ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ ತನ್ನ ಹೃದಯ ಇನ್ನಷ್ಟು ತುಂಡಾಯಿತು. ರಾಜಾಜಿ ನಗರ, ಜಯನಗರ, ಲಾಲ್ ಬಾಗ್, ಕಬ್ಬನ್ ಪಾರ್ಕ್ ಹೀಗೆ ಎಲ್ಲಾ ಕಡೆ ಹುಡುಗಿಯರ ಜೊತೆ ಹೃದಯ ತುಂಡಾಗುತ್ತಾ ಎನ್ನುವಷ್ಟರಲ್ಲಿ ಗೆಳೆಯ ಹೇಳಿದ “ನಿಲ್ಲಿಸು ನಿನ್ನ ಗೋಳು. ಹೃದಯ ಒಂದು ತುಂಡಾದಾಗಲೇ ನೀನು ಸಾಯ ಬೇಕಿತ್ತು. ಇನ್ನು ಮುಗಿಯದ ಕತೆ ಹೇಳುತ್ತಾ ಬದುಕಿರುವೆಯಲ್ಲಾ?” ಎಂದು ಬಾಯಿ ಮುಚ್ಚಿಸಿದ.
*****