ತನ್ನಂತೆಯೇ ರೂಪಿಸಲು
ರೊಟ್ಟಿಯನ್ನು ಬಡಿಬಡಿದು
ಅದೆಷ್ಟು ಚೆಂದಗೆ
ಹದಗೊಳಿಸುತ್ತದೆ ಹಸಿವು.
ರೊಟ್ಟಿಯೀಗ ಹೊರನೋಟಕ್ಕೆ
ಹಸಿವಿನದೇ ಪ್ರತಿಬಿಂಬ
ಒಳಗು ಮಾತ್ರ ಆತ್ಮಪ್ರತ್ಯಯದಲಿ
ಜ್ವಲಿಸುವ ಮೂಲ ಬಿಂಬ.
*****