ಅರಿತಿದನು ಪೇಳ್ವುದದು ಬಲು ಕಷ್ಟವೋ
ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ
ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ
ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ
ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ – ವಿಜ್ಞಾನೇಶ್ವರಾ
*****