“ಗೃಹಶಾಂತಿಯ ರಹಸ್ಯ ಏನೆಂದು ಕೇಳಬಹುದೆ?” ಎಂದು ಹೊಸದಾಗಿ ಲಗ್ನವಾದ ಯುವಕ ಪುರೋಹಿತರನ್ನು ಕೇಳಿದ.
ಪುರೋಹಿತರು: “ಅದು ಬಹಳ ಸೂಕ್ಷ್ಮ ವಿಚಾರ, ನೀನು ಒಂದಲ್ಲ ಅಂತ ಹತ್ತು ಸಾರಿ ಅವಳಿಗೆ ಹೇಳು. ಒಂದುವೇಳೆ ಆಗಲೂ ಆವಳು ನಿನ್ನ ಮಾತು ಕೇಳದಿದ್ದರೆ ನೀನೇ ಅವಳು ಹೇಳಿದ ಹಾಗೆ ಕೇಳು. ಗೃಹಶಾಂತಿ ತಾನಾಗಿಯೇ ಆಗ ಒದಗುತ್ತೆ!”
***