ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ವೈದ್ಯಕೀಯ ಬರಹಗಳ ಅಕ್ಷಯ ಬಂಢಾರ

ಇಂದು ಜಗತ್ತಿನಾದ್ಯಂತ ಪ್ರತಿವರ್ಷ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸು. ೨೦ ಲಕ್ಷ ಬರಹಗಳು ನಾನಾ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳು ವೈದ್ಯಕೀಯಕ್ಕೆ ಸಂಬಂಧಪಟ್ಟ ಬರಹಗಳ ಬಗ್ಗೆ ವಿವರವಾದ ಮಾಹಿತಿ ಯಾವುದೇ ಸಮಯದಲ್ಲಿ ದೊರೆಯುವಂತಾಗಲು ಕಂಪ್ಯೂಟರ್‌ನ ಮೊರೆ ಹೋಗಬೇಕಿತ್ತು. ೧೯೬೪ರಲ್ಲಿ ಕಂಪ್ಯೂಟರ್‌ವೊಂದನ್ನು ವೈದ್ಯಕೀಯಕ್ಕೆ ಸಹಾಯಕರ ರೂಪದಲ್ಲಿ ಬಳೆಸಲಾಯಿತು. ಇದಕ್ಕಾಗಿಯೇ ‘ಇಂಡೆಕ್ಸ್ ಮೆಡಿಕಸ್’, ಎಂಬ ಸಾಪ್ಟವೇರ್‌ಅನ್ನು ಸಿದ್ದಪಡಿಸಲಾಯಿತು. ಈ ಸಾಫ್ಟ್‌ವೇರ್ ಅನ್ನು ವೈದ್ಯಕೀಯ ಬರಹಗಳ ವಿಷಯಗಳ ಆಧಾರದ ಮೇಲೆ ಪಟ್ಟಿ ಮಾಡಲಾಯಿತು. ನಂತರದ ದಿನಗಳಲ್ಲಿ ಸುಧಾರಣೆಯನ್ನು ಪಡೆದ ಈ ಸಾಫ್ಟ್‌ವೇರ್ ಬರಹಗಳ ಪಟ್ಟಿಯ ಜೊತೆಗೆ ಪ್ರತಿಬರಹದ ವಿವರಗಳ ಸಂಪೂರ್ಣ ಮಾಹಿತಿ ನೀಡು ವಂತಾಯಿತು. ಸಾಫ್ಟ್‌ವೇರ್ ನಲ್ಲಾದ ಸುಧಾರಣೆಯೊಂದಿಗೆ ಅದರ ಹೆಸರೂ ಬದಲಾವಣೆ ಕಂಡು ಇಂಡೆಕ್ಸ್ ಮೆಡಿಕಸ್ನಿಂದ “ಮೆಡಾಲಾರ್ಸ್” ಎಂದಾಯಿತು. Medalars ಎಂಬುವುದು Medical Literature and Analysis and Retrieval System ಎಂಬುದರ ಸಂಕ್ಷಿಪ್ತರೂಪ.

೧೯೭೦ರ ನಂತರ ಮೆಡಾಲಾರ್ಸ್‌ನ ಉಪಯೋಗ ಜಗತ್ತಿನ ಯಾವುದೇ ಭಾಗದಲ್ಲಿ ಕುಳಿತು ಕಂಪ್ಯೂಟರನ ಮೇಲೆ ಕೇಬಲ್‌ಗಳ ಮೂಲಕ ಸಂಪರ್ಕಿಸಿ ಪಡೆಯುವಂತಾಗಲು ‘ಮೆಡೆಲೈನ್’ ಎಂಬ ಅಂತರರಾಷ್ಟ್ರೀಯ ಸೇವಾ ಜಾಲ ಪ್ರಾರಂಭವಾಯಿತು. ಇಂದು ಪ್ರಂಪಚದಾದ್ಯಂತ ವೈದ್ಯರು ತಮ್ಮ‌ಇಚ್ಚಾನುಸಾರ ಬೇಕಾದ ಬರಹಗಳನ್ನು ಈ ಕಂಪ್ಯೂಟರ್ ಯುಕ್ತ ವೈದ್ಯಕೀಯ ಬರಹಗಳ ಬಂಡಾರದಿಂದ ಹೆಕ್ಕಿ ತೆಗೆದು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವಂತಾಗಿದೆ. ಸು. ೩೪೦೦ ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವೈದ್ಯಕೀಯ ವಿಷಯಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಸು. ೫೦ ಲಕ್ಷ ಕ್ಕೂ ಹೆಚ್ಚು ಬರಹಗಳು (ಎಲ್ಲ ವಿವರಗಳೊಂದಿಗೆ) ಈ ಬರಹಗಳ ಬಂಡಾರದಲ್ಲಿ ಲಭ್ಯವಾಗುತ್ತವೆ, ಇದೊಂದು ವೈದ್ಯಕೀಯ ‘ವಿಶ್ವಕೋಶ’ವೆಂದೇ ಹೇಳಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಣ್ಣ ಬಂದಾವ ಹಣ್ಣ
Next post ಇದು ಎಂಥ ಶಾಪ

ಸಣ್ಣ ಕತೆ

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…