ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ ಬೀರ್‌ಬಲ್ ಬಂದ. “ನೋಡು ಬೀರ್‌ಬಲ್, ನನ್ನ ಹೆಂಡತಿ ಅಷ್ಟೂ ಮಾವಿನ ಹಣ್ಣುಗಳನ್ನು ಒಬ್ಬಳೇ ತಿಂದು ಸಿಪ್ಪೆಗೊರಟೆಗಳನ್ನು ಹೇಗೆ ಗುಡ್ಡೆ ಹಾಕಿದ್ದಾಳೆ.” ಎಂದು ಛೇಡಿಸಿದ. “ಜಹಾಪನ. ರಾಣಿಯವರು ಹಣ್ಣುತಿಂದು ಸಿಪ್ಪೆಗೋರಟೆಗಳನ್ನು ಬಿಟ್ಟಿರುವುದು ಸತ್ಯ. ಅದರೆ ತಾವು ಅವುಗಳನ್ನೂ ತಿಂದು ಪೂರೈಸಿದ್ದೀರಲ್ಲಾ!” ಅಂದ.
***