ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು ನೋಡಿ ಕನಿಕರದಿಂದ ಹತ್ತು ರೂಪಾಯಿ ನೋಟ್ ಕೊಟ್ಟು ಕಳಿಸಿ “ಕೋತಂಬರಿ ಇದೆ ಬೇಡ” ಎಂದೆ. ಮಗು ನಗುನಗುತ್ತಾ ತಾಯಿಗೆ ಕೊಡಲು ಹೋದ ಮಗುವಿನ ಅಳು ಕಿವಿಗೆ ಬಿತ್ತು. “ಕೋತಂಬರಿ ಮಾರದೇ ದುಡ್ಡು ಕದ್ದು ತಂದಿರುವೆಯಾ?” ಎಂದು ಹತ್ತು ಬಾರಿ ಪುಟ್ಟ ಮಗುವಿನ ಬೆನ್ನಿಗೆ ರಪ ರಪ ಥಳಿಸಿದಳು. “ಕಟ್ಟು ಕೊತಂಬರಿ ತೆಗೆದು ಕೊಂಡಿದ್ದರೆ ಮಗುವಿಗೆ ತುಸು ಭಾರ ಕಡಿಮೆಯಾಗಿ ಏಟು ಬೀಳುತಿರಲಿಲ್ಲ” ಎಂದು ಮನವು ಮಮ್ಮಲ ಮರುಗಿತು.
*****