ಅದೇನು ಕಾರಣವೆಂದರೆ ಘನಕ್ಕೆ ಘನವಾದರು.
ಮನಕ್ಕೆ ಮನವಾದರು.
ತನುವಿಂಗೆ ತನುವಾದರು.
ನಡೆನುಡಿಗೆ ಚೈತನ್ಯವಾದರು.
ನೋಡುವುದಕ್ಕೆ ನೋಟವಾದರು.
ಕೂಡುವದಕ್ಕೆ ಲಿಂಗವಾದರು.
ಈ ಒಳಹೊರಗೆ ಬೆಳಗುವ ಬೆಳಗು
ನೀವೆಯಾದ ಕಾರಣ ನಿಮ್ಮ ಪಾದದಲ್ಲಿ
ನಾ ನಿಜಮುಕ್ತಳಾದೆನಯ್ಯ ಚನ್ನಮಲ್ಲೇಶ್ವರ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****