ಕಾಯವೆಂಬ ಕದಳಿಯ ಹೊಕ್ಕು,
ಜೀವ ಪರಮರ ನೆಲೆಯನರಿದು,
ರಸ, ರುಧಿರ, ಮಾಂಸ, ಮಜ್ಜೆ, ಮಿದುಳು,
ಅಸ್ಥಿ, ಶುಕ್ಲ ಈ ಸಪ್ತ ಧಾತುಗಳ ಸಂಚವ ತಿಳಿದು,
ಮತ್ತೆ ಮನ ಪವನ ಬಿಂದುವನೊಡಗೂಡಿ
ಉತ್ತರಕ್ಕೇರಿ ನೋಡಲು, ಬಟ್ಟಬಯಲಾಗಿದ್ದಿತ್ತು.
ಆ ಬಯಲಲ್ಲಿಯೆ ನಿಂದು, ನಿರಾಳದೊಳಗೂಡಿ,
ಮಹಾಬೆಳಗನೆ ಕೂಡಿ ನಾ ನಿಜ
ಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
Latest posts by ಲಿಂಗಮ್ಮ (see all)
- ಲಿಂಗಮ್ಮನ ವಚನಗಳು – ೧೦೧ - February 14, 2017
- ಲಿಂಗಮ್ಮನ ವಚನಗಳು – ೧೦೦ - February 7, 2017
- ಲಿಂಗಮ್ಮನ ವಚನಗಳು – ೯೯ - January 31, 2017