Home / Venu B.L.

Browsing Tag: Venu B.L.

ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್‌ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್‌ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ...

ಕೆಳಹಟ್ಟಿವರೆಗೂ ಹೋಗಿ ದೂರದಲ್ಲೇ ನಿಂತು ಕೂಗಿ ಕರೆದು ಸತ್ತ ಆಕಳನ್ನು ಎತ್ತಿ ಹೊಯ್ಯಲು ಪರಿಪರಿಯಾಗಿ ಬೇಡಿಕೊಂಡರೂ ಹಣನೀಡುವುದಾಗಿ ಆಶೆ ಹುಟ್ಟಿಸಿದರೂ ಯಾರೋಬ್ಬರು ಬರಲು ನಿರಾಕರಿಸಿದಾಗ ಎಂತಹ ಕಾಲ ಬಂತಪ್ಪ’ ಎಂದು ನಿಟ್ಟುಸಿರಾದರು ಶೇಷಾಚಾರಿ. ಹಟ್...

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನ...

[ಖ್ಯಾತ ನಟಿ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಅಭಿನಯದಲ್ಲಿ ಚಲನಚಿತ್ರವಾಗುತ್ತಿರುವ ಕಥೆ] ಆಸ್ಪತ್ರೆ ಸ್ಟಾಪ್‌ ಬಳಿ ಬಸ್ಸಿನಿಂದ ಇಳಿದೊಡನೆ ಆಟೋಗಳು ಮುತ್ತಿಕೊಂಡವು. ಪ್ರಯಾಣದಿಂದ ಆಯಾಸಗೊಂಡಿದ್ದ ಕುಮಾರ ಯಾವದೋ ಆಟೋದಲ್ಲಿ ಬ್ಯಾಗ್ ಬಿಸಾಕಿ ಹತ್ತ...

ಹೂವಿನ ಹಾರಗಳ ಗಮಗಮ ಊದುಕಡ್ಡಿಯ ಘಾಟು ಬೆಂಕಿಯಲ್ಲಿ ಉರಿದ ಕಟ್ಟಿಗೆಗಳ ಕಮರು ವಾಸನೆ ಸುಟ್ಟ ಹೆಣಗಳ ಕಮಟು ವಾಸನೆ ಬೂದಿಯ ಹಸಿಬಿಸಿ ವಾಸನೆ ಚೆಲ್ಲಾಡಿದ ತೆಂಗಿನಕಾಯಿ ನೀರಿನ ಮುಗ್ಗಲು ವಾಸನೆ ಸುಂಯ್ಯನೆ ಬೀಸುವ ಗಾಳಿ ಹೊತ್ತು ತರುವ ಗಂಜಲು ವಾಸನೆ ಎಲ್...

ಇಂದು ಕಛೇರಿಗೆ ಹಾಜರಾಗುವ ಮೊದಲ ದಿನ, ಈವತ್ತಿನಿಂದ ಸರ್ಕಾರಿ ನೌಕರನಾಗುವ ಸೌಭಾಗ್ಯ. ಇನ್ನು ೫೮ ವರ್ಷಗಳವರೆಗೆ ನಿಶ್ಚಿಂತೆ. ಅಂದರೆ ಚಿಂತೆಗಳೇ ಇಲ್ಲವೆಂದಲ್ಲ. ವಯಸ್ಸಾದ ಅಮ್ಮ – ಅಪ್ಪ, ಬೆಳೆದು ನಿಂತ ತಂಗಿಯರು ಬೇರೆ. ಅಮ್ಮ ನಿತ್ಯರೋಗಿ, ಆ...

ಆಸ್ಪತ್ರೆ ಸವಾಗಾರ್‍ದಾಗೆ ನಿಂಗಿ ಮಲಗವ್ಳೆ. ಅವಳ್ನ ಕುಯ್ದು ಅದೇನೋ ಪರೀಕ್ಷೆ ಮಾಡಿ ಮತ್ತೆ ಹೊಲಿಗೆ ಹಾಕಿ ಕೊಡ್ತಾರಂತಪ್ಪ. ಅಲ್ಲಿಗಂಟ ಮಣ್ಣು ಮಾಡಂಗಿಲ್ಲ. ಇದನ್ನೆಲ್ಲಾ ಯೋಳಾಕೆ ಹೊಂಟಿರೋದು ನಿನ್ಗೆನಪ್ಪ ನಿನ್ಗೆ. ಮಟಮಟ ಮಧ್ಯಾನದಾಗೆ ಪೊಲೀಸಿನೋರು...

ದೇವಸ್ಥಾನದ ಜಗಲಿಯ ಮೇಲೆ ಮಲಗಿದ್ದ ನಾನು ಇಲ್ಲಿಗೆ ಬಂದಾದರೂ ಹೇಗೆ ಮಲಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹೊಟ್ಟೆಯಲ್ಲೆಲ್ಲಾ ವಿಚಿತ್ರ ಬಾಧೆ, ಎದೆಯಲ್ಲಿ ನಗಾರಿ ಬಾರಿಸಿದಂತಹ ಸದ್ದು, ಪ್ರಯಾಸಪಟ್ಟು ಕಣ್ಣು ತೆರೆದರೆ ಬೀದಿ ದೀಪ ಕಾಣುತ್ತದೆ. ಎರಡು ...

ಬಹುಮುಖ್ಯವಾದ ಫೈಲುಗಳನ್ನು ಅಟೆಂಡ್ ಮಾಡಿ ಸಾಹೇಬನ ಟೇಬಲ್ಲಿಗೆ ಕಳಿಸಿದರೂ ಮನಸ್ಸಿಗೆ ಉಲ್ಲಾಸವಿಲ್ಲ. ತಲೆತುಂಬಾ ನನ್ನ ಶ್ರೀಮತಿಯೇ ತುಂಬಿಕೊಂಡಿದ್ದಾಳೆ. ಅವಳಿಗದೆಂತಹ ಕಾಯಿಲೆಯೋ ಅರ್ಥವಾಗುತ್ತಿಲ್ಲ. ಪರಿಚಿತ ಡಾಕ್ಟರ ಬಳಿ ತೋರಿಸೋಣವೆಂದು ದಮ್ಮಯ್ಯ...

ಸಿನಿಮಾ ಜನರಿಂದ ಹಣ ಕೀಳುವುದೂ ಒಂದು ಯಾಗ ಮಾಡಿದಂತೆಯೆ. ಎಷ್ಟೋ ಸಲ ಅಡ್ವಾನ್ಸ್ ಕೊಟ್ಟಷ್ಟೇ ಗ್ಯಾರಂಟಿ. ನನ್ನ ಪುಣ್ಯ, ನನಗೆ ಸಿಕ್ಕವರು ತೀರಾ ಚಿಲ್ಲರೆಗಳೇನಲ್ಲ. ಚಿಲ್ಲರೆ ಕೊಟ್ಟವರೂ ಅಲ್ಲ. ದೊಡ್ಡ ಬ್ಯಾನರ್‌ನವರು ದೊಡ್ಡದಾಗಿ ಹಣ ಕೊಡದಿದ್ದರೂ (...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...