
ಒಂದು ದಂಡೆಗೆ ಸಿಸಿಲಿಯ ದೀಪಮಾಲೆ, ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ; ಒ೦ದು ದಂಡೆಗೆ ಹರಿತಶಿಲಾಪ್ರಕಾಶಸ್ತ೦ಭ, ಇನ್ನೊಂದು ದಂಡೆಗೆ ಮಿಂಚಿನ ಮಂಗಳಾರತಿ; ಬೆಳಕು ಬಂದು ಕಡಲ-ಹಕ್ಕಿಗೆ ತೋರಣ ಕಟ್ಟಿತಿಲ್ಲಿ, ಅನಂತರೂಪಗಳ ಧರಿಸಿತಿಲ್ಲಿ! ದಿನ್ನೆಯಿಂದ...
(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ) ಕತ್ತಲೆಯ ಬರವನ್ನು ಸಾರುವಂತಹ ಕೊಂಬು ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,- ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ; ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ ನುಡಿದಿದ್ದರಾಂಗ್ಲ ಕವ...
ಕಾಣದ ಹುಣ್ಣಿಮೆಯ ಚಂದ್ರಮನ ಕಾಣಲೆಳಸಿ ಮೇರೆವರಿಯುತಿದೆ ಸಾಗರವು. ಸೂರ್ಯಕಿರಣಕೆ ಸೋತ ಶ್ಯಾಮನೀಲ ಸಲಿಲವೆಲ್ಲ ತೆರೆತೆರೆಯಾಗಿ ಹೊಳೆವ ಬೆಳ್ಳಿಯಾಗುತಿದೆ, ತಿಳಿಹಸಿರಾಗುತಿಹುದು. ಅಪರಂಪಾರವಾದ ಆಕಾರವೆ! ಇಂತೇಕೆ ಅಬ್ಬರಿಸಿ ಎದ್ದು ನಿಂತೆ? ನೀನೆತ್ತಿದ...
ಎಂತು ಬಿದ್ದೇಳುತಿಹುದು ನೋಡು ಬಿತ್ತರದ ವಾರಿಧಿಯು! ಎಲ್ಲಿಹರೀ ಮಂಥನವ ಗೆಯ್ವ ದೇವತೆಗಳು? ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ: ಕಾಣುವದು ಮಂಥನವೊಂದು; ಅಲ್ಲುದಿಸಿದ ಚಂದ್ರಮನೊಂದು,- ಕಡಲಾಳವನುಗಿದು ಒಂದ ತುಂಬುವೆರೆ ತಾನು! ಮುಗಿಲು ಕದ್ದ ರ...
ತೆರೆಗಳೊಡನೆ ತಿಳ್ಳಿಯಾಡಲು ಬಂದ ಗಾಳಿಗೆ ಬುರುಗಿನ ಬೆಳ್ಳಿಯನಿತ್ತು, ಕಳಿಸಿದ ಸಮುದ್ರರಾಜ: ಬಿಡಿಸಲು ಬಂದ ಹರಿಗೆ ಕಮಲವನೇರಿಸಲಿಲ್ಲವೆ ಗಜೇಂದ್ರ? ಮುಗಿಲೊಳಗಿಂದ ಬೆಳಕು ಕರೆವ ದಿನಮಣಿಗೆಂದು ಬೆಳ್ಳಿ ಕಟ್ಟನೊಂದನಣಿಗೊಳಿಸಿದನು ಸಾಗರಪತಿಯು,- ಆಕಾಶದರ...
ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು ಸಾಹಸವನೊಂದ ಕೈಕೊಂಡು ನಡೆದೆ: ಕೊನೆಗಾಣಿಸುವ ಶಕ್ತಿಯ ಕೊಡು,- ಸಮುದ್ರನಾಥ! ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು: ಇಂದಿನ ನನ್ನ ಏಕಾಂತವಾಸವನು ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆ...
ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ; ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ: ಅವನೆಲ್ಲ ಕಾಣಲಿಲ್ಲ ನಾನು. ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ, ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ: ಅವನೆಲ್ಲ ಪಡೆಯಲಿಲ್ಲ ನಾನು. ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲ...
ಕಹಿ! ಕಹಿ! ಕಪ್ಪು ಕಪ್ಪು! ಉಪ್ಪುಪ್ಪು ನಿನ್ನ ನೀರು ಓ! ಸಮುದ್ರ! ನಿನ್ನ ನೀರು ಉಪ್ಪಾದುದೇಕೆ? ಮೂರು ಲೋಕದ ನೀರು ಮುಪ್ಪುರಿಗೊಂಡು ಉಪ್ಪಾಯಿತೇನು! ಮಾವಿನಕಾಯಿಯೊಲು ಮಾನವಜಾತಿಯ ಭೂತಚೇಷ್ಟೆಗಳನು-ಪೂರ್ವೇತಿಹಾಸವನು- ನೆಲದಣುಗರು ನೆನೆಯಲೆಂದು ಕಾಲಪ...
ಅಹಾ! ನೀರೆ! ದೇವದಾನವರು ಮೇರುಪರ್ವತವನಿಟ್ಟು ಮ೦ಥಿಸಿದಾಗ, ಆದಿಶೇಷನ ಹಚ್ಚಿ ಕಡೆದಾಗ, ವಿಷಜ್ವಾಲೆಯ ನುಂಗಿ ಅಣಿಗೊಂಡಾಗ,- ಕಲ್ಪತರುವನಿತ್ತೆ! ಕಾಮಧೇನುವನಿತ್ತೆ! ಚಂದ್ರನನ್ನು ಕರುಣಿಸಿದೆ! ಲಕ್ಷ್ಮಿಯನ್ನು ಧಾರೆಯೆರೆದೆ! ಅಮೃತವನ್ನು ಬೀರಿದೆ! ಎಣೆ...







