ಎನ್ನ ಸತ್ಯಳಮಾಡಿ, ನಿತ್ಯವ ತೋರಿ,
ತತ್ವವೆಂಬುದನರುಹಿದಿರಿ.
ಮತ್ಸರವ ಹಿಂಗಿಸಿದಿರಿ.
ಆಸೆರೋಷವನೆ ಹಿಂಗಿಸಿದಿರಿ.
ಮಾತುಮಥನವನೆ ಕೆಡಿಸಿದಿರಿ.
ವ್ಯಾಕುಳವನೆ ಕೆಡಿಸಿ,
ಜ್ಯೋತಿಯ ಬೆಳಗ ತೋರಿದಿರಯ್ಯ
ಚನ್ನಮಲ್ಲೇಶ್ವರನು ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ