‘ಹೇಳಿ ಮುಗಿಯಲು ಬೇಕು ಸಾವಿರದೊಂದು ರಾತ್ರಿ’

‘ಹೇಳಿ ಮುಗಿಯಲು ಬೇಕು ಸಾವಿರದೊಂದು ರಾತ್ರಿ’

(ಅರಬಿ ಎಂಬ ಕಡಲು – ಪುಸ್ತಕದ ಓದು)

ಸುಮಾರು ವರ್ಷಗಳಿಂದ ಪದ್ಯ ಬರೆಯುತ್ತ ಬಂದಿರುವ ಕನಕ ಹಾ. ಮ ಇತ್ತೀಚೆಗೆ ‘ಅರಬಿ ಎಂಬ ಕಡಲು’ ಎಂಬ ಕವಿತಾ ಸಂಗ್ರಹ ಹೊರ ತಂದಿದ್ದಾರೆ. ಕನಕ ಕವಯಿತ್ರಿ. ಸಹಜಾಭಿವ್ಯಕ್ತಿಯಲ್ಲಿ ಸ್ವಂತಿಕೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳ ಬಯಸುವವರು. ‘ಸ್ತ್ರೀವಾದಿ’ ಎಂಬ ಹಣೆಪಟ್ಟಿಯನ್ನು ಇಷ್ಟಪಡದವರು. ಆ ವಾದ ಈ ವಾದಗಳೆಂಬ ಸರಳೀಕೃತ (Reductioist)ಮಾದರಿಗಳಿಂತ ಭಿನ್ನವಾಗಿರುವ ದಾರಿಗಳನ್ನು ಹುಡುಕುವ ಕನಕ ‘ಕವಿತೆ’ಯನ್ನು Passionನಿಂದ ಬರೆಯುವಂತರು.

‘ಗೊತ್ತು ಆನ್ನಿಸುವುದಿಲ್ಲ ಕವಿತೆ ಈ ಕ್ಷಣದಲ್ಲಿ ಯಾವುದು ಹುಟ್ಟುತ್ತದೆಯೋ ಅದು ಕವಿತೆ’ ಎಂದು ಕವಿ ಎಸ್. ಮಂಜುನಾಥ್ ಅವರು ಹೇಳಿದಂತೆ ಕನಕ ಅವರಿಗೂ ಆ ಕ್ಷಣದಲ್ಲಿ ಅವಿರ್ಭವಿಸುವ ತೀವ್ರತೆಯನ್ನು ಕವನಗಳಲ್ಲಿ ಹಿಡಿಯುವುದು ಮುಖ್ಯ. ಮತ್ತು ಅದು ಪೂರ್ಣ ಎಂದು ಕೊನೆಮುಟ್ಟಿಸುವುದರಲ್ಲಿ ಅವರಿಗೆ ಆಸಕ್ತಿ ಇಲ್ಲ. ಕವಿತೆ ಎನ್ನುವುದು ‘ಕೆಲವೊಮ್ಮೆ ಬಾಲದ ತುದಿ| ಕಿವಿ ಮಾತ್ರ ಕೈಗೆ ಸಿಕ್ಕಿ| ನುಣುಚಿ ಜಾರುವ ಬಿನ್ನಾಣಗಿತ್ತಿ’ ಎಂದು ಅವರು ಹೇಳುವುದರಲ್ಲೇ ಆ ಕ್ಷಣದ ಮೂರ್ತ ಅಮೂರ್ತತೆಗಳನ್ನೆಲ್ಲ ಕವಿತೆ ಹಿಡಿಯುವ ಕಷ್ಟವನ್ನು ವಿವರಿಸುವಂತಿದೆ. ಅರ್ಥವೆನ್ನುವುದು ಸ್ಥಿರಗೊಳಿಸಿ ನೋಡಿದಾಗ ಹೊಸತು ಕಾಣುವುದಿಲ್ಲ. ಅದನ್ನು Perpetual ಬದಲಾಯಿಸಿ ನೋಡುವುದರಲ್ಲಿ ಕನಕ ಕವಿತೆಗಳು ಸ್ವಲ್ಪಮಟ್ಟಿಗೆ ಪ್ರಯತ್ನಿಸುತ್ತವೆ.

‘being’ ಎನ್ನುವುದು ಇರುವಿಕೆಯಲ್ಲಿರುವ ಇಲ್ಲದಿರುವಿಕೆ ಇಲ್ಲದಿರುವಿಕೆಯು ಇರುವಿಕೆಯಲ್ಲಿಯೂ ಹೆಚ್ಚಾಗಿರುತ್ತದೆ ಎಂದು ಎಸ್. ಮಂಜುನಾಥ್ ವಿವರಿಸುತ್ತಾರೆ. ಕನಕ ಅವರ ಕವಿತೆಗಳಲ್ಲಿ ಶಬ್ಬವು ನಿಶ್ಶಬ್ದದಲ್ಲಿ ‘being’ ಅನ್ನು ಕಂಡುಕೊಳ್ಳುವಂತವು. ಝೆನ್ ಕತೆಯೊಂದು ಇಲ್ಲಿ ನೆನಪಾಗುತ್ತದೆ. ಒಂಟಿಕೈಯಿನ ಚಪ್ಪಾಳೆ ಸದ್ದನ್ನು ಆಲಿಸಲು ಬದುಕೆಲ್ಲ ಪ್ರಯತ್ನಿಸುವ ಶಿಷ್ಯನೊಬ್ಬ ಕೊನೆಯಲ್ಲಿ ‘ನಿಶ್ಶಬ್ದದ ಶಬ್ದ’ವನ್ನು ಅರಿಯುವಂತಾಗುತ್ತದೆ. ಹಾಗೆ ಮೌನದ ಬೆರಗಿಗೆ ಬದಕುವ ಕನಕ ‘ಮರ್ಮರದೊಳಗಿನ ಮೌನ’ವನ್ನು ಹುಡುಕುತ್ತಾರೆ. ವಾಜಾಳಿತನದಲ್ಲಿರುವ ನಿರ್ವಾತವನ್ನು ಕಂಡುಕೊಳ್ಳುತ್ತಾರೆ-

ಶತಮಾನದ ತುಂಬಾ ಘಟನೆಗಳ ದಾಖಲೆ
ಸಾಧನೆ, ಸಂಪರ್ಕ
ತಾವಿಲ್ಲ ಮೌನಕ್ಕೆ
(ಶತಮಾನದ ಸೊಲ್ಲು)

ಇದು ಮಾತಿಗಷ್ಟೇ ಅಲ್ಲ ‘ತೋರಿಕೆ’ಯೊಳಗಿನ ‘ನಿಜ’, ‘ನಿಜ’ದೊಳಗಿನ ‘ತೋರಿಕೆ’-
ಇದಕ್ಕೆ ಅನ್ವಯಿಸುತ್ತದೆ.
ದಾಟಿರಾದರೆ ತಿಳಿಸಿಬಿಡಿ
ನಾಟಕ ಬೇಡ
ಹೊರಟುಬಿಡುವ
(ದಾಟಿದರೆ)

ಆತ್ಮವೆಂದೂ ಬೆರೆಯದೇ ನಿಜದಲ್ಲಿ
ಅಗಲಿಕೆಯ ನೋವೂ ಇಲ್ಲ
(ವ್ಯಾಪಾರ)

ಮುಂಬೈ ಮಹಾನಗರವೆಂಬ ಜನನಿಬಿಡ ಪ್ರದೇಶದಲ್ಲಿ ಬದುಕುತ್ತಿರುವ ಕನಕ ಅವರಿಗೆ ‘being’ ಅನ್ನು ಹುಡುಕುವ ದಾರಿ ಎಂದರೆ ಪ್ರಕೃತಿ. ಪ್ರಕೃತಿ ಏಕಕಾಲಕ್ಕೆ ಅವರಿಗೆ ಮೂರ್ತ ಮತ್ತು ಅಮೂರ್ತ ವಾಸ್ತವ. ರಾತ್ರಿ, ಮಳೆ, ಆಕಾಶ ಕಡಲು, ಕತ್ತಲು, ಮರ- ಇವು ಪುನರಾವರ್ತಿತವಾಗಿ ಅವರ ಕವಿತೆಗಳಲ್ಲಿ ನುಗ್ಗಿ ಬರುತ್ತವೆ. ಮಹಾನಗರದ ಜನಸಾಂದ್ರತೆಯನ್ನು ಇವು ಕಡಿತಗೊಳಿಸುತ್ತವೆ. ಅರಬಿ ಎಂಬ ಕಡಲು ಹುಟ್ಟಿಸುವ ದಿಗಿಲು, ತವಕ, ತಲ್ಲಣಗಳು ಇಲ್ಲಿ ಮುಖ್ಯವಾಗುತ್ತವೆ. ಕಡಲು ಕಡಲಾಗಿ ಬರುವುದಕ್ಕೂ ‘ಆರಬಿಕಡಲಾಗಿ’ ಬರುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಕನಕನ ತಮ್ಮ ಅಸ್ತಿತ್ವವನ್ನು ಅರಬಿ ಕಡಲಿನ ಜೊತೆ ಗುರುತಿಸಿಕೊಳ್ಳುತ್ತಾರೆ. ಅಲ್ಲಿನ ನಿರ್ದಿಷ್ಟ ನೆನಪು, ವಿವರಗಳು ಕಾವ್ಯದ ಭೂ ದೃಶ್ಯವನ್ನು ಸೃಷ್ಟಿಸುತ್ತವೆ. ‘ಕಡಲಕೇರಿ ಬರುವ ಆಂಬಿಗ’, ‘ಮೀನು ಮಲ್ಲಿಗೆ ಮಾರಾಟ’, ‘ಕಂಬನಿಯನ್ನು ಇಬ್ಬನಿಯೆಂದು ಕರೆದು ಯಾರ್ಯಾರೋ ಬರೆಯುವ ಅಪೂರ್ಣ ಕವಿತೆಗಳು’- ಇವೆಲ್ಲ ಪ್ರಕೃತಿಯನ್ನು ಪರಿಭಾವಿಸುವಾಗಲೆ ಒಳಗೆ ಬರುವ ಚಿತ್ರಗಳು, ಪ್ರಕೃತಿಯ ಮೌನ, ನಿಗೂಢತೆಯಲ್ಲಿ ನಗರದ ಸದ್ದು, ನೆನಪುಗಳಲ್ಲಿಟ್ಟು ನೋಡುವ ಸಂಕೀರ್‍ಣತೆಯು ಇಲ್ಲಿದೆ.

ವೈದೇಹಿ ಆವರ ಕಥಗಳಲ್ಲಿ ಸ್ತ್ರೀಲೋಕವೊಂದು ಸೃಷ್ಟಿಯಾಗುವುದು ತಮ್ಮದೇ ಅನುಭವಗಳನ್ನು ಹೊರಜಗತ್ತಿಗೆ ಮುಟ್ಟಿಸುವ ವಿಶಿಷ್ಟ ಸಂವಹನದಲ್ಲಿ. ಸ್ವಂತದ ಚಿಪ್ಪು, ಹೊದ್ದುಕೊಂಡ ಮೃದ್ವಂಗಿ ಲೋಕ ಆದು. ಕನಕ ಅವರ ಕವಿತೆಗಳಲ್ಲು ಒಂದು ಸ್ವಂತದ ‘ಚಿಪ್ಪು’ ಇರುವ, ಒಳಗೆ ಮಿದುವಾಗಿ ಪಿತಿಪಿತಿ ಎನ್ನಿಸುವ ಜೀವದ ಚಲನೆ ಇದೆ. ಒಳಗೆ ಬಿಟ್ಟುಕೊಳ್ಳುವ ಹನಿಗಳಲ್ಲಿ ಯಾವುದು ಮುತ್ತಾಗುತ್ತದೆಯೋ ಎಂಬ ತವಕದಲ್ಲಿರುವ ಮೃದ್ವಂಗಿಯಂತೆ ಕವಯಿತ್ರಿಯ ಮನಸು. ಅವರು ಅನುಭವಿಸುವ ಪ್ರತಿಕ್ಷಣವು ಪೊರೆಬಿಟ್ಟು ಆರಿಸಿಕೊಳ್ಳಬೇಕೆಂಬುದು ಅವರ ಕವಿತೆಗಳ ಮಹತ್ವಾಕಾಂಕ್ಷೆ. ಅದು ಸಂವೇದನೆಯ ತೀವ್ರತರ ಭಾವ. ಆ ಮೊದಲೇ ಗುರುತಿಸಿದಂತೆ ‘ಕ್ಷಣ’ದಲ್ಲಿ ಆವೀರ್ಭವಿಸುವ ಆನುಭವ ಚರಿತೆಯೇ ಅವರ ಕಾವ್ಯದ ದಾರಿ.

ಕನಕ ಆರಿಸಿಕೊಳ್ಳುವ ವಿವರಗಳು ಭೌತಿಕ ಪ್ರಪಂಚದ್ದು. ‘ನೋಡುವ’, ‘ಕೇಳುವ’, ‘ತಗಲುವ’- ಇಂದ್ರಿಯಗಳ ಸಂವೇದನೆಗೆ ಸಂಬಂಧಪಟ್ಟಿದ್ದು. ಎಲ್ಲಾ ರೀತಿಯ ಆನುಭವಗಳಿಗೆ | ತೆರೆದುಕೊಳ್ಳುವ ಪಾರದರ್ಶಕತೆ ಇದಕ್ಕೆ ಬೇಕು. ಹಾಗಿಲ್ಲದಿದ್ದರೆ ಏನೊಂದೂ ಹಾಯ್ದು ಹೋಗದು. ಆದಕ್ಕಾಗಿ ‘ಸುಮ್ಮನೆ’ ಇದ್ದು ಅನುಭವಿಸುವ ಆಶಯ ವ್ಯಕ್ತವಾಗುತ್ತದೆ :
….. ಆ ಮರಗಳಲ್ಲಿ
ಅರಳುವ ಹೂವುಗಳು, ಅವುಗಳಲ್ಲಿನ ನೂರೆಂಟುಬಣ್ಣ
ಉದ್ದಕ್ಕೂ ಚೆಲ್ಲಾಡಜಿರುವಾಗ
ಸುಮ್ಮನೆ ನೋಡಬೇಕು ಅಷ್ಟೆ
(ಕೋರಿಕೆ)

ಸುಮ್ಮನಿರುವುದು ಅಭ್ಯಾಸವಾದರೆ
ಪ್ರೇಕ್ಷಕರಾಗುವುದು ಸುಲಭ
(ಚಂದ್ರನ ಬಿಸಿಲು)
ಹೀಗೆ ‘ಸುಮ್ಮನೆ’ ಪದ ಪುನರಾವರ್ತನೆಯುಗುವುದನ್ನು ಗಮನಿಸಬೇಕು : ಜೊತೆಗೆ ‘ಟೀಮಳೆ’ಯಂತಹ ಪದ್ಯಗಳಲ್ಲಿ ‘ಆ ಕ್ಷಣ’ ಹಬೆಯಾಡುವುದನ್ನು ನೋಡಬೇಕು. ಕಾವ್ಯ ಲೌಕಿಕ ವಿವರಗಳಲ್ಲಿ ಇಂದ್ರಿಯಗಳಿಗೆ ಹತ್ತಿರವಾಗಿ ಉಸಿರಾಡುವುದು ಇಂತಲ್ಲಿ ಅನುಭವಕ್ಕೆ ಬರುತ್ತದೆ. ಸಾಮಾನ್ಯ ವಿವರಗಳೇ ಇವರ ಕಾವ್ಯದ ಜೀವಾಳ : ಕಾವ್ಯವೆನ್ನುವುದು ಸತತ ಅನುಭವ ಅದಕ್ಕಾಗಿ ಮಹತ್ತರವಾದುದೇನೋ ಘಟಿಸುತ್ತದೆ ಎಂದು ಕಾದು ಕೂರಬೇಕಾಗಿಲ್ಲ.

ಖುಷಿಕೊಡಲು ಸಾಕು ದಿನನಿತ್ಯದ
ಸಾಮಾನ್ಯ ಸಹಜಗಳು
ಕಿಚಕಿಯಿಂದ ತೋರುವ ಆಕಾಶ
ಹದ್ದಿನ ಮುಲಾಜಿಲ್ಲದೆ ಹಾರುವ ಊಎಳ್ಳಕ್ಕಿ
ನೆಲದ ಮೇಲಿನ ಮಣ್ಣು
ಹೂ ಬಿಟ್ಟ ಮೇಫ್ಲವರ್
(ಕಲಿಯಬೇಕಾದದ್ದು)

ಇದೇ ರೀತಿ ಇರುವ ‘ಮಟಮಟಮಧ್ಯಾಹ್ನ’ದಂತಹ ಪದ್ಯಗಳೂ ಇಂದ್ರಿಯಗ್ರಾಹ್ಯ ಪ್ರಕೃತಿಯುಳ್ಳವ.

ಸ್ವಂತದ ಸ್ವಗತಗಳಿಂಗಿಂತ, ಹೊರಗಿನ ವಿವರಗಳನ್ನು, ಕ್ಷಣಗಳನ್ನೂ ಅನುಭವಿಸುವ ತವಕದಲ್ಲಿರುವ ಕವಯಿತ್ರಿ ಎಷ್ಟೇ graphic ಆದ ವಿವರಗಳನ್ನು ನೀಡಿದರೂ, ಅಸ್ಪಷ್ಟತೆಯನ್ನು (obscurity) ಉಳಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಕಾವ್ಯದ ಸಂಕೀರ್ಣತೆ ಹೆಚ್ಚಬಹುದು ಎಂದವರು ಭಾವಿಸಿರುವಂತೆ ಕಾಣುತ್ತದೆ. ‘ಆರಬಿ ಎಂಬ ಕಡಲು’ ಸಂಕಲನದಲ್ಲಿ ತುಂಡರಿಸಿರುವ ಸಾಲುಗಳು, ಇಷ್ಟೇ ಅಲ್ಲ ಇನ್ನೂ ಇದೆ ಎನ್ನುವುದರಲ್ಲೇ ಮುಗಿಯುವ ಸಾಲುಗಳು, ಅರೆಬರೆ ಬಳಸಿದ ಪದಗಳು- ಅರ್ಥದ ಅನ್ಯೂಹ ಸಂಭವಗಳಿಗೆ ಅವರು ಬಿಟ್ಟ Spaceಗಳೆಂದು ಭಾವಿಸಬಹುದಾದರೂ, ಕ್ಷಣದ
ಅನುಭವವೂ ಅರ್ಧಕ್ಕೆ ನಿಲ್ಲುವಾಗ ಗಕ್ಕನೇ ಕೊನೆಯಾಗಿಸುವ ಅಚ್ಚರಿಯೇ ಅವರ ಗುರಿಯೇ? ಎನ್ನಿಸಿಬಿಡುತ್ತದೆ. ಇನ್ನುಳಿದಂತೆ ಅವರು ಕೊಡವ ನುಡಿಚಿತ್ರಗಳು ಮನಸ್ಸಿನಲ್ಲಿ ನಿಲ್ಲುವಂತಿವೆ. ‘ಇನ್ಕ್ಯುಬೇಟರಿನಲ್ಲಿ ಈಗಷ್ಟೆ ಕೇಕಿನಂತೆ ಸಾಗಿ ಹೋದ ಹಸುಳೆ’, ‘ಕಡಲಗಾಳಿಯ ಬೆವರು’, ‘ಕತ್ತೆತ್ತಿದರೆ ಮೇಲೆ ಆಕಾಶ | ಗಟ್ಟಿಲೋಹದಂತಾ ಇರುಳು’- ಇಂತಹ ಪದಪುಂಜ ಮತ್ತು ಸಾಲುಗಳು ಮನಸ್ಸಿನಲ್ಲಿ ನಿಲ್ಲುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈ MONEY ಭಾರತ
Next post ಹತ್ತು ರೂ/ಗೆ ಹತ್ತು ಏಟು

ಸಣ್ಣ ಕತೆ

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys