ಅವನು ಸತತವಾಗಿ ಸಿಗರೇಟು ಸೇದುತ್ತಿದ್ದ. ಒಂದು ಮುಗಿದೊಡನೆ ಕಡ್ಡಿಗೀರಿ ಇನ್ನೊಂದು ಹಚ್ಚಿ ನಿಗಿನಿಗಿ ಆಗಿ ಹೊಗೆ ಬಂದಾಗ ಬಾಯಲ್ಲಿಟ್ಟು ದಮ್ ಎಳೆಯುತ್ತಿದ್ದ. ಇದನ್ನು ನೋಡಿದ ಮಗು ಅಮ್ಮನ ಹತ್ತಿರ ಕೇಳಿತು. “ಬೆಂಕಿ ಕಡ್ಡಿ ಗೀರ ಬಾರದು, ಬೆಂಕಿ ಮುಟ್ಟ ಬಾರದು” ಅಂತ ನಂಗೆ ಹೇಳುತ್ತೀಯ. ಅಪ್ಪ ಬೆಂಕಿ ಹಚ್ಚಿದ ಸಿಗರೇಟು ಬಾಯಲ್ಲಿ ಇಟ್ಟು ಕೊಳ್ಳುತ್ತಾರೆ. ಮಕ್ಕಳಿಗೆ ಮಾತ್ರಬೆಂಕಿ ಸುಡತ್ತಾ? ಮಗುವಿನ ಪ್ರಶ್ನೆಗೆ “ಸುಮ್ಮೆ ಹೇಳಿದ್ದು ಕೇಳು ಅಷ್ಟೇ” ಎಂದಳು ಅಮ್ಮ ಏನು ತೋಚದೆ.
*****