ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ಕೈಯಿಂದ ನಾನೇ ಬಾಗಿಲು ತೆರದೆ” ಎಂದಳು ಅವರ ಪುಟ್ಟ ಕುವರಿ. “ಮಗಳೇ! ನನಗೆ ಜಿಲೇಬಿ ತಿನಿಸಲು ಬಂದ ನಿನಗೆ ಒಂದು ಮುದ್ದು, ಅವನು ಅಂಟನ್ನು ಸರಿಯಾಗಿ ವರಿಸಿಲ್ಲ ಅದಕ್ಕೆ ಅವನಿಗೆ ಒಂದು ಗುದ್ದು” ಎಂದು ಬೆನ್ನಿಗೆ ಗುದ್ದಿದರು. “ಅಪ್ಪಾ ಅವನಿಗೆ ಹೊಡೀ ಬೇಡಿ. ಅವನು ಕಾರು ಒರಿಸಿದ್ದಕ್ಕೆ ಜಿಲೇಬಿ ಕೊಡುತ್ತೇನೆ” ಎಂದಿತು ಮಗು ಅನುಕಂಪದಿಂದ. ಮಗುವಿನ ಅನುಕಂಪ ಯಜಮಾನನಿಗೆ ಚಾವಟಿ ಏಟು ಹಾಕಿ ಹೃದಯದ ಬಾಗಿಲನ್ನು ತೆರೆಯಿತು.
*****