ಬೇಸಿಗೆ ಬಂತೆಂದಿರೆ ಸೆಕೆ! ಸೆಕೆ! ತಂಪನ್ನೀಯುವ ಕಾಡುಗಳನ್ನು ಕಡಿಯುತ್ತ ಭೂಮಿಯಲ್ಲಿ ಸುರಂಗತೋಡುತ್ತ ಭೂಮಿಗೆ ರಾಸಾಯನಿಕಗಳನ್ನು ಮಿಶ್ರಮಾಡುತ್ತ ಹೋಗುವುದರಿಂದ ಭೂಮಿ ಹೆಚ್ಚು ಉಷ್ಣತೆಯನ್ನು ಹೊಂದುತ್ತದೆ. ಈಗಾಗಲೇ ಭೂಮಿಯ ತಾಪಮಾನ (ಉಷ್ಟತೆ) ಹೆಚ್ಚಾದ ಪರಿಣಾಮವಾಗಿ ಸಮುದ್ರ ಪ್ರದೇಶ ಹಾಗೂ ಅರಣ್ಯವಲಯಗಳಿಂದ ಅಧಿಕ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗಲಿದೆ. ಭೂಮಿಯ ಉಷ್ಣತೆಯ ಪ್ರಮಾಣ ಸದ್ಯದ ಮಟ್ಟದಲ್ಲಿಯೇ ಹೆಚ್ಚಾಗುತ್ತ ಹೋದರೆ ೨೦೧೦ ನೆ ಇಸ್ವಿಗೆ ಭೂಮಂಡಲದ ತಾಪಮಾನ ೭.೫ ಡಿಗ್ರಿ ಸೆಂಟಿಗ್ರೇಡ್‌ಗೆ ಏರಲಿದೆ, ಎಂದು ಇಂಗ್ಲೆಂಡಿನ ಬ್ರಾಕ್ನೆಲ್‌ನ ಹಾಡ್ಲೆ ಕೇಂದ್ರದ ಸಂಶೋಧಕರು ಜಿಯೋಫಿಸಿಕಲ್ ರಿಸಾರ್ಚ್ ಲೆಟರ್ಗೆ ಬರೆದ ಲೇಖನವೊಂದರಲ್ಲಿ ತಿಳಿಸಿದ್ದಾರೆ. ಈ ಪ್ರಮಾಣಕ್ಕಿಂತಲೂ ತಾಪಮಾನ ಹೆಚ್ಚಾದರೆ ಅಶಕ್ತರಿಗೆ ತೊಂದರೆ ಕಾಣಿಸಿಕೊಳ್ಳಬಹುದು, ಬೆಳೆಗಳು ಸುಟ್ಟು ಹೋಗಬಹುದು. ಒಣಗಿದ ತರೆಗೆಲೆಗಳು ತನ್ನಿಂದ ತಾನೆಹೊತ್ತಿಕೊಳ್ಳಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
*****