ನಾವು ಮುದ್ರಣ ಯಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣುತ್ತೇವೆ. ವಿದ್ಯುತ್‌ಯಂತ್ರದಿಂದ ಕಂಪ್ಯೂಟರ್ ಪ್ರಿಂಟರ್‌ವರೆಗೆ ಹೀಗೆ ಹೊಸ ಮೂನೆಗಳನ್ನು ಕಂಡಿದ್ದೇವೆ. ಹೊಸ ಸಂಶೋಧನೆಗಳಿಗೆ ಹೆಸರಾದ ಜಪಾನ್ ದೇಶದ ಸಿಟಿಜನ್ ವಾಚ್ ಕಂಪನಿಯು ಅತ್ಯಂತ ಸಣ್ಣಮುದ್ರಣ ಯಂತ್ರವನ್ನು ಕಂಡು ಹಿಡಿದಿದೆ. ಮತ್ತು ಬಹಳ ಹಗುರ ಕೂಡ ಇದೆ. (P.G. ಪ್ರಿಂಟರ್) ಇದಕ್ಕೆ P.N.60 ಎಂದು ಕರೆಯುತ್ತಾರೆ. ಇದರ ಉದ್ದಳತೆ ಎತ್ತರ ಹೀಗಿದೆ. 254-47-51 ಮಿಲಿಮೀಟರ್ಗಳು ಮತ್ತುಈ ಯಂತ್ರದ ತೂಕ ಕೇವಲ 500 ಗ್ರಾಂ. ವ್ಯಾಪಾರಿಗಳಿಗೆ, ವ್ರವಾಸ ಕಾಲಕ್ಕೆ ಅತ್ಯಂತ ಉಪಯುಕ್ತವಾಗಲಿದೆ. ಲ್ಯಾಪ್‌ಟಾಪ್ ಕಂಪ್ಯೂಟರ್ ಸಂಗಡ ಪ್ರವಾಸ ಮಾಡುವವರಿಗೆ ಈ ಯಂತ್ರದ ಉಪಯೋಗವಾಗುತ್ತದೆ. ಒಂದು ನಿಮಿಷದಲ್ಲಿ ಎರಡು ಪುಟಗಳನ್ನು ಬಣ್ಣದಲ್ಲಿ ಮುದ್ರಿಸಬಹುದಾಗಿದೆ. ಬ್ಯಾಟರಿಯಿಂದ ನಡೆಯುವ ಈ ಯಂತ್ರ ಒಂದು ಸಲ ಹಾಕಿದ ಬ್ಯಾಟರಿಯಿಂದ ೫೦ ಹಾಳೆಗಳನ್ನು ಮುದ್ರಿಸಲು ಸಾಧ್ಯ. ಇದರ ಬೆಲೆ ಕೇವಲ ೫೦೦ ಡಾಲರ್ ಮಾತ್ರ.
*****
