ತದೇ ಹಳೆ ರಿಕಾರ್ಡ್ನೇ ಹಾಕಿದ್ನ ಟಿವಿ ನ್ಯೂಸ್ನಾಗೆ ನೋಡಿ ಅಗ್ದಿ ಚಿಂತಾಕ್ರಾಂತಳಾದ ಸುಸ್ಮಾ ಇಂತದ್ರಾಗೆ ನಾನು ಹೆಂಗೆ ಬಳ್ಳಾರಿಗೆ ಫೂಟಿಕ್ಲಿ. ಯಾರ ಬಿಲ್ಡಿಂಗ್ನಾಗೇ ಸೆಟ್ಲ್ ಅಗ್ಲಿ ಎಲ್ಲಿ ಲಕಸ್ಮಿ ಪೂಜೆ ಮಾಡ್ಲಿ? ಈ ರೆಡ್ಡಿ ನನ್ಮಗ ಯಾಕಿಂಗೆ ಹೈಲ್ನಂಗೆ ಆಡ್ತಾ ಅವ್ನೆ ಅಂತ ಗಳಗಳನೆ ಅಳ್ತಾ ಕುಂತಳಂತ ನ್ಯೂಸು. ನಂಬಿದ್ರ ನಂಬಿ ಬಿಟ್ಟರೆ ಬಿಡ್ರಲಾ.

ಕೊಮಾಸಾಮಿ ನೂರು ಕೋಟಿಯಾರ ತಿನ್ಲಿ ಇನ್ನೂರಾರ ತಿಂದ್ಕಳ್ಳಿ ಈಗಿನ ಜಮಾದ್ದಾಗೆ ತಿಂದೆ ಇರೋ ರಾಜಕಾರಣಿ ಎಲ್ಲಿ ಅವ್ನೆ? ರಾಜೀವ್ ಗಾಂಧಿಯ ಕಾಲ್ದಾಗೆ ಬೋಫೋರ್ಸು ಹಗರಣ ನೆಡದ್ರೂ ಕಡೀಗೆ ಪೋರ್ಸು ಕಳ್ಕಂಬರ್ಲಿಲ್ವೆ. ತುರ್ತು ಪರಿಸ್ಥಿತಿ ಹೇರಿ ದೇಶಾನೇ ಆಪೋಸ್ನ ತಗೊಂಡ ಇಂದಿರಜ್ಜಿ ಜೈಲ್ಲಾಗಿದ್ದದ್ದು ಓನ್ಲಿ ಒನ್ ಡೇ. ಆಮ್ಯಾಗೆ ಪವರ್ರಿಗೆ ಬರ್ನಿಲ್ವೆ. ಮಿಲ್ಟ್ರಿ ಉಪಕರಣದ ಪರಚೇಸ್ನಾಗೆ ಕಮೀಷನ್ ಹೊಡ್ದ ಸಮಾಜವಾದಿ ಫರ್ನಾಂಡಿಸ್ಗೇನಾತು? ಎಗೇನ್ ಪವರ್ ಸಿಗ್ತು. ನಿಜಲಿಂಗಪ್ಪಜ್ಜ ಗುಳ್ಳೆನರಿ ಹೆಗ್ಡೆ ಬಂಗಾರಿ ಗುಂಡುರಾಯ ಪಟೇಲು ಎಲ್ಲಾರೂವೆ ಮೇದೋರೆಯಾ. ನಮ್ಮ ಕೊಮಾರಣ್ಣಂದು ಯಾವ ಮಹಾ ಕೇಸು ಅಂತ ಬಿಜೆಪಿ ಫ್ರೆಂಡ್ಗಳೇ ತಿಪ್ಪೆ ಸಾರಿಸ್ಲಿಕತ್ತಾರೆ. ‘ಬಳ್ಳಾರಿ ರೆಡ್ಡಿ ಡೆಫನೇಟ್ಲಿ ಮೆಂಟ್ಲು ಕೇಸು ಇಂಥೋನ ನಾವು ನಂಬಲ್ಲ ನೀವೂ ನಂಬ ಬ್ಯಾಡ್ರಿ’ ಅಂತ ಕಾಂಗ್ರೆಸಿನೋರ್ಗೆ ಕೆಳಕಂಡಂತೆ ರಿಪೋರ್ಟ್ ಕಳಿಸ್ಯಾರಂತೆ ಸದಾ ಅನಂದವಾಗಿರೋ ಗೋಡ. ರೆಡ್ಡಿ ಜುಲೈ ೫ : ಏನಂದ? ಎಸ್ಪಿ ಠಾಕೂನ ವರ್ಗಾವಣೆಯಾ ಯಾನ ಕೇಳಿ ಮಾಡಿದ್ರಿ? ಉಸ್ತುಪಾರಿ ಮಂತ್ರಿಯಾದ ಶ್ರೀರಾಮುಲು ಕೇಳಿದ್ರಾ? ನನ್ನಾರ ಒಂದು ಮಾತು ಕೇಳಿದ್ರಾ ನಾವು ಅಂದ್ರೆ ಅಷ್ಟು ಸದರಾಗೋತೇನು ಅಂತ ಸಿ‌ಎಂ ಮ್ಯಾಗೆ ಮುಕ್ಕಂಡು ಬಿದ್ದ. ಸರ್ಕಾರ ಗಪ್ ಕುಂಡ್ರುತು. ಜುಲೈ ೬ : ಏನಂದ? ಸಿ‌ಎಂ ಕೊಮಾರ ಗಣಿ ಮಾಲಿಕತಾವ ನೂರು ಕೋಟಿ ಲಂಚ ತಗಂಡಾರೆ ಅಂತ ಇಧಾನಸೋದಕ್ಕೆ ಬಾಂಬ್ ಹಾಕ್ದ. ಜುಲೈ ೭ : ಸಿ‌ಎಂ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಅಂತ ಗುರಾಯಿಸಲಿಕತ್ತಿದ. ಜುಲೈ ೮ : ಐ ವೋಂಟ್ ಕೇರ್ ಅಂದ ರೆಡ್ಡಿ. ಜುಲೈ ೯ : ಕಾಂಗ್ರೆಸ್ ಸರ್ಕಾರ ಇದ್ನೆ ಹೈಕಮಾಂಡ್ ಪ್ರಕಾರ ವೆಪನ್ ಮಾಡ್ಕೊಂಡು ವಾರ್ ಡಿಕ್ಲೇರ್ ಮಾಡಿದಾಗ್ಲೂ ನಾನ್ ಹೇಳಿದ್ದೆ ಬದ್ದ ಅಂತ ರೆಡ್ಡಿ ದೋಸ್ತಿ ತೆಲಿಮ್ಯಾಗೆ ದ್ವಾಸೆ ಹುಯ್ದ. ಜುಲೈ ೧೦ : ಏನಂದ? ಸಮಯನ್ವಯ ಸಮಿತಿ ಸಭೆಗೆ ಅಬ್ಸೆಂಟ್ ಆದ. ಜುಲೈ ೧೧ : ಬಿಜೆಪಿ ವರಿಷ್ಠರು ರಾಜಿ ಮಾಡ್ಕಳಲೆ ರೆಡ್ಡಿ ಅಂದ್ರೆ ಕ್ಯಾರೆ ಮಾಡ್ಲಿಲ್ಲ. ಜುಲೈ ೧೨ : ತನ್ನ ಸ್ವಂತ ಈಮಾನ್ದಾಗೆ ಡೆಲ್ಲಿಗೇ ಹಾರ್ದ. ನಾನ್ ಹೇಳಿದ್ದೇ ಸತ್ಯ ಅಂತ ವೆಂಕಯ್ಯಾ, ಸುಸ್ಮಕ್ಕಂತಾವ ಬೊಂಬ್ಡಿ ಬಜಾಯಿಸ್ದಾ. ‘ನುವೇಮಿ ಸತ್ಯ ಹರಿಶ್ಚಂದ್ರುಡುವಾ? ನೋರು ಮುಸ್ಕೋನಿ ಪೋರಾ ಪಿಚ್ಚಿವಾಡ’ ಅಂತ ವೆಂಕಯ್ಯಾ ಗುರಾಯಿಸ್ದ. ಸುಸ್ಮಕ್ಕ ರೆಡ್ಡಿ ಬಾಯಿಗೆ ಪ್ಲಾಸ್ಟರು ಜಡಿದು ಜಾಡಿಸಿ ಒದ್ದಾಗ ಬೆಂಗಳೂರಿಗೆ ಬಂದು ಬಿದ್ದ ರೆಡ್ಡಿ ಪ್ಲೇಟ್ ಚೇಂಜ್ ಮಾಡ್ಡ. ‘ಇದಂತ ಪೇಪರ್ನೋರ ಕಿತಾಪತಿ. ಸಿ‌ಎಂ ಮಂಚಿವಾಡು. ವಾಡು ಪೇರುಲೋ ಎವರೋ ತಿಂಟುನ್ನಾರು ಕೊಮಾಸಾಮಿ ಬಂಗಾರು ಲಾಂಟಿ ಮನಿಷಿ’ ಅಂದ. ‘ನಿಜಮೈನ ಬಂಗಾರು ಮನುಷ್ಯುಡು ನುವ್ವೇರಾ ರೆಡ್ಡಿ’ ಅಂತ ಕಾಡು ಮಂತ್ರಿ ಚೆನ್ನಿಗ ರೆಡ್ಡಿನ ಅಪ್ಪಿ ಮುದ್ದಾಡಿದ. ಈಗೇನ್ ಹೇಳ್ತೀರಿ ಅಂತ ಕಾಂಗ್ರೆಸ್ನೋಗೆ ಸವಾಲ್ ಹಾಕ್ದ ಕೊಮಾರ. ‘ಈಗೋರಿ ನೀವು ರೆಡ್ಡಿನ ಮೆಂಟ್ಲು ಕೇಸು ಅಂತೇಳಿ ಬಿಟ್ರೆ ನಂಬ್ತೀವಾ? ಸಿಬಿ‌ಐ ಎನ್‍ಕ್ವಯರಿ ಆಲಿಕ್ಕೇ ಬೇಕ್ರಿ ಅಂತ ದಬರಿ ಮೋರೆ ಧರ್ಮು, ಖರ್ಗೆ ಪಾಟೀಲ ಅವಾಜ್ ಹಾಕಿದ್ರೆ, ರಮೇಸಕುಮಾರ ಡಿಡಿಜಿ ಜಯಕುಮಾರ ಜಂಗಿಕುಸ್ತಿಗೇ ಬಿದ್ದರು. ಸಿದ್ದು ರಾಜಿನಾಮೆಗೂ ಪರಿತಪಿಸೋವಾಗ್ಲೆ ಸ್ಟ್ರಾಂಗಾದ ಕೊಮಾಸಾಮಿ ಗಣಿಗಾರಿಕೆ ಲೈಸನ್ಸೇ ಸ್ಯೆಲೆನ್ಸ್ ಮಾಡ್ತಿವ್ನಿ. ಧರ್ಮುದಾದನ ಗಣಿ ಮ್ಯಾಗಿನ ದಾದಾಗಿರಿ ಫೈಲ್‌ತರ್ಸಿ ಎಲ್ಲಾ ಬಯಲಿಗೇಳಿತೀನಿ ಅಂತ ರಾಂಗ್ ಆದ. ಎಲ್ಲಾ ಟಂಡಾ ಹೊಡಿತ್ರಪಾ ಅನ್ನೋವಾಗ್ಲೆ ಇದ್ದಕ್ಕಿದ್ದಂಗೆ ಬಳ್ಳಾರಿ ರೆಡ್ಡಿ ಜುಲೈ ೧೯
ರಂದು ಮತ್ತೆ ಪ್ಲೇಟ್ ಚೇಂಜ್ ಮಾಡಿದ್ನೆ! ಈ ಸಲ ಸಭಾಪತಿ ಆಲ್ಡರ್‌ಗೂ ಮೇಟ್ ಮಾಡ್ಲಿಲ್ಲ. ಬಿಜೆಪಿ ಲೀಡನೂ ಕೇರ್ ಮಾಡ್ಲಿಲ್ಲ. ಸಿ‌ಎಂ ೧೫೦ ಕೋಟಿ ನುಂಗವ್ನೆ. ಕಾಡು ಮನುಷ್ಯ ಚೆನ್ನಿಗ, ಮೆತ್ತನೆಕಳ್ಳ ಪ್ರಕಾಸು ಎಲ್ಲಾರ ಜಾತ್ಕ ಕುಂಡ್ಲಿ ನಂತಾವೈತೆ. ಟೇಮ್ ನೋಡ್ಕಂಡು ಬಾಂಬ್ ಹಾಕೋನೆಯಾ ಅಂತ ಪೇಪರ್ನೋತ್ತಾವ ಮತ್ತೆ ಬೊಂಬ್ಡಿ ಹೊಡೆಯೋದ್ನ ನೋಡಿದ ಯಡೂರಿ ತೀರಾ ಅಪ್ಸೆಟ್ ಆಗಿ ‘ಈಗ್ಲಾರ ನಂಬ್ತೀರೇನ್ರಿ ರೆಡ್ಡಿ ಮೆಂಟ್ಲು ಕೇಸು ಅಂತ ಕಾಂಗ್ರೆಸ್ನೋರ್ನ ನಂಬಿಸೋ ಸರ್ಕಸ್ ಮಾಡ್ಲಿಕತ್ತವ್ನೆ. ಬಳ್ಳಾರಿ ರೆಡ್ಡಿ ಮಾತಿಗೆ ಶ್ರೀರಾಮ್ಲು ಯಸ್ಸೂ ಅನ್ನವಲ್ಲ ನೋನೂ ಅನ್ನವಲ್ಲ. ಯಾಕಂದ್ರೆ ಉಸ್ತುವಾರಿ ಪವರ್ರು ಪ್ರಕಾಸುಗೆ ಹೋಗೋ ಹಂಗೈತೆ. ರೆಡ್ಡಿ ಆಂಧ್ರದ ಸಿ‌ಎಂ ತಾವ ಹೆಲಿಕ್ಕಾಪ್ಟನಾಗೆ ಹಾರವ್ನೆ. ಅದೇನಾರ ಆಗ್ಲಿ ಇಮ್ಮಿಡಿಯೇಟ್ ಆಗಿ ಕೂಮಾಸಾಮಿ ರಾಜಿನಾಮೆ ಕೊಡ್ಲಿ ಅಂತ ಕಾಂಗ್ರಸ್ ಲಾಗ ಹೊಡಿಲಿಕತ್ತದೆ. ರೆಡ್ಡಿ ಕಾಂಗ್ರಸ್ ಪಾಲಾಗ್ತಾನೆ ಅಂತ ದೌಟೂ ಐತೆ. ಹಾಗೇನಿಲ್ಲ ಫೋಲಿಟ್ರಿಕ್ಸ್‌ನಾಗೆ ಇವೆಲ್ಲಾ ಕಾಮನ್ನು ಮೊದ್ಲೆ ಮೆಂಟ್ಲು- ಹಿಂಗೆ ಹೇಳೇ ಇನಿಲ್ಲ ಅಂತ ನಮ್ತಾವೇ ಬಂದು ಅಡ್ಡಬೀಳ್ತಾನೆ ಅನ್ನಲಿಕತ್ತವೆ ಬಿಜೆಪಿಗಳು. ರಾಜಿನಾಮೆ ಕೂಡಂಗಿಲ್ರಿ ಅಂತ ಚೀರಾಡ್ಲಿಕತ್ತಾನೆ ಕೊಮಾರ. ಒಟ್ಟಾಗೆ ಎಲ್ಲರೂ ಮೆಂಟ್ಲು ಕೇಸುಗಳಂಗೇ ಆಡ್ತಾ ಅವೆ. ಮುಂದ? ಇದನ್ನ ನೀವು ಓದೋದ್ರಾಗೆ ಏನೇನು ಉಲ್ಟಾ ಪಲ್ಪಿ ಆಗಿರ್ತೇತೋ ಮಲೆಮಾದೇಸ್ನೇ ಬಲ್ಲ.
*****
( ದಿ. ೦೩-೦೮-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡಲೇ ಒಮ್ಮೊಮ್ಮೆಯಾದರೂ ಬಾ
Next post ಕೃತಕ ವನ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys