ಗಂಡ: ಹೊಸದಾಗಿ ಮದುವೆ ಆದ ದಂಪತಿಗಳು ಸ್ವೇಚ್ಛೆಯಾಗಿ ಮಾತಾಡುತ್ತಾ ಇದ್ದರು. “ನೀನು ನನ್ನನ್ನು ಒಂದೇ ಸಲಕ್ಕೆ ಹೇಗೆ ಒಪ್ಪಿದೆ ಎಂದು ಕೇಳ ಬಹುದಾ?”
ಹೆಂಡತಿ: “ಅಗತ್ಯವಾಗಿ ಕೇಳಿ. ಹೇಳಿ ಕೇಳಿ, ನಿಮ್ಮ ಅಪ್ಪ ಅಜ್ಜ ಎಲ್ಲರೂ ಹೊಟೆಲ್ ವ್ಯಾಪಾರ ನಡೆಸಿದವರು. ನಿಮ್ಮ ಅಣ್ಣಂದಿರೂ ಸಹ ಹೊಟೆಲ್ ತೆರೆದು ನಿಮ್ಮನ್ನು ಸಹಾಯಕ್ಕಾಗಿ ಉಳಿಸಿಕೊಂಡಿದ್ದಾರೆಂದು ತಿಳಿದೆ. ಹೇಗೂ ಅಡಿಗೆ ಮನೆ ಯೋಗಕ್ಷೇಮವೆಲ್ಲಾ ನಿಮಗೆ ತಿಳಿದಿರುತ್ತದೆಯೆಂದು ನಂಬಿ ನಿಮ್ಮನ್ನು ಲಗ್ನವಾದೆ. ಅಷ್ಟಕ್ಕೂ ಈಗ ನೀವೆ ಅಡಿಗೆಮನೆ ಉಸ್ತುವಾರಿ ನಮ್ಮ ಮನೆಯಲ್ಲಿ ನೋಡಿಕೊಳ್ಳುತ್ತಿದ್ದೀರಲ್ಲಾ!”
***

Latest posts by ಪಟ್ಟಾಭಿ ಎ ಕೆ (see all)