ಮನವು ತಂಬೂರಿ
ಹೃದಯ ಮೃದಂಗ, ತಬಲ
ಕನಸು, ಕೊಳಲು, ಪಿಟೀಲು, ವೀಣೆ
ಮಾನವನ ಬಾಳೊಂದು
ವೃಂದಗಾನ, ಸುಗಮ ಸಂಗೀತ
ಜೊತೆ ಇರಬೇಕು
ಶಾಸ್ತ್ರೀಯ ಸಂಗೀತ
ಚೌಕಟ್ಟು, ಬಿಗಿತ, ಹಿಡಿತ
ಕೂಡಿ ಬರಬೇಕು
*****