ಸಕ್ಕರೆ ಕಾಯಿಲೆಗೆ ಸಿದ್ದೌಷಧಿ

ಸಕ್ಕರೆ ಕಾಯಿಲೆಗೆ ಸಿದ್ದೌಷಧಿ

ನಾವು ದಿನನಿತ್ಯದಲ್ಲಿ ಸಕ್ಕರೆ ಕಾಯಿಲೆ ಉಳ್ಳವರ ಸ್ಥಿತಿಯನ್ನು ನೋಡಿ ‘ಅಯ್ಯೋಪಾಪ’ ಎನ್ನುತ್ತೇವೆ. ಹೋಳಿಗೆ ತಿನ್ನುವಂತಿಲ್ಲ. ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ. ಸಕ್ಕರೆರಹಿತ ಟೀ ಕಾಫಿಯನ್ನು ಗುಟುಕರಿಸುತ್ತ ಸಿಹಿಯನ್ನೇ ಉಪಯೋಗಿಸದ ಜನರಿದ್ದಾರೆ. ಮುಂದೊಂದು ದಿನ ಸಕ್ಕರೆ ಕಾಯಿಲೆ ಬರಬಾರದೆಂಬ ಭೀತಿಯಿಂದ ಮೊದಲೆ ಸಿಹಿಯನ್ನು ವರ್ಜಿಸುವರೂ ಇದ್ದಾರೆ. ಇದೊಂದು ತರಹ ನಿಸಾರ ಜೀವನ. ಈ ಕಾಯಿಲೆಗೆ ಕಹಿಯಾದ ಹಾಗಲಕಾಯಿ ಪಲ್ಯ, ಗೊಜ್ಜನ್ನೂ ಪ್ರತಿದಿನ ಬಳೆಸಿದರೆ ಈ ಕಾಯಿಲೆಗುಣ ಮುಖವಾಗುವುದೆಂದು ಕ್ರಿ.ಶ. ೬೫೦ ರಲ್ಲಿಯೇ ಪುರಾತನ ವೈದ್ಯ ಶುಶ್ರೂತ ಹೇಳಿದ್ದರು. ಆದರೆ ವರ್ಷಕ್ಕೆ ಒಂದೋ ಎರಡೋ ಬಾರಿ ಹಾಗಲ ಕಾಯಿಯನ್ನು ಉಪಯೋಗಿಸುವುದೇ ದುಸ್ತರ. ಕಹಿ ಕಹಿ. ವರ್ಷವಿಡೀ ದಿನದ ಪ್ರತಿ ಊಟ, ತಿಂಡಿಯಲ್ಲಿ ಹಾಗಲಕಾಯಿಯನ್ನು ಬಳೆಸಲು ಸುತಾರಾಂ ಸಾಧ್ಯವಿಲ್ಲ.

ಯುರೋಪಿನ ಸೊಜಿವಿಟ್ S.L..ಕಂಪನಿಯ ಆಹಾರ ತಜ್ಞರು ಹಾಗಲಕಾಯಿಯಲ್ಲಿ ಯಾವ ಔಷಧಿಗಳು ರಕ್ತದಲ್ಲಿನ ಮಿತಿಮೀರಿದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ಬಗ್ಗೆ ತೀವ್ರ ಸಂಶೋಧನೆ ನಡೆಯಿಸಿ ಕಡೆಗೆ “ಪಾಲಿಪೆಪ್ಟೈಡ್ಸ್”ಗಳನ್ನು ಪೌಡರ್ ಮಾಡಿ ಕಾಪ್ಯೂಲ್ಸ್ (ಗುಳಿಗೆಗಳು) ಗಳನ್ನು ಹೊರತಂದರು. ಇಂಥಹ ಗುಳಿಗೆಗಳನ್ನು ಮಧುಮೇಹಿಗಳು ಯಾವ ಕಹಿ ಇಲ್ಲದೇ ಮುಖ ಕಿವಿಚಿಕೊಳ್ಳದೇ ಈ ಮಾತ್ರೆಗಳನ್ನು ನುಂಗಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಈ ಮಾತ್ರೆಗಳಲ್ಲಿ ಹಾಗಲಕಾಯಿ ಜೀವಸತ್ವ ಅಂತರ್ಗತವಾಗಿರುತ್ತದೆ. ಈ ಔಷಧಿಯ ಅಂಶಗಳು ನಮ್ಮ ದೇಹದಲ್ಲಿ Insulin ಉತ್ಪತ್ತಿ ಹೆಚ್ಚಿಸುವುದಲ್ಲದೇ ದೇಹದ ಪ್ರತಿಯೊಂದು ಜೀವಕೋಶಗಳಲ್ಲಿ ಗ್ಲೂಕೋಸ್ Metabolisms ಕ್ರಿಯೆಯನ್ನು ಹೆಚ್ಚಿಸುತ್ತವೆ. ಇನ್ನೊಂದು ಔಷಧಿ ಎಂದರೆ “ಮಧುನಾಶಿನಿ” ಎಲೆಯಲ್ಲಿನ ಔಷಧೀಯ ಅಂಶ. ನಾಲಿಗೆ ಹಾಗೂ ಕರುಳಗಳ ಗ್ಲೂಕೋಸ್ Receptor ಗಳನ್ನೂ ತಡೆ ಹಿಡಿದು ತದನಂತರ ಆಹಾರದಲ್ಲಿನ ಗ್ಲೂಕೋಸನ್ನು ದೇಹಕ್ಕೆ ಸೇರದಂತೆ ಮಾಡಿ ರಕ್ತದ ಗ್ಲೂಕೊಸ್ ಮಟ್ಟವು ನಿಯಂತ್ರಿಸುವುದು. ಈ ಔಷಧಿಯೂ ಕೂಡ ಕ್ಯಾಪ್ಸೂಲ್‌ರೂಪದಲ್ಲಿ Sweet A way ಹೆಸರಿನಲ್ಲಿ ದೊರೆಯುತ್ತದೆ.

ಮೇಲಿನ ಎರಡು ತರದ ಮಾತ್ರೆಗಳು ಭಾರತದಲ್ಲಿ ಸಿಗುತ್ತದೆ. ಸಕ್ಕರೆ ಕಾಯಿಲೆಯನ್ನು ಆರಂಭದಲ್ಲಿಯೇ ಮುಂದೂಡಲು, ನಿಯಂತ್ರಿಸಲು ಒಳ್ಳೆಯ ಅವಕಾಶಕ್ಕಾಗಿ ಈ ಮಾತ್ರೆಗಳನ್ನು ಬಳಸಿದರೆ ದಿವ್ಯೌಷಧವಾಗಿ ಕಾಯಿಲೆ ಗುಣವಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಲ ಮೊದಲೊ ? ಮಲ ಮೊದಲೋ ? ನಿರ್ಣಯವುಂಟೆ ?
Next post ಈ ಕನ್ನಡ ನೆಲದಿ ಜನಿಸಿ

ಸಣ್ಣ ಕತೆ

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಮೇಷ್ಟ್ರು ರಂಗಪ್ಪ

  ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…