ಹೆಮ್ಮೆಗೋ safety ಗೋ
ಕನ್ನಡಿ ಬೀರು ತಂದರೂ
ಒಳಗಡೆಯೆಲ್ಲು ಕಚಡಾ ತುಂಬಿ
ಮತ್ತೆ ಕನ್ನಡಿ ಹಿಡಿದು
ಮೇಕಪ್ ಮಾಡುವ,
ತಲೆದಿಂಬು ಕೆಳಗೆ
ಆಭರಣ ಇಡುವ,
ಇವಳ ಕೆಲಸ ನೋಡಿ ನೋಡಿ
ಒಣ ಧೀಮಾಕಿನ
ಹೆಣ್ಣಾಗಬೇಡ ಎಂದು
ಗೋಗರೆದೂ ಗೋಗರೆದೂ
ಸುಸ್ತಾಗುತ್ತಿದ್ದೇನೆ.
ಕಳ್ಳಽ ಒಮ್ಮೆ ಬಂದು
ಧಮಕೀನಾದರೂ ಕೊಡಪ್ಪ
ಅಥವಾ
ಪತ್ರಿಕೆಗೆ ಬೀರು ಮಾರಾಟ
ಎಂದು
ಜಾಹಿರಾತು ಆದರೂ
ಕೊಡಲೋ….
ಹೇಳಿ ನೀವೇ.
*****