ಮಹಾಬೆಳಗನೆ ನೋಡಿ,
ಮನವ ನಿಮ್ಮ ವಶವ ಮಾಡಿ,
ತನುವ ಮರೆದು, ಧನವ ಜಂಗಮಕ್ಕಿತ್ತು,
ತಾನು ಬಯಲ ದೇಹಿಯಾದಲ್ಲದೆ
ನಿಜಮುಕ್ತಿ ಇಲ್ಲವೆಂದುರ ನಮ್ಮ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****